ಶನಿವಾರ, ಸೆಪ್ಟೆಂಬರ್ 25, 2021
22 °C

ಟಿಟಿಸಿ: ಅಲ್ಪಾವಧಿ, ದೀರ್ಘಾವಧಿ ಡಿಪ್ಲೊಮಾ ಕೋರ್ಸ್‌ಗಳು ಲಭ್ಯ

ಮಲ್ಲೇಶ ಎಂ.‌ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಪಟ್ಟಣದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ಉದ್ಯೋಗಾವಕಾಶಕ್ಕೆ ನೆರವಾಗುವ ಅಲ್ಪಾವಧಿ ಮತ್ತು ದೀರ್ಘಾವಧಿಯ ತರಬೇತಿ ನೀಡುತ್ತಿದ್ದು, ಜಿಲ್ಲೆಯ ಯುವಜನರಿಗೆ ವರದಾನವಾಗಿ ಪರಿಣಮಿಸಿದೆ. 

ಹೊಸೂರು ರಸ್ತೆಯಲ್ಲಿರುವ ದುಂದಾಸನಪುರದಲ್ಲಿ 2007ರಲ್ಲಿ ಆರಂಭವಾದ ಈ ಸಂಸ್ಥೆಯು ಜಿಲ್ಲೆಯ ಏಕೈಕ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ. 

ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್ ದೀರ್ಘಾವಧಿ ಕೋರ್ಸು ಅಧ್ಯಯನಕ್ಕೆ ಇಲ್ಲಿ ಅವಕಾಶ ನೀಡಿದ್ದು, ಪ್ರತಿ ವರ್ಷ 40ರಿಂದ 50 ವಿದ್ಯಾರ್ಥಿ
ಗಳು ಪ್ರವೇಶ ಪಡೆಯುತ್ತಿದ್ದಾರೆ. ಇದುವರೆಗೆ 208 ವಿದ್ಯಾರ್ಥಿಗಳು ತರಬೇತಿ ಪಡೆದು ಪ್ರತಿಷ್ಠಿತ ಕೈಗಾರಿಕೆ ಉದ್ಯಮಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಇಲ್ಲಿ ತರಬೇತಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ನೌಕರಿ ಲಭಿಸಿರುವುದು ಈ ಕೇಂದ್ರದ ಹೆಗ್ಗಳಿಕೆ.

ಎಸ್ಸೆಸ್ಸೆಲ್ಸಿ, ಪಿಯುಸಿ ಮಾಡಿರುವ ವಿದ್ಯಾರ್ಥಿಗಳು ಇಲ್ಲಿಗೆ ಸೇರ್ಪಡೆ ಯಾಗಬಹುದು. ಈ ಕೋರ್ಸ್ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ವಿದೇಶದಲ್ಲೂ ಹೆಚ್ಚಿನ ಅವಕಾಶವಿದೆ. ತರಬೇತಿ ಕೇಂದ್ರದಲ್ಲಿ ಇತರ ಪ್ರಮಾಣಪತ್ರದ ಕೋರ್ಸ್‌ ಗಳೂ ಇವೆ. ಟೂಲ್ ರೂಂ ಮೆಷಿನಿಸ್ಟ್‌, ಟೂಲ್ ಅಂಡ್ ಡೈ ಟೆಕ್ನೀಶಿಯನ್ ಕೋರ್ಸುಗಳಲ್ಲಿ ತರಬೇತಿ ನೀಡಲಾಗುತ್ತಿದೆ.

ತರಬೇತಿ ಕೇಂದ್ರವು ಕೌಶಲಾಭಿವೃದ್ಧಿ ಇಲಾಖೆ ಪ್ರಾಯೋಜನೆಯಡಿ ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ಯೋಜನೆ, ವಿಶೇಷಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಟೂಲ್ ರೂಂ ಮೆಷಿನಿಸ್ಟ್‌, ಸಿಎನ್‌ಸಿ ಟೆಕ್ನಾಲಜಿಸ್ಟ್ ಕ್ಯಾಡ್/ಕ್ಯಾಮ್ ಸ್ಪೆಷಲಿಸ್ಟ್, ಟರ್ನರ್, ಮಿಲ್ಲರ್ ವಿಷಯದಲ್ಲಿ ಅಲ್ಪಾವಧಿಯ ತರಬೇತಿಯನ್ನು ನೀಡುತ್ತಿದೆ.

ಕೌಶಲ ಅಭಿವೃದ್ಧಿಯ ಉದ್ದೇಶ: ಯುವಜನರಲ್ಲಿ ಕೌಶಲ ಅಭಿವೃದ್ಧಿಯನ್ನು ಹೆಚ್ಚಿಸುವ ಧ್ಯೇಯವನ್ನು ಹೊಂದಿರುವ ಈ ಸಂಸ್ಥೆಯು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಗ್ರಾಮೀಣ ಅಭ್ಯರ್ಥಿಗಳು ಆರ್ಥಿಕ ಸ್ವಾವಲಂಬನೆ ಸಾಧಿಸಲು ನೆರವಾಗುವ ಗುರಿಯನ್ನು ಹೊಂದಿದೆ. 

ಕೈಗಾರಿಕೆಗಳಲ್ಲಿ ಗರಿಷ್ಠ ಉತ್ಪಾದನೆಗೆ ಪೂರಕವಾಗುವಂತೆ ತರಬೇತಿ ಹಾಗೂ ಆವಿಷ್ಕಾರ ಕೌಶಲಗಳನ್ನು ಅಭ್ಯರ್ಥಿ
ಗಳಿಗೆ ತಿಳಿಸಿಕೊಡಲು ಇಲ್ಲಿ ಹೊಸಹೊಸ ತಂತ್ರ, ವಿಧಾನಗಳನ್ನು ಬಳಸಲಾಗುತ್ತಿದೆ.

ಅರ್ಜಿ ಸಲ್ಲಿಸಲು 31ರವರೆಗೆ ಅವಕಾಶ

ಈ ಸಾಲಿನ ವಿವಿಧ ಕೋರ್ಸ್‌ಗಳ ತರಬೇತಿಗಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌, ಆಫ್‌ಲೈನ್‌ ಮೂಲಕವೂ ಅರ್ಜಿ ಸಲ್ಲಿಸಬಹುದು. ಇದೇ 31 ಕೊನೆಯ ದಿನ

ಮಾಹಿತಿಗಾಗಿ ತರಬೇತಿ ಕೇಂದ್ರದ ಕಚೇರಿ ಅಥವಾ ದೂ.ಸಂ. 08229-222344, ಮೊಬೈಲ್‌ ಸಂಖ್ಯೆ 9844290405, 9964601660, 8861412626 ಸಂಪರ್ಕಿಸಬಹುದು. 

ಇಲ್ಲಿ ಕಲಿತವರಿಗೆ ಉದ್ಯೋಗಾವಕಾಶ ಸಾಕಷ್ಟು ಲಭ್ಯವಿದ್ದು, ಇದರ ಪ್ರಯೋಜನ ಪಡೆಯಲು ಅಭ್ಯರ್ಥಿಗಳು ಮುಂದೆ ಬರಬೇಕು’ ಎಂದು ಕೇಂದ್ರದ ಪ್ರಾಂಶುಪಾಲ ರಾಧಾಕೃಷ್ಣ ಎಚ್.ಎಂ. ಅವರು ಹೇಳಿದರು. 

–––––

ಜಿಟಿಟಿಸಿಯಲ್ಲಿ ತರಬೇತಿ ಪಡೆದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ತರಬೇತಿ ಪಡೆದರೆ ದೇಶ–ವಿದೇಶದಲ್ಲಿ ಉತ್ತಮ ಅವಕಾಶಗಳಿವೆ
ರಾಜೇಂದ್ರ, ಜಿಟಿಟಿಸಿ ಹಳೆ ವಿದ್ಯಾರ್ಥಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು