ಶನಿವಾರ, ಜನವರಿ 28, 2023
13 °C

ಕೂಡ್ಲೂರು: ಬಿಜೆಪಿ ಬೂತ್‌ ವಿಜಯ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೂಡ್ಲೂರು ಗ್ರಾಮದ 37ನೇ ಬೂತ್‌ನಲ್ಲಿ ಬಿಜೆಪಿ ಬೂತ್ ವಿಜಯ ಅಭಿಯಾನ ಗುರುವಾರ ಅದ್ಧೂರಿಯಾಗಿ ನಡೆಯಿತು. 

ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಗ್ರಾಮದ ಮುಖ್ಯ ದ್ವಾರದಿಂದ ರಾಮಮಂದಿರವರೆಗೆ ಮೆರವಣಿಗೆ ನಡೆಸಿದರು. ಅಭಿಯಾನದಲ್ಲಿ ಬೂತ್ ಅಧ್ಯಕ್ಷರು, ಪ್ರಭಾರಿಗಳು, ಬೂತ್ ಸಮಿತಿಯ ಸದಸ್ಯರು ಸೇರಿದಂತೆ 28 ಮಂದಿ ಪೇಜ್ ಪ್ರಮುಖರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕರ್ತರು ಹಾಗೂ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು, ‘ಮುಂಬರುವ ಚುನಾವಣೆಗಳ ದೃಷ್ಟಿಯಿಂದ ‘ಮೇರ್ ಬೂತ್ ಮಜಬೂತ್’ ಎಂಬ ಘೋಷ ವಾಕ್ಯದೊಂದಿಗೆ ಬಿಜೆಪಿಯನ್ನು ಸದೃಢವಾಗಿ ಸಂಘಟನೆ ಮಾಡಿ, ನಮ್ಮ ಬೂತ್ ಬಿಜೆಪಿಗೆ ಬಲಿಷ್ಠವಾಗಿದೆ ಎಂಬುದನ್ನು ಸಾಬೀತು ಪಡಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗುವುತ್ತಿದೆ’ ಎಂದರು.

‘ಚಾಮರಾಜನಗರ ಕ್ಷೇತ್ರದ 239 ಬೂತ್‌ಗಳನ್ನು ಸದೃಢಗೊಳಿಸುವ ಕಾರ್ಯ ಇದೇ 12ರವರೆಗೆ ನಡೆಯಲಿದೆ. ಬಿಜೆಪಿ ಎಲ್ಲ ಪ್ರಮುಖರು ಪಕ್ಷದ ಸಂಘಟನೆಗೆ ಅವಿರತವಾಗಿ ಶ್ರಮಿಸಬೇಕು. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಗಳು ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳ ಬಗ್ಗೆ ಬೂತ್ ಮಟ್ಟದಲ್ಲಿ ಪ್ರತಿ ಮತದಾರರಿಗೂ ಮನವರಿಕೆ ಮಾಡಿಕೊಟ್ಟು ಮತ್ತೆ ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು’ ಎಂದರು.

ಮುಖಂಡರಾದ ಸಿ.ಎನ್. ಬಾಲರಾಜು, ಹನುಮಂತಶೆಟ್ಟಿ, ಬೂತ್ ಅಧ್ಯಕ್ಷ ಮಧುಸೂಧನ್, ಮುಖಂಡರಾದ ಕೆ.ಪಿ. ಜಗದೀಶ್, ಯ.ಮಹದೇವಶೆಟ್ಟಿ, ಸಂತೋಷ್, ಪದಾಧಿಕಾರಿಗಳು ಹಾಗು ಗ್ರಾಮಸ್ಥರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.