ಮಂಗಳವಾರ, ಫೆಬ್ರವರಿ 25, 2020
19 °C
ಶಿವಮೊಗ್ಗದಲ್ಲಿ ಶೀಘ್ರದಲ್ಲೇ ಜೈವಿಕ ಸುರಕ್ಷಾ ಪ್ರಯೋಗಾಲಯ ಸ್ಥಾಪನೆ

ಕೋವಿದ್‌–19 ಪತ್ತೆಗೂ ಬಿಎಸ್‌ಎಲ್‌–3

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ದಕ್ಷಿಣ ಭಾರತದ ಮೊದಲ ಜೈವಿಕ ಸುರಕ್ಷಾ ಪ್ರಯೋಗಾಲಯವನ್ನು (ಬಿಎಸ್‌ಎಲ್‌–3) ಶಿವಮೊಗ್ಗದಲ್ಲಿ ಸ್ಥಾಪಿಸಲು ರಾಜ್ಯಮಟ್ಟದ ತಾಂತ್ರಿಕ ಸಮಿತಿ ಪರಿಶೀಲಿಸುತ್ತಿದ್ದು, ಈ ಕೇಂದ್ರ ಆರಂಭವಾದರೆ ಮಂಗನಕಾಯಿಲೆ, ‘ಕೋವಿದ್‌–19’ ಸೇರಿ ಮಾರಣಾಂತಿಕ ವೈರಸ್‌ಗಳ ತ್ವರಿತ ಪತ್ತೆಗೆ ಸಹಕಾರಿಯಾಗಲಿದೆ.

ಸಿಎಂ ಯಡಿಯೂರಪ್ಪ ಈಗಾಗಲೇ ಪ್ರಯೋಗಾಲಯ ಸ್ಥಾಪನೆಗೆ ₹15 ಕೋಟಿ ಘೋಷಿಸಿದ್ದಾರೆ. ಪ್ರಯೋಗಾಲಯದ ಮಾದರಿ ಕುರಿತು ವಿಜ್ಞಾನಿಗಳು, ವೈದ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಾಂತ್ರಿಕ ಸಮಿತಿ ಒಪ್ಪಿಗೆ ದೊರೆತ ತಕ್ಷಣ ಪ್ರಯೋಗಾಲಯ ಸ್ಥಾಪನೆ ಕಾರ್ಯ ಆರಂಭವಾಗಲಿವೆ.

ಪ್ರಸ್ತುತ ಶಿವಮೊಗ್ಗದಲ್ಲಿರುವ ಪರಿಮಾಣು ಕ್ರಿಮಿ ಸಂಶೋಧನಾ ಕೇಂದ್ರದಲ್ಲಿ ಮಂಗನ ಕಾಯಿಲೆ ರೋಗ ಲಕ್ಷಣ ಕಾಣಿಸಿಕೊಂಡ ರೋಗಿಗಳ ರಕ್ತದ ಮಾದರಿ ಪರೀಕ್ಷೆ ನಡೆಸಲಾಗುತ್ತಿದೆ. ಜೈವಿಕ ಸುರಕ್ಷಾ ಪ್ರಯೋಗಾಲಯ ಆರಂಭವಾದರೆ ಮಂಗನ ಕಾಯಿಲೆ ಸೇರಿದಂತೆ ಎಲ್ಲ ರೋಗಗಳ ಪರೀಕ್ಷೆಗಳೂ ಇಲ್ಲೇ ನಡೆಯಲಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)