ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಪಾ ಷಷ್ಠಿ: ಚಾಮರಾಜನಗರದಲ್ಲಿ ತನಿ ಹಬ್ಬ ಅಚರಣೆ, ಹುತ್ತಗಳಿಗೆ ಕೋಳಿಯ ನೈವೇದ್ಯ

Last Updated 29 ನವೆಂಬರ್ 2022, 6:41 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಚಂಪಾ ಷಷ್ಠಿಯನ್ನು ಹಿಂದೂಗಳು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದು, ಹಲವು ಕಡೆಗಳಲ್ಲಿ ಜನರು ಹುತ್ತಗಳಿಗೆ ಕೋಳಿ ಬಲಿ ಕೊಟ್ಟು ಅದರ ರಕ್ತವನ್ನು ನೈವೇದ್ಯವಾಗಿ ಅರ್ಪಿಸಿದರು.

'ತನಿ ಹಬ್ಬ' ಎಂಬ ಹೆಸರಿನಲ್ಲಿ ಈ ಆಚರಣೆಯನ್ನು ಮಾಡಲಾಗುತ್ತದೆ. ನಗರ ಹಾಗೂ ಗ್ರಾಮೀಣ ಭಾಗಗಳಲ್ಲೂ ಈ ಆಚರಣೆ ಚಾಲ್ತಿಯಲ್ಲಿದೆ.

ಷಷ್ಠಿ ದಿನ ಕೋಳಿ ಬಲಿ ನೀಡಿದರೆ, ಹಾವುಗಳ ಉಪಟಳ ಇರುವುದಿಲ್ಲ. ನಾಗದೋಷವೂ ಕಂಡು ಬರುವುದಿಲ್ಲ ಎಂಬ ನಂಬಿಕೆ ಜನರಲ್ಲಿದೆ.

ಜನರು ಕುಟುಂಬ ಸಮೇತರಾಗಿ ಹುತ್ತದ ಬಳಿಗೆ ತೆರಳಿ ಪೂಜೆ ಸಲ್ಲಿಸಿ ನಂತರ ಕೋಳಿ ಬಲಿ ನೀಡುತ್ತಾರೆ.

ವಿಶೇಷ ಪೂಜೆ: ಹಬ್ಬದ ಅಂಗವಾಗಿ ಭಕ್ತರು ಹುತ್ತಗಳಿಗೆ, ನಾಗನ ಕಲ್ಲುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮಹಿಳೆಯರು, ಬೆಳಿಗ್ಗೆಯಿಂದಲೇ ಉಪವಾಸ ಇದ್ದು, ಕುಟುಂಬದ ಸದಸ್ಯರೊಂದಿಗೆ ಹುತ್ತ ಇರುವ ಕಡೆ ತೆರಳಿ ಪೂಜೆ ಸಲ್ಲಿಸಿದರು. ನಾಗನ ಸಾನಿಧ್ಯದ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT