ಶುಕ್ರವಾರ, ಆಗಸ್ಟ್ 6, 2021
22 °C

84 ಹೊಸ ಪ್ರಕರಣಗಳು, 82 ಮಂದಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರ 84 ಮಂದಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. 82 ಮಂದಿ ಗುಣಮುಖರಾಗಿದ್ದಾರೆ. 

24 ಗಂಟೆಗಳ ಅವಧಿಯಲ್ಲಿ ಮೂವರು ಮೃತಪಟ್ಟಿದ್ದು, ಒಬ್ಬರು ಕೋವಿಡ್‌ಯೇತರ ಕಾರಣದಿಂದ ನಿಧನರಾಗಿದ್ದಾರೆ.

ಸದ್ಯ 856 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 42 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 22 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. 

ಜಿಲ್ಲೆಯಲ್ಲಿ ಇದುವರೆಗೆ ವರದಿಯಾದ ಪ್ರಕರಣಗಳ ಸಂಖ್ಯೆ 30,180ಕ್ಕೆ ಏರಿದೆ. 28,834 ಮಂದಿ ಗುಣಮುಖರಾಗಿದ್ದಾರೆ. 

ಭಾನುವಾರ 1,740 ಮಂದಿಯ ಪರೀಕ್ಷಾ ವರದಿ ಬಂದಿದ್ದು, 1,648 ವರದಿಗಳು ನೆಗೆಟಿವ್‌ ಬಂದಿವೆ. 92 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. 84 ಪ್ರಕರಣಗಳನ್ನು ವರದಿಯಲ್ಲಿ ಉಲ್ಲೇಖಿಸಿದೆ.

ಸೋಂಕು ದೃಢಪಟ್ಟವರಲ್ಲಿ ಚಾಮರಾಜನಗರ ತಾಲ್ಲೂಕಿನ 30, ಗುಂಡ್ಲುಪೇಟೆಯ 17, ಕೊಳ್ಳೇಗಾಲದ 13, ಹನೂರಿನ 17, ಯಳಂದೂರಿನ ಆರು ಹಾಗೂ ಹೊರ ಜಿಲ್ಲೆಯ ಒಬ್ಬರು ಸೇರಿದ್ದಾರೆ. 

ಗುಣಮುಖರಾದ 82 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನ 45, ಗುಂಡ್ಲುಪೇಟೆಯ 11, ಕೊಳ್ಳೇಗಾಲದ 12, ಹನೂರಿನ ಆರು, ಯಳಂದೂರಿನ ಎಂಟು ಮಂದಿ ಇದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು