ಯಳಂದೂರು: ಪಟ್ಟಣದ ಪೂರ್ಣಯ್ಯ ಬಂಗಲೆಯ ಮುಂಭಾಗದಲ್ಲಿರುವ ವಿಷ್ಣು ಹಾಗೂ ಜಿನಮೂರ್ತಿಯ ವಿಗ್ರಹ ಗತಕಾಲದ ವೈಭವ ಸಾರುತ್ತಿದೆ. ಶಿಲೆಯ ರೂಪ ಪಡೆದಿರುವ ಆನೆ ಕಣ್ಮನ ಸೆಳೆಯುತ್ತದೆ. ಒಳಾಂಗಣದಲ್ಲಿ ಮೈಸೂರು ಅರಸರ ಚಿತ್ರಕಲೆ ಚಿತ್ತಾಕರ್ಷಕವಾಗಿದೆ. ಗೋಡೆಗೆ ಒರಗಿ ನಿಂತ ಶಿಲ್ಪಗಳು ಇತಿಹಾಸದ ಕಥೆ ಹೇಳುತ್ತವೆ. ಇಂತಹ ಐತಿಹಾಸಿಕ ಕಥನ ಒಡಲಲ್ಲಿಟ್ಟುಕೊಂಡಿರುವ ಪ್ರಾಚ್ಯವಸ್ತು ಸಂಗ್ರಹಾಲಯ ಸದ್ಯ ಬಣಗುಡುತ್ತಿದೆ.

ಪಟ್ಟಣದ ದಿವಾನ್ ಪೂರ್ಣಯ್ಯ ಬಂಗಲೆಯನ್ನು ಜಿಲ್ಲೆಯ ಪ್ರಥಮ ವಸ್ತು ಸಂಗ್ರಹಾಲಯವನ್ನಾಗಿ 2013ರಲ್ಲಿ ರೂಪಿಸಲಾಯಿತು. ಜಿಲ್ಲೆಯಲ್ಲಿ ಸಿಗುವ ಶಾಸನ, ಶಿಲ್ಪಕಲೆ ಕುರುಹುಗಳು, ವೀರಗಲ್ಲು, ಮಾಸ್ತಿಕಲ್ಲು, ಮೈಸೂರು ಒಡೆಯರ ಅಪರೂಪದ ವಸ್ತುಗಳು, ಕವಿ, ಕಲಾವಿದರ ರಚನೆಗಳನ್ನು ಸಂಗ್ರಹಿಸಿ ಸಂಗ್ರಹಾಲಯದಲ್ಲಿ ಇಡುವ ಪ್ರಯತ್ನ ನಡೆದಿದೆ.

ಚಾರಿತ್ರಿಕ ಮಹತ್ವ ಹಾಗೂ ಆಳರಸರ ಚರಿತ್ರೆಗಳನ್ನು ತಿಳಿಸುವ ಉದ್ದೇಶದಿಂದ ನಿರ್ಮಿಸಿರುವ ವಸ್ತು ಸಂಗ್ರಹಾಲಯ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿಲ್ಲ ಎನ್ನುತ್ತಾರೆ ನಾಗರಿಕರು.

ಪೂರ್ಣಯ್ಯ ಬಂಗಲೆಗೆ ಶತಮಾನದ ಇತಿಹಾಸ ಇದೆ. ಕೃಷ್ಣಮಾಚಾರ್ಯ ಪೂರ್ಣಯ್ಯನವರು (1746-1812) ಹೈದರಾಲಿ, ಟಿಪ್ಪು, ಮೈಸೂರು ಅರಸರ ದಿವಾನರಾಗಿದ್ದರು. ಅವರ ಮರಿ ಮೊಮ್ಮಗ ಕೃಷ್ಣಮೂರ್ತಿ ದಿವಾನರಾಗಿದ್ದ ಕಾಲದಲ್ಲಿ ಹಲವು ಅಂತಸ್ತುಗಳ ಕಟ್ಟಡ ನಿರ್ಮಿಸಲಾಯಿತು.

‘ಶತಮಾನ ಪೂರೈಸಿದ ಈ ಕಟ್ಟಡ ಈಗಲೂ ಇಂಡೋ ಸಾರ್ಸನಿಕ್ ಶೈಲಿಯಲ್ಲಿ ಇದ್ದು, ಚಿರಕೆ ಗಾರೆ ಮತ್ತು ತೇಗದ ಮರಗಳಿಂದ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಗೋಡೆಗಳಲ್ಲಿ ಮಳೆಯ ನೀರು ಇಳಿದು, ಅಲ್ಲಲ್ಲಿ ಚಕ್ಕೆ ಉದುರುತ್ತಿದೆ. ಮಳೆಯ ನೀರು ರಾಚುತ್ತಿದ್ದು ಪ್ರಾಚ್ಯವಸ್ತು ಇಲಾಖೆ ಗಮನ ಹರಿಸಬೇಕು’ ಎನ್ನುತ್ತಾರೆ ಕಂದಹಳ್ಳಿ ರಮೇಶ್.

ಪ್ರವಾಸಿ ತಾಣ: ಯಳಂದೂರು ಮಾರ್ಗವಾಗಿ ಪ್ರತಿನಿತ್ಯ ನೂರಾರು ಪ್ರವಾಸಿಗರು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಇಲ್ಲಿಂದಲೇ ಮಲೆ ಮಹದೇಶ್ವರ ಬೆಟ್ಟ ಹಾಗೂ ರಾಜ್ಯ ರಾಜಧಾನಿಗೆ ತೆರಳುತ್ತಾರೆ. ಬಂಗಲೆ ಸುತ್ತಮುತ್ತ ಗೌರೀಶ್ವರ ಮಂದಿರ, ಬಳೆ ಮಂಟಪ, ಪಂಚಲಿಂಗ ಸಂಕೀರ್ಣ, ಷಡಕ್ಷರರ ಗದ್ದುಗೆ, ಭೂ ವರಾಹ ದೇವಾಲಯ, ಜೈನರ ತಪೋ ತಾಣ ವೀಕ್ಷಿಸಬಹುದು.

‘ವಸ್ತು ಸಂಗ್ರಹಾಲಯದಲ್ಲಿನ ಕಲಾಕೃತಿ, ಮನೋಹರ ಮೂರ್ತಿ, ಶಿಲ್ಪ, ತೀರ್ಥಂಕರರ ವಿಗ್ರಹ, ಹೊಯ್ಸಳ ಕಾಲದ ಶಾಸನ ಹಾಗೂ ಮಂಟಪದಲ್ಲಿ ರಾರಾಜಿಸುವ ಕಲ್ಲಿನ ಬಳೆಗಳ ರಚನೆಯಲ್ಲಿ ವೈವಿಧ್ಯತೆ ವೀಕ್ಷಿಸಬಹುದು’ ಎನ್ನುವರು ಪಟ್ಟಣದ ಸುರೇಶ್.

ಇಂದು ವಸ್ತು ಸಂಗ್ರಹಾಲಯ ದಿನ: ‘ವೇಗವಾಗಿ ಬದಲಾಗುತ್ತಿರುವ ಸಮುದಾಯದಲ್ಲಿ ವಸ್ತು ಸಂಗ್ರಹಾಲಯಗಳ ಭವಿಷ್ಯ’ ಎಂಬುದು 2025ರ ವಸ್ತು ಸಂಗ್ರಾಹಲಯ ದಿನದ ಧ್ಯೇಯ. ಸಮಾಜದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಇಂಟರ್ ನ್ಯಾಷನಲ್ ಕೌನ್ಸಿಲ್ ಆಫ್ ಮೂಸಿಯಮ್ಸ್ (ಐಸಿಒಎಂ) 1977ರಿಂದ ವಸ್ತು ಸಂಗ್ರಾಹಲಯ ದಿನವನ್ನು ಆಚರಿಸುತ್ತಿದೆ.

ವಸ್ತು ಸಂಗ್ರಹಾಲಯಕ್ಕೆ ಬೇಕಿದೆ ಕಾಯಕಲ್ಪ ಪ್ರಚಾರದ ಕೊರತೆ; ಪ್ರವಾಸಿಗರ ಸೆಳೆಯಲು ವಿಫಲ ಅಪರೂಪದ ವಸ್ತು ಒಳಗೊಂಡಿರುವ ವಸ್ತು ಸಂಗ್ರಹಾಲಯ

ವಿದ್ಯಾರ್ಥಿಗಳನ್ನು ಸೆಳೆಯಲು ಕ್ರಮ ಪ್ರಾಥಮಿಕ ಹಂತದಿಂದ ಪದವಿ ಹಂತದವರೆಗೆ ವಿದ್ಯಾರ್ಥಿಗಳನ್ನು ಇತ್ತ ಸೆಳೆಯಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗೆ ₹ 5 ಮತ್ತು ಇತರರಿಗೆ ₹ 10 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಚರಿತ್ರೆಯ ಕುರುಹುಗಳನ್ನು ಕಲಾ ಗ್ಯಾಲರಿಗಳಲ್ಲಿ ಸಂರಕ್ಷಿಸಲಾಗುವುದು. ಶಾಲಾ ಪ್ರವಾಸದ ಸಂದರ್ಭ ಬಂಗಲೆಗೆ ಭೇಟಿ ನೀಡುವಂತೆ ಪ್ರೋತ್ಸಾಹಿಸಲು ಯೋಜನೆ ರೂಪಿಸಲಾಗಿದೆ. ಎಂ.ಸುನಿಲ್ ಕುಮಾರ್ ಮೇಲ್ವಿಚಾರಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.