ಗುಂಡ್ಲುಪೇಟೆ: ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಾದಿಗ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಪರಿಶಿಷ್ಟ ಜಾತಿ (ಎಡಗೈ) ಮಾದಿಗ ಸಮುದಾಯದ ಮುಖಂಡರು ಒತ್ತಾಯಿಸಿದರು.

ಗದ್ದಿಗಲ್ಲು ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಮುದಾಯದ ಮುಖಂಡರು ಚರ್ಚೆ ನಡೆಸಿ, ‘ತಾಲ್ಲೂಕಿನಲ್ಲಿ ಮಾದಿಗ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಪ್ರತಿ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ನೀಡುತ್ತಿದೆ. ಸ್ಥಳೀಯ ಚುನಾವಣೆಯಲ್ಲಿ ಸಮುದಾಯದ ಮುಖಂಡರಿಗೆ ಹೆಚ್ಚು ಟಿಕೆಟ್ ನೀಡಬೇಕು’ ಎಂದು ಮನವಿ ಮಾಡಿದರು.

ಪ್ರಮುಖ ನಿರ್ಣಯಗಳು: ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ವಿಶೇಷ ಯೋಜನೆಯ ಅನುದಾನವನ್ನು ಸಾಮಾಜಿಕ ನ್ಯಾಯದಡಿ ಮಾದಿಗ ಸಮುದಾಯಕ್ಕೆ ಹಂಚಿಕೆ ಮಾಡಬೇಕು. ಪ್ರತಿ ಗ್ರಾಮಕ್ಕೂ ಸೌಲಭ್ಯ ಕಲ್ಪಿಸಬೇಕು. ಡಾ.ಬಾಬು ಜಗ ಜೀವನ್ ರಾಮ್ ತಾಲ್ಲೂಕು ಸಮುದಾಯ ಭವನವನ್ನು ಪೂರ್ಣಗೊಳಿಸಬೇಕು. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪ್ಪುರ್ ವಿರುದ್ಧ ವಿರೋಧ ಪಕ್ಷದವರು ಮಾಡುತ್ತಿರುವ ಷಡ್ಯಂತ್ರಕ್ಕೆ ಕಿವಿಗೊಡಬಾರದು. ಸ್ಥಳೀಯವಾಗಿ ಇರುವ ಗುತ್ತಿಗೆ ಆಧಾರಿತ ನೌಕರಿಯನ್ನು ಮಾದಿಗ ಸಮುದಾಯದ ನಿರುದ್ಯೋಗಿ ಯುವಕರಿಗೆ ಆದ್ಯತೆ ಮೇರೆಗೆ ನೀಡಬೇಕು ಎಂದು ಮುಖಂಡರು ನಿರ್ಣಯ ಕೈಗೊಂಡರು.

ಮುಖಂಡರಾದ ಸೋಮಶೇಖರ್, ಪುರಸಭೆಯ ಮಾಜಿ ಉಪಾಧ್ಯಕ್ಷ ಟಿ.ರಂಗಸ್ವಾಮಿ. ಹಂಗಳ ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಾಗಮಲ್ಲು, ಬಾಬು ಜಗಜೀವನ್ ರಾಂ ಸಂಘಟನೆ ತಾಲ್ಲೂಕು ಅಧ್ಯಕ್ಷ ನಿಟ್ರೆ ಮಹದೇವಯ್ಯ, ಗುಂಡ್ಲುಪೇಟೆ ಬ್ಲಾಕ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಅಂಕಳ್ಳಿ ಸಿದ್ದಯ್ಯ, ಹೊನ್ನಶೆಟ್ಟರೆಹುಂಡಿ ನರಸಿಂಹ, ಹಂಗಳ ಡೇರಿ ನಿರ್ದೇಶಕ ಜವರೇಶ್, ಗ್ಯಾರಂಟಿ ಸಮಿತಿ ಸದಸ್ಯ ಕಂದೇಗಾಲ ಮಹೇಶ್, ತೆರಕಣಾಂಬಿ ಮಹೇಶ್, ಕಲ್ಲಿಗೌಡನಹಳ್ಳಿ ಸಿದ್ದರಾಜು. ಸಿದ್ದಯ್ಯನಪುರ ದಾಸಯ್ಯ, ವಕೀಲರಾದ ಹಂಗಳ ರಾಜೇಶ್. ತೆರಕಣಾಂಬಿ ಮಹದೇವಸ್ವಾಮಿ, ಕಗ್ಗಳದಹುಂಡಿ ಗಂಗಾಧರ್, ಹೊನ್ನೇಗೌಡನಹಳ್ಳಿ ನಾಗಯ್ಯ, ಲೋಕೆಶ್, ಶಂಕರ್, 50 ಗ್ರಾಮಗಳ 250ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.