ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಚಾಮರಾಜನಗರ: ಗ್ರಾ.ಪಂಗಳಲ್ಲಿ ಆಧಾರ್‌ ಸೇವೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್‌ ಸೇವೆ ಆರಂಭವಾಗಿದ್ದು, ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಆಧಾರ್‌ ನೋಂದಣಿ (ಬಾಲ ಆಧಾರ್‌) ಹಾಗೂ ಆಧಾರ್‌ ಕಾರ್ಡ್‌ಗೆ ಮೊಬೈಲ್‌ ಸಂಖ್ಯೆ ಜೋಡಣೆ ಮಾಡುವ ಸೇವೆ ಮಾತ್ರ ಇಲ್ಲಿ ಲಭ್ಯವಿದೆ. 

ಇನ್ನು ಮುಂದೆ ಪೋಸ್ಟ್‌ ಮ್ಯಾನ್‌ಗಳ ಮೂಲಕ ಆಧಾರ್‌ ಮೊಬೈಲ್‌ ಜೋಡಣೆ ಸೇವೆಯನ್ನೂ ಪಡೆಯಬಹುದು. 

ಉಳಿದಂತೆ  ಇ–ಆಡಳಿತ ಕೇಂದ್ರ, ಅಟಲ್‌ಜೀ ಜನ ಸ್ನೇಹಿ ಕೇಂದ್ರ, ಬ್ಯಾಂಕ್‌ ಹಾಗೂ ಅಂಚೆ ಕಚೇರಿ ಸೇರಿದಂತೆ ಜಿಲ್ಲೆಯಾದ್ಯಂತ 34 ಕೇಂದ್ರಗಳಲ್ಲಿ ಆಧಾರ್‌ ನೋಂದಣಿ ಹಾಗೂ ತಿದ್ದುಪಡಿ ಸೇವೆ ಒದಗಿಸಲಾಗುತ್ತಿದೆ. ಈ ಕೇಂದ್ರಗಳಲ್ಲಿ, ನೋಂದಣಿ, ಬಯೊಮೆಟ್ರಿಕ್‌ ಪರಿಷ್ಕರಣೆ, ಮೊಬೈಲ್ ಸಂಖ್ಯೆಯ ಜೋಡಣೆ ಸೇರಿದಂತೆ ಆದಾರ್‌ಗೆ ಸಂಬಂಧಿಸಿದ ಎಲ್ಲ ಸೇವೆಗಳನ್ನು ಪಡೆಯಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿ ದೇವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಹೆಚ್ಚಿನ ಮಾಹಿತಿಯನ್ನು ವೆಬ್‌ಸೈಟ್ uidai.gov.in, ಟೋಲ್ ಫೀ ನಂ: 1947 ಹಾಗೂ ಇ-ಮೇಲ್ ಐಡಿ: uid.cha@karanataka.gov.in ನಲ್ಲಿ ಪಡೆಯಬಹುದು ಎಂದು ಅವರು ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು