ಮಹದೇಶ್ವರ ಬೆಟ್ಟ: ಹನೂರು ಶಾಸಕ ಎಂ.ಆರ್.ಮಂಜುನಾಥ್ ಬುಧವಾರ ಪೊಲೀಸ್ ಇಲಾಖೆಗೆ ಮೂರು ಗಸ್ತು (ಜೀಪ್)ವಾಹನಗಳನ್ನು ಹಸ್ತಾಂತರ ಮಾಡಿದರು.

ತಾಲ್ಲೂಕಿನ ಹನೂರು, ರಾಮಪುರ, ಮಲೈ ಮಹದೇಶ್ವರ ಬೆಟ್ಟದ ಠಾಣೆಗಳಿಗೆ ಹೆಚ್ಚುವರಿ ಗಸ್ತು ವಾಹನಗಳ ಅಗತ್ಯತೆ ಕುರಿತ ಮನವಿಗೆ ಸ್ಪಂದಿಸದ ಶಾಸಕರು ಹೊಸ ವಾಹನಗಳನ್ನು ಖರೀದಿಸಿ ಪೊಲೀಸ್ ಇಲಾಖೆಗೆ ನೀಡಿದರು.

ಶಾಸಕ ಮಂಜುನಾಥ್ ಮಾತನಾಡಿ, ‘ಶಾಸಕರ ಅನುದಾನದಿಂದ ₹25 ಲಕ್ಷ ವ್ಯಯಿಸಿ ಪೊಲೀಸ್ ಇಲಾಖೆಗೆ ಜೀಪ್ಗಳನ್ನು ಖರೀದಿಸಿ ಕೊಡಲಾಗಿದೆ. ಹೊಸ ಗಸ್ತುವಾಹನಗಳಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ನೆರವಾಗಲಿದೆ’ ಎಂದರು.

ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಮಾತನಾಡಿ, ‘ಇಲಾಖೆಯಲ್ಲಿ ಗಸ್ತುವಾಹನಗಳ ಕೊರತೆ ಇರುವುದನ್ನು ಮನಗಂಡ ಶಾಸಕರು ಮೂರು ವಾಹನಗಳನ್ನು ನೀಡಿದ್ದಾರೆ. ಏಕಕಾಲಕ್ಕೆ ಮೂರು ಜೀಪ್ ನೀಡಿದ ಜಿಲ್ಲೆಯ ಮೊದಲ ಶಾಸಕರಾಗಿದ್ದಾರೆ’ ಎಂದು ಶ್ಲಾಘಿಸಿದರು.

ಹೆಚ್ಚುವರಿ ಎಸ್ಪಿ ಶಶಿಧರ್, ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ಡಿವೈಎಸ್ಪಿ ಧರ್ಮೇಂದ್ರ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.