ಗುಂಡ್ಲುಪೇಟೆ: ಸ್ಥಳೀಯ ಕ್ರೀಡಾ ಪ್ರತಿಭೆಗಳು ನಗರ ಪ್ರದೇಶಗಳಿಗೆ ಹೋಗಿ ತರಬೇತಿ ಪಡೆದಾಗ ಮಾತ್ರ ಅವಕಾಶಗಳು ತೆರೆದುಕೊಳ್ಳುತ್ತದೆ ಎಂದು ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ತಿಳಿಸಿದರು.

ತಾಲ್ಲೂಕಿನ ಮೇಲುಕಾಮನಹಳ್ಳಿ ಗ್ರಾಮದಲ್ಲಿ ಟೀಂ ಮೆಟ್ರೊ ವತಿಯಿಂದ ಆಯೋಜಿದ್ದ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದರು. ಕ್ರಿಕೆಟ್ ಹೆಚ್ಚು ಜನಪ್ರಿಯ ಕ್ರೀಡೆ. ಭಾರತದ ಉದ್ದಗಲಕ್ಜೂ ಎಲ್ಲೆಂದರಲ್ಲಿ ಕ್ರಿಕೆಟ್ ಆಡುತ್ತಾರೆ. ಗ್ರಾಮೀಣ ಭಾಗದ ಯುವಕರಲ್ಲಿ ಸಹ ಹೆಚ್ಚು ಪ್ರತಿಭಾನ್ವಿತರು ಇದ್ದಾರೆ. ಆದರೆ ಅವರಿಗೆ ತರಬೇತಿ ಮತ್ತು ಅವಕಾಶ ಸಿಗುತ್ತಿಲ್ಲ. ಆದ್ದರಿಂದ ಕ್ರಿಕೆಟ್ನಲ್ಲಿ ಮುಂದುವರಿಯಬೇಕೆಂಬ ಮನಸಿದ್ದರೆ ನಗರ ಪ್ರದೇಶದ ಕ್ಲಬ್ಗಳಿಗೆ ಸೇರಿ ತರಬೇತಿ ಪಡೆದರೆ ಅವಕಾಶ ಸಿಗುತ್ತದೆ ಎಂದು.

ಮಹೇಂದ್ರ ಸಿಂಗ್ ದೋನಿ ಸಹ ಜಾರ್ಖಂಡ್ನ ಸಣ್ಣ ಹಳ್ಳಿಯ ಪ್ರತಿಭೆ. ಪ್ರತಿಭೆಯನ್ನು ನಕಲು ಮಾಡಲಾಗುವುದಿಲ್ಲ. ಅದು ಸ್ವಯಂ ಪ್ರೇರಿತರಾಗಿ ಬೆಳೆಯುತ್ತದೆ ಎಂದರು. ಉದ್ಯಮಿ ಎಂ.ಸಿ.ನಾಗರಾಜು ಅವರು ಆಟಗಾರರಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಚಿಕ್ಕಣ್ಣ, ಡಿ.ಆರ್.ನಾಗೇಶ್, ಶ್ರೀನಿವಾಸ, ಜಯರಾಜು, ರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.