ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು | ಅಧಿಕಾರಿಗೆ ಕೊಲೆ ಬೆದರಿಕೆ: ದೂರು ದಾಖಲು

Published 4 ನವೆಂಬರ್ 2023, 15:09 IST
Last Updated 4 ನವೆಂಬರ್ 2023, 15:09 IST
ಅಕ್ಷರ ಗಾತ್ರ

ಹನೂರು: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ  ಚೇತನ್ ಕೊಲೆ ಬೆದರಿಕೆಯೊಡ್ಡಿದ್ದಾನೆ ಎಂದು ಕೃಷಿ ಅಧಿಕಾರಿ ನಾಗೇಂದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

‘ಮಂಗಳವಾರ ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿದ್ದಾಗ ಹೊರಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಕಂಪ್ಯೂಟರ್ ಆಪರೇಟರ್, ಚೇತನ್ ಅವರನ್ನು ಕರೆದು ಕಚೇರಿ ಕಡತ ಲೆಕ್ಕ ನಿರ್ವಹಣೆ ಬಗ್ಗೆ ವಿಚಾರಣೆ ಮಾಡಲಾಯಿತು. ಅದಕ್ಕೆ ಆತ ಏಕಾಏಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಲು ಮುಂದಾಗಿ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನ.3 ರಂದು ಆತ್ಮ ರಕ್ಷಣೆಗಾಗಿ ಹೊರಗುತ್ತಿಗೆ ನೌಕರ ಚೇತನ್ ಮೇಲೆ ಕಾನೂನು ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡುತಿದ್ದೇನೆ’ ಎಂದು ವಿವರಿಸಿದ್ದಾರೆ.

‘ಆರೋಪಿ ಚೇತನ್ ವಿರುದ್ಧ ಈ ಹಿಂದೆ ರಾಮಪುರ ಮತ್ತು ಲೋಕನಹಳ್ಳಿಯಲ್ಲಿ ಅಕ್ರಮ ಆರೋಪಗಳು ಕೇಳಿ ಬಂದಿದ್ದವು.  ಕೂಡಲೇ ಕೃಷಿ ಅಧಿಕಾರಿಯಿಂದ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು’ ಎಂದು ಕೃಷಿ ಇಲಾಖೆ ಜಂಟಿ‌ನಿರ್ದೇಶ ಎಸ್.ಎಸ್ ಅಬೀದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT