ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ತಪಾಸಣೆ ವೇಳೆ ಬ್ಯಾಂಕ್ ಹಣ ₹78 ಲಕ್ಷ ಪತ್ತೆ

Published 2 ಏಪ್ರಿಲ್ 2024, 15:14 IST
Last Updated 2 ಏಪ್ರಿಲ್ 2024, 15:14 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ದಾಸನಪುರ ಗ್ರಾಮದ ಚೆಕ್ ಪೋಸ್ಟ್‌‌‌ನಲ್ಲಿ ವಾಹನ ತಪಾಸಣೆ ಮಾಡುವಾಗ ಎರಡು ವಾಹನಗಳಲ್ಲಿ ದಾಖಲೆ ಇರುವ ₹78 ಲಕ್ಷ ಇರುವುದು ಪತ್ತೆಯಾಯಿತು.

 ಪರಿಶೀಲನೆ ಮಾಡುವಾಗ ಎಸ್‌‌‌ಬಿಐ ಬ್ಯಾಂಕ್ ಒಂದು ಕಾರಿನಲ್ಲಿ ₹13 ಲಕ್ಷವನ್ನು ಕೊಳ್ಳೇಗಾಲದ  ಶಾಖೆಯಿಂದ ತೆಗೆದುಕೊಂಡು ಕಾವೇರಿಪುರ ಗ್ರಾಮದ ಬ್ಯಾಂಕಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ದಾಖಲೆ ಪರಿಶೀಲಿಸಿದ ತಹಶೀಲ್ದಾರ್ ಮಂಜುಳಾ ಹಾಗೂ ಅಧಿಕಾರಿಗಳು ಕಾರನ್ನು ಬಿಟ್ಟು ಕಳುಹಿಸಿದರು. 

 ಇದಾದ ಬಳಿಕ ಮತ್ತೊಂದು ಕಾರಿನಲ್ಲಿ ಎಟಿಎಂಗಳಿಗೆ ಹಣ ಹಾಕಬೇಕು ಎಂದು ₹30 ಮತ್ತು ₹35 ಲಕ್ಷ ನಗದನ್ನು ಎರಡು ಪೆಟ್ಟಿಗೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಇದಕ್ಕೂ ಸೂಕ್ತ ದಾಖಲೆ ನೀಡಿದ ನಂತರ ಅಧಿಕಾರಿಗಳು ಬಿಟ್ಟು ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT