ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

420 ಕೋವಿಡ್‌ ಪ್ರಕರಣ, 9 ಸಾವು, 238 ಮಂದಿ ಗುಣಮುಖ

Last Updated 30 ಏಪ್ರಿಲ್ 2021, 14:19 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಏರು ಗತಿ ಮುಂದುವರಿದಿದ್ದು, ಶುಕ್ರವಾರ 420 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಒಂಬತ್ತು ಜನರು ಮೃತಪಟ್ಟಿದ್ದಾರೆ.

ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಿದ್ದು, ಶುಕ್ರವಾರ ಒಂದೇ ದಿನ 238 ಮಂದಿ ಸೋಂಕು ಮುಕ್ತರಾಗಿದ್ದಾರೆ.

ಜಿಲ್ಲೆಯಲ್ಲಿ ಇದುವರೆದೆ ದಾಖಲಾದ ಪ್ರಕರಣಗಳ ಸಂಖ್ಯೆ 11 ಸಾವಿರ ದಾಟಿದೆ. 11,004 ಪ್ರಕರಣಗಳು ದೃಢಪಟ್ಟಿವೆ. ಮೂರು ದಿನಗಳ ಅವಧಿಯಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಒಟ್ಟು 8,534 ಮಂದಿ ಗುಣಮುಖರಾಗಿದ್ದಾರೆ.

ಸದ್ಯ 2,312 ಸೋಂಕಿತರಿದ್ದಾರೆ. ಈ ಪೈಕಿ 1,643 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. 53 ಮಂದಿ ಐಸಿಯುನಲ್ಲಿದ್ದಾರೆ. ಒಂದೇ ದಿನ ಒಂಬತ್ತು ಸಾವಿನ ಪ್ರಕರಣಗಳು ದಾಖಲಾಗುವುದರೊಂದಿಗೆ ಇದುವರೆಗೆ ಮೃತಪಟ್ಟವರ ಸಂಖ್ಯೆ 147ಕ್ಕೆ ಏರಿದೆ. 20 ಮಂದಿ ಕೋವಿಡ್‌ಯೇತರ ಅನಾರೋಗ್ಯಗಳಿಂದ ನಿಧನರಾಗಿದ್ದಾರೆ.

ಜಿಲ್ಲಾಡಳಿತದ ಶುಕ್ರವಾರ ನೀಡಿರುವ ವರದಿಯ ಪ್ರಕಾರ, ಆರು ರೋಗಿಗಳು ಗುರುವಾರವೇ ಕೊನೆಯುಸಿರೆಳೆದಿದ್ದಾರೆ. ಮೂವರು ಶುಕ್ರವಾರ ಮೃತಪಟ್ಟಿದ್ದಾರೆ. ಎಲ್ಲರೂ 55 ವರ್ಷ ಮೇಲ್ಪಟ್ಟವರು.

ಯಳಂದೂರು ತಾಲ್ಲೂಕಿನ ಗೌಡಹಳ್ಳಿಯ 90 ವರ್ಷದ ವೃದ್ಧ, ಚಾಮರಾಜನಗರದ 56 ಹಾಗೂ 65 ವರ್ಷದ ವ್ಯಕ್ತಿಗಳಿಬ್ಬರು, ಹನೂರು ತಾಲ್ಲೂಕಿನ ಕೂಡ್ಲೂರು ಗ್ರಾಮದ 55 ವರ್ಷದ ಪುರುಷ, ಕೊಳ್ಳೇಗಾಲ ತಾಲ್ಲೂಕು ಹೊಸಪಾಳ್ಯ ಗ್ರಾಮದ 68 ವರ್ಷದ ವೃದ್ಧ, ಚಾಮರಾಜನಗರ ತಾಲ್ಲೂಕು ಹುಲ್ಲೇಪುರ ಗ್ರಾಮದ 55 ವರ್ಷದ ವ್ಯಕ್ತಿ, ಕೊಳ್ಳೇಗಾಲ ತಾಲ್ಲೂಕಿನ ಕುಂತೂರು ಗ್ರಾಮದ 65 ವರ್ಷದ ವೃದ್ಧ, ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿಯ 55 ವರ್ಷದ ಪುರುಷ, ಚಾಮರಾಜನಗರ ತಾಲ್ಲೂಕು ಮೂಡ್ನಕೂಡು ಗ್ರಾಮದ 60 ವರ್ಷದ ವೃದ್ಧೆ ಮೃತಪಟ್ಟವರು.

ಶುಕ್ರವಾರ 1,679 ಮಂದಿಯ ಪರೀಕ್ಷಾ ವರದಿ ಬಂದಿದ್ದು, 1,251 ವರದಿಗಳು ನೆಗೆಟಿವ್‌ ಬಂದಿವೆ. 428 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಈ ಪೈಕಿ ಎಂಟು ಪ್ರಕರಣಗಳು ಹೊರ ಜಿಲ್ಲೆಗೆ ಸೇರಿದವು.

ತಾಲ್ಲೂಕುವಾರು ಪ್ರರಕಣಗಳು: ಚಾಮರಾಜನಗರದಲ್ಲಿ ಅತಿ ಹೆಚ್ಚು 126 ಪ್ರಕರಣ, ಕೊಳ್ಳೇಗಾಲದಲ್ಲಿ 114, ಗುಂಡ್ಲುಪೇಟೆಯಲ್ಲಿ 99, ಹನೂರಿನಲ್ಲಿ 57, ಯಳಂದೂರಿನಲ್ಲಿ 23 ಪ್ರಕರಣಗಳು ವರದಿಯಾಗಿವೆ.

57 ಪ್ರಕರಣಗಳು ನಗರ ಪ್ರದೇಶಗಳಲ್ಲಿ ದೃಢಪಟ್ಟಿದ್ದರೆ, 363 ಪ್ರಕರಣಗಳು ಗ್ರಾಮೀಣ ಭಾಗಗಳಲ್ಲಿ ವರದಿಯಾಗಿವೆ.

ಜಿಲ್ಲೆಯಲ್ಲಿ 80 ಹಾಸಿಗೆಗಳು ಲಭ್ಯ

ಜಿಲ್ಲೆಯಲ್ಲಿ ಐದು ಸರ್ಕಾರಿ ಆಸ್ಪತ್ರೆಗಳಲ್ಲಿ (ಚಾಮರಾಜನಗರ, ಸಂತೇಮರಹಳ್ಳಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಯಳಂದೂರು) ಹಾಗೂ ಎರಡು ಖಾಸಗಿ ಆಸ್ಪತ್ರೆಗಳಲ್ಲಿ (ಕಾಮಗೆರೆಯ ಹೋಲಿ ಕ್ರಾಸ್‌ ಮತ್ತು ಚಾಮರಾಜನಗರ ಬಸವರಾಜೇಂದ್ರ ಆಸ್ಪತ್ರೆ) ಕೋವಿಡ್‌ ಚಿಕಿತ್ಸೆ ಲಭ್ಯವಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 336 ಹಾಸಿಗೆಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 85 ಸೇರಿದಂತೆ 421 ಹಾಸಿಗೆಗಳು ಇವೆ.

ಈ ಪೈಕಿ ಸರ್ಕಾರಿ ಆಸ್ಪತ್ರೆಗಳಲ್ಲಿ ಐದು ಸಾಮಾನ್ಯ ಹಾಸಿಗೆಗಳು, 66 ಆಕ್ಸಿಜನ್‌ ಸಹಿತ ಹಾಸಿಗೆಗಳು, 15 ಐಸಿಯು, 9 ವೆಂಟಿಲೇಟರ್‌ ಸಹಿತ ಹಾಸಿಗೆಗಳು ಖಾಲಿ ಇವೆ.

ಜಿಲ್ಲಾಸ್ಪತ್ರೆಯಲ್ಲಿರುವ ಪ್ರಧಾನ ಕೋವಿಡ್‌ ಆಸ್ಪತ್ರೆಯಲ್ಲಿ ಒಟ್ಟು 153 ಹಾಸಿಗೆಗಳಿದ್ದು, 45 ಸಾಮಾನ್ಯ ಹಾಸಿಗೆಗಳಲ್ಲಿ ಐದು, 55 ಆಮ್ಲಜನಕ ಸೌಲಭ್ಯದ ಹಾಸಿಗೆಗಳಲ್ಲಿ ನಾಲ್ಕು ಹಾಸಿಗೆಗಳು ಖಾಲಿ ಇವೆ. 53 ಐಸಿಯು ಹಾಸಿಗೆ ಮತ್ತು 24 ವೆಂಟಿಲೇಟರ್‌ ಸೌಲಭ್ಯಗಳುಳ್ಳ ಹಾಸಿಗೆ ಭರ್ತಿಯಾಗಿವೆ.

ಖಾಸಗಿ ಆಸ್ಪತ್ರೆಗಳ ಪೈಕಿ ಹಾಲಿಕ್ರಾಸ್‌ನಲ್ಲಿ 30 ಸಾಮಾನ್ಯ ಹಾಸಿಗೆಗಳಲ್ಲಿ 23 ಖಾಲಿ, ಆಮ್ಲಜನಕ ಸಹಿತ 20 ಹಾಸಿಗೆಗಳಲ್ಲಿ 10 ಖಾಲಿ, ನಾಲ್ಕು ವೆಂಟಿಲೇಟರ್‌ಗಳ ಪೈಕಿ ಎರಡು ಹಾಸಿಗೆಗಳಿಗೆ ಖಾಲಿ ಇವೆ.

ಬಸವ ರಾಜೇಂದ್ರ ಆಸ್ಪತ್ರೆಯಲ್ಲಿ ಒಟ್ಟು 35 ಹಾಸಿಗೆಗಳಿದ್ದು, 20 ಸಾಮಾನ್ಯ ಹಾಸಿಗೆಗಳು ಭರ್ತಿಯಾಗಿವೆ. ಆಮ್ಲಜನಕ ಸಹಿತ 15 ಹಾಸಿಗೆಗಳಿದ್ದು, ಮೂರು ಖಾಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT