ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರದಲ್ಲಿ 52 ಮಂದಿ ಗುಣಮುಖ, 42 ಜನ ಸೋಂಕಿತ

1,682ಕ್ಕೆ ತಲುಪಿದ ಪ್ರಕರಣಗಳ ಸ‌ಂಖ್ಯೆ, 1,248 ಜನರು ಸೋಂಕು ಮುಕ್ತ
Last Updated 18 ಆಗಸ್ಟ್ 2020, 14:08 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಮಂಗಳವಾರ 42 ಮಂದಿಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ. 52 ಮಂದಿ ಸೋಂಕು ಮುಕ್ತರಾಗಿದ್ದಾರೆ. ಸಾವಿನ ಪ‍್ರಕರಣ ವರದಿಯಾಗಿಲ್ಲ.

ಇದರೊಂದಿಗೆ ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 1,682ಕ್ಕೆ ಏರಿದೆ. ಗುಣಮುಖರಾದವರ ಸಂಖ್ಯೆ 1,248ಕ್ಕೆ ಹೆಚ್ಚಿದೆ. 403 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ, 148 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 31 ಮಂದಿ ಕೋವಿಡ್‌ ಸೋಂಕಿತರು ಮೃತಪಟ್ಟಿದ್ದಾರೆ.ಕೋವಿಡ್‌ನಿಂದಾಗಿ 19 ಮಂದಿ, ಸೋಂಕು ಇದ್ದರೂ, ಇತರ ಅನಾರೋಗ್ಯದಿಂದಾಗಿ 12 ಮಂದಿ ಪ್ರಾಣಕಳೆದುಕೊಂಡಿದ್ದಾರೆ.

ಐಸಿಯುನಲ್ಲಿ ದಾಖಲಾಗಿರುವವರ ಸಂಖ್ಯೆ ಮಂಗಳವಾರ ಹೆಚ್ಚಿದೆ. 30 ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಗಳವಾರ 836 ಮಂದಿಯ ಗಂಟಲು ದ್ರವದ ಮಾದರಿ ಪರೀಕ್ಷೆ ನಡೆಸಲಾಗಿದೆ. ಆರ್‌ಟಿಪಿಸಿಆರ್‌ನಲ್ಲಿ 512, ರ‍್ಯಾಪಿಡ್‌ ಆ್ಯಂಟಿಜೆನ್‌ ಕಿಟ್‌ ಮೂಲಕ 322 ಹಾಗೂ ಟ್ರು ನಾಟ್‌ ವಿಧಾನದಲ್ಲಿ ಇಬ್ಬರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದೆ. 795 ಮಂದಿಯ ವರದಿ ನೆಗೆಟಿವ್‌ ಬಂದಿದೆ. 41 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನೊಂದು ಪ್ರಕರಣ ಬೆಂಗಳೂರಿನಲ್ಲಿ ಖಚಿತವಾಗಿದೆ.

ಜಿಲ್ಲೆಯಲ್ಲಿ ಈವರೆಗೆ 32,968 ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದೆ. 31,278 ಮಂದಿಯ ವರದಿ ನೆಗೆಟಿವ್‌ ಬಂದಿದೆ.

ಸೋಂಕಿತ 42 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನ 22, ಕೊಳ್ಳೇಗಾಲದ ಒಂಬತ್ತು, ಗುಂಡ್ಲುಪೇಟೆಯ ಎಂಟು, ಯಳಂದೂರಿನ ಇಬ್ಬರು ಮತ್ತು ಹನೂರು ತಾಲ್ಲೂಕಿನ ಒಬ್ಬರು ಇದ್ದಾರೆ.

ಗುಣಮುಖರಾದ 52 ಜನರಲ್ಲಿ ಕೊಳ್ಳೇಗಾಲ ತಾಲ್ಲೂಕಿನ 18, ಚಾಮರಾಜನಗರ ತಾಲ್ಲೂಕಿನ 16, ಗುಂಡ್ಲುಪೇಟೆಯ ಒಂಬತ್ತು, ಹನೂರಿನ ಐವರು, ಯಳಂದೂರು ತಾಲ್ಲೂಕಿನ ಇಬ್ಬರು, ಇತರ ಜಿಲ್ಲೆಯ ಇಬ್ಬರು ಇದ್ದಾರೆ.

ಚಾಮರಾಜನಗರದಲ್ಲಿ ಸಕ್ರಿಯ ಪ್ರಕರಣ ಹೆಚ್ಚು

ಐದು ತಾಲ್ಲೂಕುಗಳ ಪೈಕಿ ಚಾಮರಾಜನಾರದಲ್ಲಿ ಸಕ್ರಿಯ ಪ್ರಕರಣಗಳು ಹೆಚ್ಚಿವೆ. ಮಂಗಳವಾರದ ಅಂಕಿ ಅಂಶಗಳ ಪ್ರಕಾರ, ತಾಲ್ಲೂಕಿನ 139 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

ಕೊಳ್ಳೇಗಾಲ ತಾಲ್ಲೂಕಿನಲ್ಲಿ 92, ಗುಂಡ್ಲುಪೇಟೆ 84, ಯಳಂದೂರು ತಾಲ್ಲೂಕಿನ 45 45, ಹನೂರು ತಾಲ್ಲೂಕಿನಲ್ಲಿ 42 ಹಾಗೂ ಹೊರ ಜಿಲ್ಲೆಯ ಒಂದು ಸಕ್ರಿಯ ಪ್ರಕರಣ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT