ಸೋಮವಾರ, ಆಗಸ್ಟ್ 15, 2022
23 °C

ನಟ ವಿಷ್ಣುವರ್ಧನ್‌ ಹುಟ್ಟುಹಬ್ಬ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಡಾ.ವಿಷ್ಣು ಅಭಿಮಾನಿ ಸ್ನೇಹ ಬಳಗದ ವತಿಯಿಂದ ಚಿತ್ರನಟ ದಿವಂಗತ ವಿಷ್ಣುವರ್ಧನ್‌ ಅವರ 70ನೇ ಜನ್ಮದಿನ ಆಚರಿಸಲಾಯಿತು. 

ನಗರದ ನ್ಯಾಯಾಲಯ ರಸ್ತೆಯ ಆಟೊ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಳದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌ ಅವರು ಕೇಕ್‌ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದರು. 

ನಂತರ ಮಾತನಾಡಿದ ಅವರು, ‘ಡಾ. ವಿಷ್ಣುವರ್ಧನ್ ಅವರು ತಮ್ಮ ಚಿತ್ರಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ತಮ್ಮ ನಟನೆ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ 220ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಮಾನವೀಯ ಮೌಲ್ಯಗಳ ಹರಿಕಾರರಾಗಿದ್ದಾರೆ’ ಎಂದು ಹೇಳಿದರು. 

‘ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ವಿಷ್ಣು ಸ್ಮಾರಕ ನಿರ್ಮಾಣವನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವುದು ಅಭಿಮಾನಿಗಳಲ್ಲಿ ಸಂತೋಷ ಉಂಟು ಮಾಡಿದೆ. ಚಾಮರಾಜನಗರದ ಯಾವುದಾದರೂ ರಸ್ತೆ ಮತ್ತು ವೃತ್ತಕ್ಕೆ ವಿಷ್ಣುವರ್ಧನ್ ಹೆಸರಿಡುವಂತೆ ಹತ್ತು ವರ್ಷಗಳಿಂದಲೂ ನಗರಸಭೆಗೆ ಮನವಿ ಮಾಡುತ್ತಾ ಬಂದಿದ್ದರೂ, ಪ್ರಯೋಜನವಾಗದಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ನಗರಸಭೆ ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಚುಡಾ ಸದಸ್ಯ ಕರಿನಂಜನಪುರ ಕೂಸಣ್ಣ, ಮಾರ್ಕೆಟ್ ‌ಗಿರೀಶ್, ಸಾಧನ ಸಂಸ್ಥೆ ನಿರ್ದೇಶಕ ಟಿ.ಜೆ.ಸುರೇಶ್, ಎಸ್.ಎ.ಜಿ ರಮೇಶ್, ಪತಂಜಲಿ ಯೋಗ ಕೇಂದ್ರದ ಅಧ್ಯಕ್ಷ ಎಚ್.ಜಿ.ಕುಮಾರಸ್ವಾಮಿ, ವೀರಶೈವ-ಲಿಂಗಾಯಿತ ಯುವ ವೇದಿಕೆ ಉಪಾಧ್ಯಕ್ಷ ಸಿ.ಡಿ.ಪ್ರಕಾಶ್, ವಕೀಲರಾದ ಜಿ. ಸಂತೋಷ್‌ಕುಮಾರ್, ಆರ್.ಗಿರೀಶ್, ಸೋಮವಾರಪೇಟೆ ಚಂದ್ರು, ಪೋಲಿಸ್ ಶಿವಕುಮಾರ್, ರಾಮಸಮುದ್ರ ಪುಟ್ಟುವರ್ಧನ್, ಮಿಲ್ಕ್ ಮಂಜು, ಟಾಟಾಸ್ಕೈ ಕುಮಾರ್, ನವೀನ್‌ಕುಮಾರ್, ಆಟೊ ಚಾಲಕರು ಮತ್ತು ಅಭಿಮಾನಿಗಳು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು