ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿ ಘಟನೆಗೆ ಖಂಡನೆ: ರಾಷ್ಟ್ರಪತಿಗೆ ಭಿತ್ತಿಪತ್ರ ಪ್ರದರ್ಶನ, ರೈತರು ವಶಕ್ಕೆ

Last Updated 7 ಅಕ್ಟೋಬರ್ 2021, 8:49 IST
ಅಕ್ಷರ ಗಾತ್ರ

ಚಾಮರಾಜನಗರ: ಉತ್ತರಪ್ರದೇಶದ ಲಿಖೀಂಪುರ್ ಖೇರಿಯಲ್ಲಿ ವಾಹನ ಹರಿದು ನಾಲ್ವರು ರೈತರು ಮೃತಪಟ್ಟಿರುವುದನ್ನು ಖಂಡಿಸಿ, ನಗರಕ್ಕೆ ಭೇಟಿ ನೀಡುತ್ತಿರುವ ರಾಷ್ಟ್ರಪತಿ ಅವರ ಗಮನಸೆಳೆಯಲು ಬಿತ್ತಿ ಪ್ರದರ್ಶನ ಮಾಡಲು ಯತ್ನಿಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದರು.

ನಗರದ ಬೈಪಾಸ್ ರಸ್ತೆಯ ಬಳಿ ರೈತ ಸಂಘ ಹಾಗೂ ಹಸಿರು ಸೇನೆಯ 20ಕ್ಕೂ ಹೆಚ್ಚು ಮುಖಂಡರು ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಸಲು ಯತ್ನಿಸಿದರು.

ಪ್ರತಿಭಟನನಿರತರನ್ನು ಮನವೊಲಿಸಲು ಪೊಲೀಸರು ಯತ್ನಿಸಿದರೂ ಕೇಳದೇ ಇದ್ದಾಗ, ಎಲ್ಲರನ್ನೂ ವಶಕ್ಕೆ ಪಡೆದರು.

'ಉತ್ತರ ಪದೇಶದಲ್ಲಿ ನಡೆದಿರುವ ಘಟನೆಯ ಬಗ್ಗೆ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು. ಎಫ್ ಐಆರ್ ನಲ್ಲಿ ಹೆಸರಿಸಿರುವ ಎಲ್ಲರನ್ನೂ ಬಂಧಿಸಬೇಕು. ಘಟನೆಗೆ ಪ್ರಚೋದನೆ ನೀಡಿದ ಕೇಂದ್ರ ಸಚಿವ ಅಜಯ್ ಶರ್ಮಾ ಅವರನ್ನು ಕೇಂದ್ರ ಸಂಪುಟದಿಂದ ಕೈ ಬಿಡಬೇಕು' ಎಂದು ರೈತರು ಆಗ್ರಹಿಸಿದರು.


'ರೈತರ ಮೇಲೆ ಲಾಠಿ ಬೀಸುವಂತೆ ಪ್ರಚೋದನೆ ನೀಡಿದ ಹರಿಯಾಣ ಮುಖ್ಯಮಂತ್ರಿ ಅವರನ್ನು ವಜಾಗೊಳಿಸಬೇಕು. ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು' ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT