ಮಂಗಳವಾರ, ಮಾರ್ಚ್ 21, 2023
23 °C
ತೆರಕಣಾಂಬಿ ಎಪಿಎಂಸಿಯಿಂದ ತಂದಿದ್ದ ಬಿತ್ತನೆ ಬೀಜ; ಹುಲುಸಾಗಿ ಬೆಳೆದ ಗಿಡ

ಚಾಮರಾಜನರಗರ: ಕೈಕೊಟ್ಟ ಈರುಳ್ಳಿ: ಬೆಳೆ ನಾಶ ಮಾಡಿದ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನರಗರ: ಸಣ್ಣ ಈರುಳ್ಳಿ ಗಿಡಗಳು ಹುಲುಸಾಗಿ ಬೆಳೆದಿದ್ದರೂ, ಈರುಳ್ಳಿ ಕಟ್ಟದಿರುವುದರಿಂದ ನಷ್ಟ ಅನುಭವಿಸಿರುವ ರೈತರೊಬ್ಬರು ಟ್ರ್ಯಾಕ್ಟರ್‌ ಮೂಲಕ ಹೊಲ ಉತ್ತು ಬೆಳೆ ನಾಶ ಮಾಡಿದ್ದಾರೆ. 

ತಾಲ್ಲೂಕಿನ ಕೆ.ಕೆ.ಹುಂಡಿಯ ರೈತರಾದ ನಾಗರಾಜು ‌ಮೂರು ಎಕರೆಯಲ್ಲಿ ಬೆಳೆದಿದ್ದ ಸಣ್ಣ ಈರುಳ್ಳಿ ಬೆಳೆಯನ್ನು ನಾಶ ಮಾಡಿದ್ದಾರೆ. ₹ 4 ಲಕ್ಷಕ್ಕೂ ಹೆಚ್ಚು ನಷ್ಟ ಅನುಭವಿಸಿದ್ದಾರೆ.

ಮೂರು ತಿಂಗಳ ಹಿಂದೆ ಗುಂಡ್ಲು ಪೇಟೆ ತಾಲ್ಲೂಕಿನ ತೆರಕಣಾಂಬಿ ಎಪಿ ಎಂಸಿಯಿಂದ ಕ್ವಿಂಟಲ್‌ಗೆ ₹ 7 ಸಾವಿರ ನೀಡಿ ಸಣ್ಣ ಈರುಳ್ಳಿ ಬಿತ್ತನೆ ಬೀಜ ಖರೀದಿಸಿದ್ದರು. ಎಂಟು ಕ್ವಿಂಟಲ್‌ ಬಿತ್ತನೆ ಮಾಡಿದ್ದರು. ಸಾಮಾನ್ಯವಾಗಿ ಮೂರು ತಿಂಗಳಲ್ಲಿ ಸಣ್ಣ ಈರುಳ್ಳಿ ಕಟಾವಿಗೆ ಬರುತ್ತದೆ. 90 ದಿನ ಕಳೆದರೂ ಬಂದಿಲ್ಲ. ಗಿಡಗಳು ಹುಲುಸಾಗಿ ಬೆಳೆದಿದ್ದರೂ, ನೆಲದಡಿಯಲ್ಲಿ ಈರುಳ್ಳಿ ಕಟ್ಟಿಲ್ಲ. ಇದರಿಂದ ಬೇಸತ್ತ ನಾಗರಾಜು ಈರುಳ್ಳಿ ಹೊಲವನ್ನು ಉತ್ತಿದ್ದಾರೆ. 

3 ದಿನದ ಹಿಂದೆ ತೋಟಗಾ ರಿಕೆ ಇಲಾಖೆ ಅಧಿಕಾರಿಗಳು ಜಮೀ ನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ದ್ದಾರೆ. ಬಿತ್ತನೆ ಬೀಜದ ಕಾರಣಕ್ಕೆ ಈ ರೀತಿ ಆಗಿರಬಹುದು ಎನ್ನಲಾಗಿದೆ.

ನಾಗರಾಜು ‘ಪ್ರಜಾವಾಣಿ’ಗೆ ಪ್ರತಿಕ್ರಿ ಯಿಸಿ, ‘ಬಿತ್ತನೆ ಮಾಡಿದ ನಂತರ ಗಿಡಗಳು ಚೆನ್ನಾಗಿ ಬಂದಿದ್ದರಿಂದ ಮತ್ತೆ ಕೀಟನಾಶಕ, ರಸಗೊಬ್ಬರ ಎಲ್ಲ ಹಾಕಿದ್ದೆ. ಎಕರೆಗೆ ₹ 90 ಸಾವಿರ ಖರ್ಚು ಮಾಡಿದ್ದೇನೆ. ಮೂರು ತಿಂಗಳು ಕಳೆದರೂ ಈರುಳ್ಳಿ ಕಟ್ಟಿಲ್ಲ. ಸ್ವಲ್ಪವೂ ಫಸಲು ಬಂದಿಲ್ಲ. ಪೂರ್ಣ ನಷ್ಟ ಅನುಭವಿಸಿದ್ದೇನೆ. ಸರ್ಕಾರ ನಷ್ಟ ಪರಿಹಾರ ಕೊಡಬೇಕು’ ಎಂದರು.

ಅದೇ ಗ್ರಾಮದ ಇನ್ನಿಬ್ಬರು ರೈತರೂ ಇದೇ ರೀತಿ ನಷ್ಟ ಅನುಭವಿಸಿದ್ದಾರೆ.  

ರಸೀದಿ ಇಲ್ಲ: ತೆರಕಣಾಂಬಿ ಎ‍‍ಪಿಪಿಎಂಸಿ ಯಿಂದ ನಾಗರಾಜು ಬಿತ್ತನೆ ಬೀಜ ಖರೀದಿಸಿದ್ದಾರೆ. ತಮಿಳುನಾಡಿನಿಂದ ಅಲ್ಲಿಗೆ ಬಿತ್ತನೆ ಬೀಜ ಪೂರೈಕೆಯಾಗಿ ಏಜೆನ್ಸಿ ಮೂಲಕ ಇವರು ಖರೀದಿಸಿ ದ್ದಾರೆ. ಆದರೆ, ಅದಕ್ಕೆ ಸಂಬಂಧಿಸಿದ ರಸೀದಿ ಅವರ ಬಳಿ ಇಲ್ಲ. 

ಪ್ರತಿಕ್ರಿಯೆ ಪಡೆಯಲು ತೋಟ ಗಾರಿಕೆ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್‌ಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು