ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ಕುಂದು ಕೊರತೆ

Published : 12 ಜುಲೈ 2023, 13:05 IST
Last Updated : 12 ಜುಲೈ 2023, 13:05 IST
ಫಾಲೋ ಮಾಡಿ
Comments

ರಸ್ತೆಯಿಂದ ಮರಳು ತೆರವುಗೊಳಿಸಿ

ಚಾಮರಾಜನಗರ: ನಗರದ ಚಾಮರಾಜೇಶ್ವರಸ್ವಾಮಿ ರಥೋತ್ಸವದ ದಿನ ರಥವನ್ನು ಎಳೆಯಲು ಸುಲಭವಾಗಲು ತೇರು ಸಾಗುವ ರಸ್ತೆಗಳಿಗೆ ಮರಳು ಹಾಕಲಾಗಿತ್ತು. ಉತ್ಸವ ನಡೆದ ಬಳಿಕ ರಸ್ತೆಗೆ ಹಾಕಿದ್ದ ಮರಳನ್ನು ತೆಗೆಯಬೇಕಿತ್ತು. ಆದರೆ, ನಗರಸಭೆ ಈ ಕೆಲಸ ಮಾಡಿಲ್ಲ. 

ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವವರಿಗೆ ಅದರಲ್ಲೂ ದ್ವಿಚಕ್ರವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಕೆಲವರು ದ್ವಿಚಕ್ರವಾಹನದಿಂದ ಬಿದ್ದು ಗಾಯಗೊಂಡಿದ್ದಾರೆ.  ವಾಹನಗಳು ಓಡಾಡುವಾಗ ದೂಳು ಏಳುತ್ತಿದ್ದು, ಪಾದಚಾರಿಗಳು ಹಾಗೂ ಸುತ್ತಮುತ್ತಲಿನ ಅಂಗಡಿವರಿಗೆ, ಗ್ರಾಹಕರಿಗೆ ಕಿರಿಕಿರಿಯಾಗುತ್ತಿದೆ. ಇನ್ನಾದರೂ ನಗರಸಭೆ ಅಧಿಕಾರಿಗಳು, ಮರಳು ತೆರೆವುಗೊಳಿಸಲು ಕ್ರಮವಹಿಸಬೇಕು.

– ಮುರಳಿ, ಚಾಮರಾಜನಗರ

ಸಂಚಾರಕ್ಕೆ ತೊಂದರೆ

ಸಂತೇಮರಹಳ್ಳಿ: ಇಲ್ಲಿನ ಪೊಲೀಸ್ ಠಾಣೆ ಹಿಂಭಾಗದ ಬಡಾವಣೆಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ಗಾಗಿ ನೆಲ ಅಗೆದು ಬಿಡಲಾಗಿದೆ.

ಜಲ ಜೀವನ್ ಮಿಷನ್ ಯೋಜನೆಯಲ್ಲಿ ಆರು ತಿಂಗಳ ಹಿಂದೆ ನೆಲ ಅಗೆಯಲಾಗಿದೆ. ಇಲ್ಲಿಯವರೆಗೆ ಪೈಪ್ ಅಳವಡಿಸುವ ಕೆಲಸ ನಡೆದಿಲ್ಲ. ಅಗೆದಿರುವ ನೆಲವನ್ನು ಮುಚ್ಚಿಲ್ಲ. ಇದರಿಂದ ನಿವಾಸಿಗಳು ನಡೆದಾಡಲು ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಗ್ರಾಮ ಪಂಚಾಯಿತಿಯವರು ಅಗೆದಿರುವ ನೆಲವನ್ನು ಮುಚ್ಚಿ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕು.

–ಮಹದೇವಸ್ವಾಮಿ, ಸಂತೇಮರಹಳ್ಳಿ

ಹೊನ್ನೂರು –ಕೆಸ್ತೂರು ರಸ್ತೆ ಗುಂಡಿಮಯ

ಯಳಂದೂರು: ತಾಲ್ಲೂಕಿನ ಹೊನ್ನೂರು ಗ್ರಾಮದಿಂದ ಕೆಸ್ತೂರು ಹೊಸೂರು ಗ್ರಾಮಗಳಿಗೆ ತೆರಳುವ ರಸ್ತೆ ಅಲ್ಲಲ್ಲಿ ಗುಂಡಿ ಬಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಈ ರಸ್ತೆಯಲ್ಲಿ ಕಬ್ಬಿನ ಲಾರಿಗಳು ಹಾಗೂ ಖಾಸಗಿ ಬಸ್‌ಗಳು ಸಂಚರಿಸುತ್ತವೆ. ವಿವಿಧ ತಾಲ್ಲೂಕಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ದ್ವಿಚಕ್ರ ಸವಾರರು ತಗ್ಗು ಬಿದ್ದ ರಸ್ತೆಯಲ್ಲಿ ಸಂಚರಿಸುವುದು ಸವಾಲಾಗಿದೆ. ಮಳೆಗಾಲದಲ್ಲಿ ನೀರು ನಿಂತು ಓಡಾಟಕ್ಕೆ ದುಸ್ತರವಾಗಿದೆ. ಹಲವರು ಬಿದ್ದು ಗಾಯಗೊಂಡ ಉದಾಹರಣೆಗಳೂ ಇಲ್ಲಿವೆ. ಸಂಬಂಧಪಟ್ಟವರು ರಸ್ತೆಯನ್ನು ದುರಸ್ತಿ ಮಾಡಲು ಕ್ರಮ ವಹಿಸಬೇಕು. 

–ಸೋಮಣ್ಣ, ಕೆಸ್ತೂರು, ಯಳಂದೂರು ತಾಲ್ಲೂಕು

ಚಾಲಕ, ನಿರ್ವಾಹಕ ಇಬ್ಬರೂ ಇರಲಿ

ಕೊಳ್ಳೇಗಾಲ: ಚಾಮರಾಜನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಯಡಬೆಟ್ಟದಲ್ಲಿರುವ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಬಸ್‌ಗಳ ಕೊರತೆ ಕಾಡುತ್ತಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಡಕಾಗಿದೆ. 

ಈಗ ಎರಡು ಬಸ್‌ಗಳಲ್ಲಿ  ಒಬ್ಬರೇ ಚಾಲಕ ಕಂ ನಿರ್ವಾಹಕರಾಗಿದ್ದಾರೆ. ಒಬ್ಬರೇ ಎರಡು ಜವಾಬ್ದಾರಿ ನಿರ್ವಹಿಸಬೇಕಾಗಿದೆ. ಇದರಿಂದ ಬಸ್‌ಗಳ ಓಡಾಟ ವಿಳಂಬವಾಗುತ್ತಿದೆ. ಆಸ್ಪತ್ರೆಯಲ್ಲಿ ಸಂಜೆ 4 ಗಂಟೆಯ ನಂತರ ಹೊರರೋಗಿ ವಿಭಾಗದ ಸೇವೆಗಳು ಸಿಗುವುದಿಲ್ಲ. ಹಾಗಾಗಿ, ಹೆಚ್ಚುವರಿ ಬಸ್‌ಗಳನ್ನು ಹಾಕುವುದರ ಜೊತೆಗೆ ಈಗ ಇರುವ ಬಸ್‌ಗಳಿಗೆ ಚಾಲಕ, ನಿರ್ವಾಹಕ ಇಬ್ಬರನ್ನೂ ನಿಯೋಜಿಸಬೇಕು.

–ಮಹೇಶ್, ಕೊಳ್ಳೇಗಾಲ

ಸಂತೇಮರಹಳ್ಳಿ ಪೊಲೀಸ್‌ ಠಾಣೆ ಹಿಂಭಾಗದ ಬಡಾವಣೆಯಲ್ಲಿ ಪೈಪ್‌ಲೈನ್‌ಗಾಗಿ ನೆಲ ಅಗೆದು ಹಾಗೆಯೇ ಬಿಡಲಾಗಿದೆ
ಸಂತೇಮರಹಳ್ಳಿ ಪೊಲೀಸ್‌ ಠಾಣೆ ಹಿಂಭಾಗದ ಬಡಾವಣೆಯಲ್ಲಿ ಪೈಪ್‌ಲೈನ್‌ಗಾಗಿ ನೆಲ ಅಗೆದು ಹಾಗೆಯೇ ಬಿಡಲಾಗಿದೆ
ಯಳಂದೂರು ತಾಲ್ಲೂಕಿನ ಹೊನ್ನೂರು ಕೆಸ್ತೂರು ಮಾರ್ಗದ ರಸ್ತೆ ತಗ್ಗು ಬಿದ್ದಿದ್ದು ಅಪಾಯ ಆಹ್ವಾನಿಸುತ್ತಿದೆ
ಯಳಂದೂರು ತಾಲ್ಲೂಕಿನ ಹೊನ್ನೂರು ಕೆಸ್ತೂರು ಮಾರ್ಗದ ರಸ್ತೆ ತಗ್ಗು ಬಿದ್ದಿದ್ದು ಅಪಾಯ ಆಹ್ವಾನಿಸುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT