ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಪ್ಪನ ಬೆಟ್ಟದ ಚಿರತೆಗಾಗಿ ಅರಣ್ಯ ಇಲಾಖೆ ಯಿಂದ ಬೋನು, ಕ್ಯಾಮೆರಾ

Published 12 ಜುಲೈ 2023, 15:12 IST
Last Updated 12 ಜುಲೈ 2023, 15:12 IST
ಅಕ್ಷರ ಗಾತ್ರ

ಹನೂರು : 20 ದಿನಗಳ ಹಿಂದೆ ತಾಲ್ಲೂಕಿನ ದೊಡ್ಡಮಲಾಪುರ ಗ್ರಾಮದ ಸಮೀಪದಲ್ಲಿರುವ ಕಗ್ಗಲಿ ಗುಂದಿ ಗ್ರಾಮದಲ್ಲಿ ಶಾಲಾ ಬಾಲಕಿ ಹಾಗೂ ಕಂಚಗಳ್ಳಿ ಗ್ರಾಮದ ರೈತನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಮಾಸುವ ಮುನ್ನವೇ ಮಧುವನಹಳ್ಳಿ ಗ್ರಾಮದ ಸಿದ್ದಪ್ಪನ ಬೆಟ್ಟದಲ್ಲಿ ಚಿರತೆ ಪತ್ಯಕ್ಷವಾಗಿದೆ.

ಬೆಟ್ಟದ ಮೇಲೆ ಚಿರತೆ ನಡೆದಾಡುತ್ತಿರುವುದನ್ನು ಸ್ಥಳೀಯರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆದರೆ ಕಗ್ಗಲಿಗುಂದಿ ಹಾಗೂ ಕಂಚಗಳ್ಳಿ ಗ್ರಾಮದಲ್ಲಿ ದಾಳಿ ಮಾಡಿದ್ದ ಚಿರತೆ ಇದುವೇ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ಅಧಿಕಾರಿಗಳು ಖಚಿತಪಡಿಸಿಲ್ಲ. ಗುಂಡಾಲ್ ಜಲಾಶಯ ಹಾಗೂ ಕೆಂಪನ ಪಾಳ್ಯ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಈಗ ಸಿದ್ದಪ್ಪನ ಬೆಟ್ಟದಲ್ಲಿ ಪ್ರತ್ಯಕ್ಷವಾಗಿದೆ ಎಂಬುದು ಜನರ ಹೇಳಿಕೆ.

 ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದ್ದು, ಬೆಟ್ಟದ ಸುತ್ತಐದು ಬೋನುಗಳನ್ನು ಇರಿಸಲಾಗಿದೆ. 30 ಕಡೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎಲ್ಲೇ ಚಿರತೆ ಕಂಡರೂ ಗ್ದಾಮಸ್ಥರು ಇಲಾಖೆಗೆ ಮಾಹಿತಿ ನೀಡಬೇಕು ಎಂದು ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ ಕೊಳ್ಳೇಗಾಲ ವಲಯ ಅರಣ್ಯಾಧಿಕಾರಿ ವಾಸು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT