ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಬಿಜೆಪಿ: ಪ್ರಧಾನ ಕಾರ್ಯದರ್ಶಿ, ಮಂಡಲ ಅಧ್ಯಕ್ಷರ ನೇಮಕ

Published 5 ಫೆಬ್ರುವರಿ 2024, 14:19 IST
Last Updated 5 ಫೆಬ್ರುವರಿ 2024, 14:19 IST
ಅಕ್ಷರ ಗಾತ್ರ

ಚಾಮರಾಜನಗರ: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್‌.ನಿರಂಜನ್‌ಕುಮಾರ್‌ ಅವರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಿಗೆ ಮೂವರನ್ನು ಹಾಗೂ ಮಂಡಲಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. 

ಈ ಹಿಂದೆ ಉಪಾಧ್ಯಕ್ಷರಾಗಿದ್ದ ವೃಷಬೇಂದ್ರಪ್ಪ, ಎಸ್‌ಸಿ ಮೋರ್ಚಾ ಅಧ್ಯಕ್ಷರಾಗಿದ್ದ ಪ್ರಕಾಶ್‌ ಮೂಡ್ನಾಕೂಡು ಮತ್ತು ಒಬಿಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಹದೇವಸ್ವಾಮಿ ಹೊನ್ನೂರು ಅವರಿಗೆ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿದೆ.

ಮಂಡಲ ಅಧ್ಯಕ್ಷರು: ಶಿವರಾಜು ಅವರನ್ನು ಚಾಮರಾಜನಗರ ನಗರ ಮಂಡಲಕ್ಕೆ, ಗ್ರಾಮಾಂತರಕ್ಕೆ ಮಹೇಶ್‌ ಅರಕಲವಾಡಿ, ಗುಂಡ್ಲುಪೇಟೆಗೆ ಮಹದೇವಪ್ರಸಾದ್‌ ಸಿ, ಯಳಂದೂರು ಮಂಡಲಕ್ಕೆ ಎನ್‌.ಅನಿಲ್‌, ಕೊಳ್ಳೇಗಾಲ ನಗರಕ್ಕೆ ಎಸ್‌.ವಿ.ಪರಮೇಶ್ವರಯ್ಯ, ಕೊಳ್ಳೇಗಾಲ ಗ್ರಾಮಾಂತರಕ್ಕೆ ಕೆ.ಎನ್‌.ನಾಗೇಶ್‌, ಹನೂರಿಗೆ ಕೆ.ಪಿ.ವೃಷಬೇಂದ್ರಸ್ವಾಮಿ ಹಾಗೂ ಮಹದೇಶ್ವರ ಬೆಟ್ಟ ಮಂಡಲಕ್ಕೆ ಕೆ.ರಾಜು ಅವರನ್ನು ನೇಮಕ ಮಾಡಲಾಗಿದೆ. 

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಸೂಚನೆ ಮೇರೆಗೆ ಪಕ್ಷದ ಸಂಘಟನಾತ್ಮಕ ದೃಷ್ಟಿಯಿಂದ ಈ ನೇಮಕಾತಿ ಮಾಡಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ನಿರಂಜನ್‌ಕುಮಾರ್‌ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT