ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಬ್ಯಾಟರಿಯಲ್ಲಿ ಬೆಂಕಿ; ಹೊತ್ತಿ ಉರಿದ ಇ– ಸ್ಕೂಟರ್

Published 6 ಆಗಸ್ಟ್ 2023, 14:17 IST
Last Updated 6 ಆಗಸ್ಟ್ 2023, 14:17 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡು, ಸ್ಕೂಟರ್‌ ಹೊತ್ತಿ ಉರಿದ ಘಟನೆ ಭಾನುವಾರ ನಡೆದಿದೆ. 

ಗ್ರಾಮದ ಬಸವರಾಜಪ್ಪ ಎಂಬುವವರಿಗೆ ಸೇರಿದ ಸ್ಕೂಟರ್ ಇದಾಗಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ಬಸವರಾಜಪ್ಪ ಅವರು ಬ್ಯಾಟರಿ ಚಾರ್ಜ್ ಮಾಡಿ ಸ್ಕೂಟರ್‌ಗೆ ಅಳವಡಿಸಿದ್ದರು. ಮನೆಯಿಂದ ಹೊರಡುವುದಕ್ಕಾಗಿ ಸ್ಕೂಟರ್ ಚಾಲೂ ಮಾಡಿದಾಗ ಬ್ಯಾಟರಿಯಲ್ಲಿ ಹೊಗೆ ಕಾಣಿಸಿಕೊಂಡಿತು. ತಕ್ಷಣ ಅವರು ದೂರ ಹೋದರು. ಕ್ಷಣಾರ್ಧದಲ್ಲಿ ಬೆಂಕಿ ಹೆಚ್ಚಾಯಿತು. ಬ್ಯಾಟರಿ ಸ್ಫೋಟಗೊಂಡು ಸ್ಕೂಟರ್‌ ಧಗ ಧಗನೆ ಉರಿಯಿತು.

ಪಕ್ಕದಲ್ಲೇ ಬೈಕ್ ಹಾಗೂ ಮನೆ ಇತ್ತು. ಬೆಂಕಿ ವ್ಯಾಪಿಸದಿರುವುದರಿಂದ ಹಾನಿ ಸಂಭವಿಸಿಲ್ಲ. ಸ್ಥಳೀಯ ಯುವಕರು ಸ್ಕೂಟರ್‌ಗೆ ನೀರು ಎರಚಿ ಬೆಂಕಿ ನಂದಿಸಿದರು.

ಮೇ 30ರಂದು ನಗರದಲ್ಲಿ ಇ–ಸ್ಕೂಟರ್‌ನ ಬ್ಯಾಟರಿಯಲ್ಲಿ ಹೊಗೆ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು. ಸ್ಕೂಟರ್‌ ಮಾಲೀಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT