ಗುಂಡ್ಲುಪೇಟೆ: ತಾಲ್ಲೂಕಿನ ರಾಘವಾಪುರದಲ್ಲಿ ಡಾ.ನವೀನ್ ಮೌರ್ಯ ಅಭಿಮಾನಿ ಬಳಗದಿಂದ ಆಯೋಜನೆ ಮಾಡಿದ್ದ ಜೈ ಭೀಮ್ ರೆವಲ್ಯೂಷನರಿ ಕ್ರಿಕೆಟ್ ಟೂರ್ನಿಯಲ್ಲಿ ‘ಬೇಗೂರು ಲಯನ್ಸ್’ ಪ್ರಥಮ ಸ್ಥಾನ ಪಡೆದು ಕಪ್ ಮುಡಿಗೇರಿಸಿಕೊಂಡಿದೆ.

ರಾಘವಾಪುರದಲ್ಲಿ 75ನೇ ಸಂವಿಧಾನ ದಿನಾಚರಣೆ ಅಂಗವಾಗಿ ಕಳೆದ ಎರಡು ದಿನಗಳಿಂದ ನಡೆದ ಟೂರ್ನಿಯಲ್ಲಿ ಬೇಗೂರು ಲಯನ್ಸ್ ತಂಡವು ಡೆಂಜರ್ ಬಾಯ್ಸ್ ರಾಘವಾಪುರ ತಂಡ ಮಣಿಸಿ ಪ್ರಶಸ್ತಿ ಪಡೆಯಿತು. ಸರಣಿಯ ಉತ್ತಮ ಬ್ಯಾಟ್ಸ್ಮನ್ ಆಗಿ ನಾಗಣ್ಣ ಕನ್ವಿ ಮತ್ತು ಉತ್ತಮ ಬೌಲರ್ ಆಗಿ ರವಿ ಗುಬ್ಬಿ ಆಯ್ಕೆಯಾದರು.

ಗೆಲುವು ಸಾಧಿಸಿದ ತಂಡಗಳಿಗೆ ಆಯೋಜಕ ಯುವ ವಿಜ್ಞಾನಿ ನನೀನ್ ಮೌರ್ಯ ಪ್ರಶಸ್ತಿ ಮತ್ತು ಕಪ್ ನೀಡಿ ಅಭಿನಂದಿಸಿದರು.

ನಂತರ ಮಾತನಾಡಿ, ‘ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಘವಾಪುರ ಗ್ರಾಮದಲ್ಲಿ ಕ್ರಿಕೆಟ್ ಟೂರ್ನಿ ಆಯೋಜನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರೀಡಾಕೂಟ ಆಯೋಜಿಸಲಾಗುವುದು’ ಎಂದು ತಿಳಿಸಿದರು.

ಮುಖಂಡರಾದ ಶಿವಪ್ರಸಾದ್, ಡಾ.ಪ್ರಸಾದ್, ನವೀನ್, ಜಲೇಂದ್ರ ಆಯೋಜಕ ಹರೀಶ್ ರಾಘವಾಪುರ, ಮುಕುಂದ, ಸುನೀಲ್, ಮಣಿಕಂಠ, ಸಂಜು, ರಾಘವಾಪುರ ಕ್ರಿಕೆಟ್ ತಂಡದ ನಾಯಕ ರವಿಶಂಕರ್, ಮಹದೇವಸ್ವಾಮಿ, ನಂಜುಂಡಸ್ವಾಮಿ, ಲೋಕೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.