ಕೊಳ್ಳೇಗಾಲ: ನಗರದ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 55 ವರ್ಷದ ವ್ಯಕ್ತಿಯೊಬ್ಬರನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.

55 ವರ್ಷದವ್ಯಕ್ತಿಯ ವಿರುದ್ಧ ಬಾಲಕಿಯ ಪೋಷಕರು ದೂರು ನೀಡಿದ್ದಾರೆ. ಆಟವಾಡುವ ನೆಪದಲ್ಲಿ ಬಾಲಕಿ ಮೇಲೆ ಆರೋಪಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಲಾಗಿದ್ದು, ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಹಿಂಜರಿದ ಪೋಷಕರು: ಮಗುವಿನ ಮೇಲೆ ಅತ್ಯಾಚಾರ ನಡೆದಿದೆ ಎಂಬುದು ಪೋಷಕರಿಗೆ ಸೋಮವಾರವೇ ಗೊತ್ತಾಗಿತ್ತು. ಆದರೆ, ದೂರು ನೀಡಲು ಅವರು ಹಿಂಜರಿದಿದ್ದರು. ಬಾಲಕಿಯ ಜನನಾಂಗಕ್ಕೆ ಗಾಯವಾಗಿದ್ದರಿಂದ ಅದರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಾಗ ವೈದ್ಯರು ವಿಚಾರಿಸಿದಾಗ ವಿಷಯ ಗೊತ್ತಾಗಿದೆ. ವೈದ್ಯರು, ಅಧಿಕಾರಿಗಳು ಹಾಗೂ ಪೊಲೀಸರು ಪೋಷಕರಿಗೆ ಮನವರಿಗೆ ಮಾಡಿದ ನಂತರ ದೂರು ನೀಡಿದರು.

ತಾಯಿಗೆ ತಿಳಿಸಿದ ಬಾಲಕಿ: ಮಗುವನ್ನು ಸ್ನಾನ ಮಾಡಿಸುವ ಸಂದರ್ಭದಲ್ಲಿ ಜನನಾಂಗದಲ್ಲಿ ಗಾಯವಾಗಿದ್ದರ ಬಗ್ಗೆ ತಾಯಿ ವಿಚಾರಿಸಿದಾಗ ಮಗು ನಡೆದಿದ್ದನ್ನು ವಿವರಿಸಿದೆ. ಆರೋಪಿಯು ಚೆಂಡನ್ನು ಕೊಟ್ಟು ಆಟವಾಡೋಣ ಎಂದು ಕರೆದೊಯ್ದು ಅತ್ಯಾಚಾರ ಮಾಡಿರುವ ವಿಚಾರವನ್ನು ಮಗು ತಿಳಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿವೈಎಸ್‌ಪಿ ಜಿ.ನಾಗರಾಜು ಅವರು, ‘ದೂರಿನ ಆಧಾರದಲ್ಲಿ ವಶಕ್ಕೆ ಪಡೆದಿದ್ದೇವೆ. ಆರೋಪಿಯ ವಿರುದ್ಧ ಇನ್ನಷ್ಟು ದೂರುಗಳು ಬಂದಿವೆ. ಪ್ರಕರಣವನ್ನೂ ದಾಖಲಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.