ಯಳಂದೂರು: ಕೃಷಿ ಭೂಮಿಯ ಸಾಗುವಳಿ ಪ್ರದೇಶದ ಫಲವತ್ತತೆ ಹೆಚ್ಚಿಸುವ ‘ಗ್ಲಿರಿಸಿಡಿಯಾ’ (ಗೊಬ್ಬರದ ಗಿಡ) ಕಾಡು ಮೇಡುಗಳಲ್ಲಿ ಸಮೃದ್ಧವಾಗಿ ಬೆಳೆದುನಿಂತಿದೆ. ನೈಸರ್ಗಿಕ ಸಾವಯವ ಮೂಲವಾಗಿರುವ ಹಾಗೂ ಮಣ್ಣಿನ ಆರೋಗ್ಯದ ಪುನಶ್ಚೇತನಕ್ಕೆ ಕಾರಣವಾಗಿರುವ ಗ್ಲಿರಿಸಿಡಿಯಾ ಈಚೆಗೆ ಹೊಲ, ಗದ್ದೆಗಳಿಂದ ದೂರ ಸರಿಯುತ್ತಿವೆ.

ರಾಸಾಯನಿಕ ಗೊಬ್ಬರಗಳಿಗೆ ಪರ್ಯಾಯ ಮೂಲವಾದ ಗೊಬ್ಬರ ಗಿಡಗಳ ಸಂತತಿ ಕಣ್ಮರೆಯಾಗುತ್ತಿದ್ದು ಅರಣ್ಯದ ಸುತ್ತಮುತ್ತಲಿನ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಗೊಬ್ಬರದ ಗಿಡಗಳನ್ನು ಮತ್ತೆ ಕೃಷಿ ಭೂಮಿಗಳಲ್ಲಿ ಅರಳಿಸಬೇಕಾದ ಅಗತ್ಯವಿದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಡುತ್ತಾರೆ.

ಕೃಷಿ ಭೂಮಿಗೆ ಹಸಿರೆಲೆ, ಸಾರಜನಕ ಹಾಗೂ ಪೋಷಕಾಂಶ ಪೂರೈಸುವ ನಿಟ್ಟಿನಲ್ಲಿ ಹಿಂದೆ ರೈತರು ಗೊಬ್ಬರದ ಗಿಡವನ್ನು ಜಮೀನಿನ ಸುತ್ತಲೂ ಬೆಳೆಸುತ್ತಿದ್ದರು. ಗಿಡಗಳು ಎತ್ತರಕ್ಕೆ ಬೆಳೆದಂತೆ ರೆಂಬೆ ಕೊಂಬೆಗಳನ್ನು ಕತ್ತರಿಸಿ ಮಣ್ಣಿಗೆ ಸೇರಿಸುತ್ತಿದ್ದರು. ಪೂರ್ವ ಮುಂಗಾರು ಮತ್ತು ಮಾಗಿ ಉಳುಮೆ ಸಂದರ್ಭದಲ್ಲಿ ಗೊಬ್ಬರದ ಗಿಡಗಳ ಎಲೆಗಳನ್ನು ಭೂಮಿಗೆ ಸೇರಿಸುತ್ತಿದ್ದರು. ಇದರಿಂದ ಮಣ್ಣಿನ ಸಾವಯವ ಇಂಗಾಲ ವೃದ್ಧಿಯಾಗಿ ಫಲವತ್ತತೆ ಹೆಚ್ಚಾಗಿ ಉತ್ತಮ ಇಳವರಿ ಪಡೆಯಲು ಸಾಧ್ಯವಾಗುತ್ತಿತ್ತು.

ಈಚೆಗೆ ರಸಾಯನಿಕ ಗೊಬ್ಬರಗಳ ಆಕರ್ಷಣೆಗೆ ಸಿಲುಕಿರುವ ರೈತರು ಗೊಬ್ಬರದ ಗಿಡಗಳನ್ನು ಬೆಳೆಸುವತ್ತ ಆಸಕ್ತಿ ತೋರುತ್ತಿಲ್ಲ. ಪ್ರಕೃತಿಗೆ ಪೂರಕವಾಗಿ ಬೆಳೆಯುವ ಗಿಡಗಳನ್ನು ಸಾಗುವಳಿ ಭೂಮಿಯಲ್ಲಿ ಬೆಳೆಸಬೇಕು ಎಂಬುದು ಕೃಷಿ ತಜ್ಞರ ಒತ್ತಾಸೆ.

ರೈತರು ಮಳೆಯ ಋತುವಿಗೂ ಮೊದಲು ಗೊಬ್ಬರ ಗಿಡಗಳನ್ನು ನೆಟ್ಟು ಬೆಳೆಸಿದರೆ ಭೂಮಿಗೆ ಹೆಚ್ಚು ರಾಸಾಯನಿಕ ಗೊಬ್ಬರ ಬಳಸುವ ಅಗತ್ಯ ಬೀಳುವುದಿಲ್ಲ. ಗೊಬ್ಬರ ಗಿಡಗಳು ಪ್ರತಿವರ್ಷ 25 ರಿಂದ 50 ಕೆಜಿಯಷ್ಟು ಪೌಷ್ಠಿಕಾಂಶ ಭರಿತ ಸೊಪ್ಪು ಉತ್ಪಾದಿಸಿ ಭೂಮಿಗೆ ಸೇರಿಸುತ್ತವೆ.

ಭೂಮಿಗೆ ಅಗತ್ಯವಾದ ಸಾರಜನಕ, ರಂಜಕ ಹಾಗೂ ಪೊಟ್ಯಾಶ್ ಮತ್ತು ಸೂಕ್ಷ್ಮ ಪೋಷಕಾಂಶವನ್ನು ಒದಗಿಸುತ್ತವೆ. ಇದರಿಂದ ನೈಸರ್ಗಿಕ ಕೃಷಿಗೆ ಹೆಚ್ಚು ಸಹಕಾರಿಯಾಗಲಿದ್ದು ಹಣ್ಣು, ತರಕಾರಿ, ಬಾಳೆ ಮೊದಲಾದ ಬೆಳೆಗಳು ಉತ್ತಮ ಇಳುವರಿ ಪಡೆಯಬಹುದು, ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೈ.ಎನ್.ಅಮೃತೇಶ್ವರ.

ಕೃಷಿಕರು ಕೃಷಿ ತಾಕಿನ ಸುತ್ತಲೂ ಬೇಲಿಯಾಗಿ ಗ್ಲಿರಿಸಿಡಿಯಾ ಕಡ್ಡಿ ಇಲ್ಲವೆ ಬೀಜ ನೆಟ್ಟರೆ ಬೇಗ ಬೆಳೆಯುತ್ತದೆ. ಮಣ್ಣಿನಲ್ಲಿ ಗೊಬ್ಬರದ ಗಿಡಗಳ ಹಸಿರೆಲೆ ಸೇರಿದರೆ ಮಣ್ಣಿನ ರಚನೆ ಸುಧಾರಣೆಗೊಂಡು, ಮಳೆಯ ನೀರು ಸುಲಭವಾಗಿ ಭೂಮಿಗೆ ಇಂಗುತ್ತದೆ ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಕೊಂಚ ತಗ್ಗಲಿದ್ದು ನಿರ್ವಹಣಾ ವೆಚ್ಚವೂ ಇಳಿಯುತ್ತದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಮಾಗಿ ಉಳುಮೆ ನಂತರ ಮಣ್ಣಿನಲ್ಲಿ ಜೈವಿಕ ಸೂಕ್ಷ್ಮಾಣು ಚಟುವಟಿಕೆಗಳನ್ನು ಹೆಚ್ಚಿಸಲು ಹತ್ತಾರು ಹಸಿರೆಲೆ ಗೊಬ್ಬರದ ಗಿಡಗಳನ್ನು ಬೆಳೆಸಬಹುದು. ಆಪ್ ಸೆಣಬು, ಡಯಾಂಚ, ಕೊಳಂಜೆ, ಹೊಂಗೆ, ಎಕ್ಕ, ಲಂಟಾನ, ಹುರುಳಿ, ಉದ್ದು ಮತ್ತು ಹೆಸರು ಮೊದಲಾದ ಸಸ್ಯಗಳಿಂದಲೂ ಹಸಿರು ಗೊಬ್ಬರ ತಯಾರಿಸಬಹುದು. ಗ್ಲಿರಿಸಿಡಿಯಾ ಒಮ್ಮೆ ನಾಟಿ ಮಾಡಿದರೆ ನಿರಂತರವಾಗಿ ಸೊಪ್ಪು ನೀಡುತ್ತದೆ ಎಂದು ಪ್ರಗತಿಪರ ಕೃಷಿಕ ಅಂಬಳೆ ಮಹೇಶ್ ಹೇಳುತ್ತಾರೆ.

Highlights - ‘ಇಳುವರಿ ಹೆಚ್ಚಿಸಿ, ಭೂಮಿಗೆ ಪೋಷಕಾಂಶ ನೀಡುವ ಗೊಬ್ಬರದ ಗಿಡ’ ‘ಜಮೀನಿನ ಬದುಗಳ ಸುತ್ತ ನೆಟ್ಟರೆ ಸಮೃದ್ಧ ಸಾವಯವ ಗೊಬ್ಬರ ಲಭ್ಯ’ ‘ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆ’

ಗೊಬ್ಬರ ಗಿಡಗಳ ನಿರ್ಲಕ್ಷ್ಯ

ರೈತರು ಗ್ಲಿರಿಸಿಡಿಯಾ ಗಿಡಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ರಸ್ತೆಯ ಬದಿ ಹಾಗೂ ಬೆಟ್ಟಗಳಲ್ಲಿ ಮಾತ್ರ ಗಿಡಗಳು ನಳನಳಿಸಿವೆ. ಫೆಬ್ರುವರಿ-ಮಾರ್ಚ್ ನಡುವೆ ಹೂಗಳ ಮಕರಂದ ಸವಿಯಲು ಜೇನು ಸಂಸಾರವೂ ದಾಂಗುಡಿ ಇಡುತ್ತವೆ. ಮಣ್ಣಿನ ಭೌತಿಕ ರಾಸಾಯನಿಕ ಹಾಗೂ ಜೈವಿಕ ಗುಣಗಳ ಬದಲಾವಣೆಗೆ ಸಹಾಯ ಮಾಡುವ ಗೊಬ್ಬರದ ಗಿಡಗಳನ್ನು ರೈತರು ಬೇಸಿಗೆಯಲ್ಲಿ ನಾಟಿ ಮಾಡುವುದು ಸೂಕ್ತ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಸಲಹೆ ನೀಡುತ್ತಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.