ಚಾಮರಾಜನಗರ: ತಾಲ್ಲೂಕಿನ ಹರದನಹಳ್ಳಿ ಹಾಗೂ ಬಂಡಿಗೆರೆ ಗ್ರಾಮದಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಗ್ರಾಮದ ಐತಿಹಾಸಿಕ ಸ್ಥಳವಾದ ಗೋಮುಖ ಕ್ಷೇತ್ರದಿಂದ ಅಲಂಕೃತ ವಾಹನದಲ್ಲಿ ಭಾರತ ಮಾತೆಯ ಭಾವಚಿತ್ರ ಇರಿಸಿ ಮಂಗಳವಾದ್ಯಗಳ ಸಹಿತ ಮೆರವಣಿಗೆ ನಡೆಯಿತು. ಹಾಲರವೆ ಉತ್ಸವದೊಂದಿಗೆ ಜಾನಪದ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು. ರಾಷ್ಟ್ರೀಯ ಹೆದ್ದಾರಿ ಮೂಲಕ ಬಂಡಿಗೆರೆ ಗ್ರಾಮದ ಮೂಲಕ ಸಾಗಿದ ಮೆರವಣಿಗೆ ಐತಿಹಾಸಿಕ ದಿವ್ಯಲಿಂಗೇಶ್ವರ ಸ್ವಾಮಿ ದೇವಸ್ಧಾನದ ಆವರಣ ತಲುಪಿತು.

ಬಳಿಕ ಸಾವರ್ಕರ್ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಮುಖಂಡ ವಿಜಯ ಕುಮಾರ್ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಡಾ.ಸುಧಾಕರ್
ಹೂಸಳ್ಳಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹರದನಹಳ್ಳಿ, ಬಂಡಿಗೆರೆ ಗ್ರಾಮಸ್ಥರು, ಯಜಮಾನರು, ಸ್ಥಳೀಯ ಜನಪ್ರತಿನಿಧಿಗಳು, ಹಿಂದೂ ಸಂಘದ
ಕಾರ್ಯಕರ್ತರು, ಗ್ರಾಮಸ್ಧರು ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.