ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಉಪೇಂದ್ರ ವಿರುದ್ಧ ಮುಂದುವರಿದ ಪ್ರತಿಭಟನೆ

Published 28 ಆಗಸ್ಟ್ 2023, 14:30 IST
Last Updated 28 ಆಗಸ್ಟ್ 2023, 14:30 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಟ ಉಪೇಂದ್ರ ಅವರು ಪರಿಶಿಷ್ಟ ಜಾತಿಯನ್ನು ಅವಮಾನಿಸಿದ್ದು ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಆದಿ ದ್ರಾವಿಡ ಮೂಲ ನಿವಾಸಿಗಳ ಹೋರಾಟ ಸಮಿತಿಯವರು ಐದನೇ ದಿನವಾದ ಸೋಮವಾರವೂ ಪ್ರತಿಭಟನೆ ಮಾಡಿದರು.

ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಸಮಿತಿಯವರು ಧರಣಿ ನಡೆಸಿ ಘೋಷಣೆ ಕೂಗಿದರು. ನಂತರ ಭೀಮ ನಗರದ ಮುಖಂಡ ಸಿದ್ದಾರ್ಥ ಮಾತನಾಡಿ, ನಿರಂತರವಾಗಿ ಧರಣಿ ಮಾಡಿದರು ಸಹ ಉಪೇಂದ್ರರನ್ನು ಬಂಧಿಸಿಲ್ಲ ಹಾಗಾಗಿ ದಲಿತ ಸಮುದಾಯಕ್ಕೆ ತುಂಬಾ ನೋವುಂಟಾಗಿದೆ ಈ ಕೂಡಲೇ ಉಪೇಂದ್ರರನ್ನು ಬಂಧಿಸದಿದ್ದರೇ ಪ್ರತಿನಿತ್ಯ ವಿನೂತನವಾಗಿ ಪ್ರತಿಭಟನೆ ನಡೆಸುವ ಮೂಲಕ ಹೋರಾಟ ನಡೆಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಆದಿದ್ರಾವಿಡ ಮೂಲನಿವಾಸಿಗಳ ಹೋರಾಟ ಸಮಿತಿ ಸದಸ್ಯರು ಸಿದ್ದಯ್ಯನಪುರ ಕೆಂಪರಾಜು, ಸುರೇಶ್, ಸತ್ತೇಗಾಲ ನಂಜುಂಡಸ್ವಾಮಿ, ಕಣ್ಣೂರು ಶ್ರೀಕಂಠಮೂರ್ತಿ, ನಾಗರಾಜು ಹರಳೆ, ಪೂಜಾಯ್ಯ, ರಾಮಕೃಷ್ಣ, ದಶರಥ, ಬಸವರಾಜು, ಮರಯ್ಯ, ಲಿಂಗರಾಜು, ರಾಜಪ್ಪ, ಚಾಮರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT