ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ಮಾದಪ್ಪನ ಪರಿಷೆಗೆ ತಂಪಿನ ಆರತಿ ಸ್ವಾಗತ

Published 15 ಮಾರ್ಚ್ 2024, 15:46 IST
Last Updated 15 ಮಾರ್ಚ್ 2024, 15:46 IST
ಅಕ್ಷರ ಗಾತ್ರ

ಚಾಮರಾಜನಗರ: ಶಿವರಾತ್ರಿ ಹಬ್ಬದಂದು ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಜಾತ್ರೆಯಲ್ಲಿ ಭಾಗವಹಿಸಿ ವಾಪಸ್ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಗೆ ಬಂದ ಪರಿಷೆಯನ್ನು ಬಡಾವಣೆಯ ಮಹಿಳೆಯರು ಶುಕ್ರವಾರ ರಾತ್ರಿ ತಂಪಿನ ಆರತಿಯೊಂದಿಗೆ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ನಡೆದ ಜಾನಪದ ಕಲಾತಂಡಗಳ ಮೆರವಣಿಗೆ ಗಮನಸೆಳೆಯಿತು. 

ಐದು ದಿನಗಳ ಶಿವರಾತ್ರಿ ಜಾತ್ರೆಗೆ ಬಡಾವಣೆಯಿಂದ ಮಹಿಳೆಯರು, ಯುವಕರು ತೆರಳಿದ್ದರು. ಜಾತ್ರೆಯಲ್ಲಿ ಭಾಗವಹಿಸಿ, ಮತ್ತೆ ಪರಿಷೆ ವಾಪಸ್ ಆಗುತ್ತಿದ್ದಂತೆ ಬಡಾವಣೆಯ ಮಹಿಳೆಯರು ಪರಿಷೆಗೆ ತಂಬಿಟ್ಟು ತಂಪಿನ ಆರತಿಯೊಂದಿಗೆ ವಿವಿಧ ಬೀದಿಗಳಲ್ಲಿ ಮೆರವಣಿಗೆ ಮಾಡಿ ಮನೆಗೆ ಮನೆಗೆ ಸ್ವಾಗತಿಸುವುದು ಸಂಪ್ರದಾಯ.

ಯುವ ಮುಖಂಡ ಶ್ರೀನಿಧಿ ಕುದರ್‌, ನಗರಸಭಾ ಸದಸ್ಯರಾದ ಚಿನ್ನಮ್ಮ, ಕಲಾವತಿ, ಅರಿಹಂತ್ ಫುಲ್ಸ್ ಮಾಲೀಕ ದಿಲೀಪ್ ಕುದರ್, ಯಜಮಾನರಾದ ಶಿವಣ್ಣ, ಗುರುಸ್ವಾಮಿ, ನಾಗರಾಜು, ಮುಖಂಡರಾದ ಗುಡ್ಡಯ್ಯ, ಪೆಂಡಾಲ್ ಬಸವಣ್ಣ, ಬಸವಣ್ಣ, ಅಂಬೇಡ್ಕರ್ ಯುವಕರ ಸಂಘದ ಉಮೇಶ್, ಸಖಿ, ಸಿದ್ದು, ಗೌತಮ್, ಶ್ರೀಕಂಠ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT