ಶನಿವಾರ, ಜೂಲೈ 4, 2020
27 °C

ಬಂಡೀಪುರ ಸಫಾರಿ: ಮೊದಲ ದಿನ ನೀರಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಕೋವಿಡ್-19 ಲಾಕ್ ಡೌನ್ ಕಾರಣದಿಂದ 70 ದಿನಗಳ ಹಿಂದೆ ಸ್ಥಗಿತಗೊಂಡಿದ್ದ ಬಂಡೀಪುರ ಸಫಾರಿ ಸೋಮವಾರ ಆರಂಭವಾಯಿತು.

ಮೊದಲ ದಿನ ಪ್ರವಾಸಿಗರ ಪ್ರತಿಕ್ರಿಯೆ ನೀರಸವಾಗಿತ್ತು. ಬೆಳಿಗ್ಗೆ 11 ಮಂದಿ ಹಾಗೂ ಮಧ್ಯಾಹ್ನದ ಮೇಲೆ 36 ಮಂದಿ ಸಫಾರಿಗೆ ತೆರಳಿದರು. ಜಿಪ್ಸಿ ಹಾಗೂ ಬಸ್‌ಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಕಡ್ಡಾಯವಾಗಿ ಪಾಲಿಸಲಾಯಿತು.  ಸಫಾರಿಗೆ ತೆರಳುವವರ ಕೈಗೆ ಸ್ಯಾನಿಟೈಸರ್ ಹಾಕಿ ವಾಹನ ಹತ್ತಿಸಲಾಯಿತು. ಜಿಪ್ಸಿಯಲ್ಲಿ ನಾಲ್ಕು ಮಂದಿ ಬಸ್‌ನಲ್ಲಿ 15 ಮಂದಿಯನ್ನು ಕರೆದೊಯ್ಯಲಾಯಿತು. 

ಬೆಳಿಗ್ಗೆಯೇ ಸಫಾರಿ ಕೌಂಟರ್‌ಗೆ ಎಸಿಎಫ್ ರವಿಕುಮಾರ್ ಮತ್ತು ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ಭೇಟಿ ಮಾಡಿ ಪರಿಶೀಲಿಸಿದರು.

‘ಮೊದಲ ದಿನ ಹೆಚ್ಚಿನ ‍ಪ್ರವಾಸಿಗರು ಬಂದಿರಲಿಲ್ಲ. ದಿನ ಕಳೆದಂತೆ ಜನರ ಸಂಖ್ಯೆ ಹೆಚ್ಚಲಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಚಾಮರಾಜನಗರ ತಾಲ್ಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿರುವ ಸಫಾರಿ ಕೇಂದ್ರವೂ ತೆರೆದಿದ್ದು, ಸಫಾರಿ ಸೇವೆ ಆರಂಭವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ತೆರೆಯದ ರೆಸಾರ್ಟ್‌ಗಳು: ಗುಂಡ್ಲುಪೇಟೆ, ಬಂಡೀಪುರದ ಸುತ್ತಮುತ್ತಲಿನ ರೆಸಾರ್ಟ್‌ಗಳು ಸೋಮವಾರ ತೆರೆದಿರಲಿಲ್ಲ. 

ಭರಚುಕ್ಕಿ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು