ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಜೆಡಿಎಸ್‌ಗೆ ಅಧಿಕಾರ ತಪ್ಪಿಸಲು ಕಾಂಗ್ರೆಸ್‌, ಬಿಜೆಪಿ ಯತ್ನ?

ಹನೂರು ಪಟ್ಟಣ ಪಂಚಾಯಿತಿ: 7ರಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ, ಮೂರೂ ಪಕ್ಷಗಳ ಕಸರತ್ತು
Last Updated 4 ನವೆಂಬರ್ 2020, 19:45 IST
ಅಕ್ಷರ ಗಾತ್ರ

ಹನೂರು:ಇಲ್ಲಿನಪಟ್ಟಣಪಂಚಾಯಿತಿಗೆಅಧ್ಯಕ್ಷಮತ್ತುಉಪಾಧ್ಯಕ್ಷರ ಆಯ್ಕೆಗಾಗಿ ಇದೇ 7ರಂದು ಚುನಾವಣೆ ನಡೆಯಲಿದ್ದು, ಅಧಿಕಾರದ ಗದ್ದುಗೆ ಏರಲು ಜೆಡಿಎಸ್, ಕಾಂಗ್ರೆಸ್‌ ಹಾಗೂ ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ.

13ಸ್ಥಾನಗಳನ್ನುಹೊಂದಿರುವಪಟ್ಟಣಪಂಚಾಯಿತಿಯಲ್ಲಿಅಧಿಕಾರಹಿಡಿಯಲುಏಳು ಸದಸ್ಯರ ಬೆಂಬಲ ಬೇಕು. ಕಳೆದ ವರ್ಷ ನಡೆದಿದ್ದ ಚುನಾವಣೆಯಲ್ಲಿ ಜೆಡಿಎಸ್‌ ಆರು ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ನಾಲ್ಕು ಹಾಗೂ ಬಿಜೆಪಿ ಮೂರು ವಾರ್ಡ್‌ಗಳಲ್ಲಿ ಗೆದ್ದಿತ್ತು. ಎರಡುತಿಂಗಳಹಿಂದೆ2ನೇ ವಾರ್ಡ್‌ನ ಬಿಜೆಪಿ ಸದಸ್ಯ ನಾಗರಾಜು ಅವರು ಮೃತಪಟ್ಟಿದ್ದು, ಸದ್ಯ 12 ಮಂದಿ ಸದಸ್ಯರಿದ್ದಾರೆ.

ಯಾವಪಕ್ಷಕ್ಕೂಸ್ಪಷ್ಟಬಹುಮತವಿಲ್ಲದಿರುವುದರಿಂದಈಗ ಅತಂತ್ರಸ್ಥಿತಿಎದುರಾಗಿದೆ. ಆರು ಸದಸ್ಯರನ್ನು ಹೊಂದಿರುವ ಜೆಡಿಎಸ್‌ ದೊಡ್ಡ ಪಕ್ಷವಾಗಿದ್ದು, ಇನ್ನು ಒಬ್ಬರು ಸದಸ್ಯರ ಬೆಂಬಲ ಅದಕ್ಕೆ ಬೇಕಿದೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷೆ ಸ್ಥಾನ ಹಿಂದುಳಿದ ವರ್ಗ– ಬಿಗೆ ಮೀಸಲಾಗಿದೆ.

ಮೊದಲ ಬಾರಿಗೆ ಬಹುಮತದ ಸಮೀಪಕ್ಕೆ ಬಂದಿರುವ ಜೆಡಿಎಸ್ ಅಧಿಕಾರ ಹಿಡಿಯಲು ತೀವ್ರ ಕಸರತ್ತು ನಡೆಸುತ್ತಿದೆ. ಜೆಡಿಎಸ್‌ಗೆ ಅಧಿಕಾರ ಹೋಗಬಾರದು ಎಂದು ಕಾಂಗ್ರೆಸ್‌ ಹಾಗೂ ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ. ಕೊನೆ ಕ್ಷಣದಲ್ಲಿ ಬಿಜೆಪಿ, ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಏರಿದರೂ ಆಶ್ಚರ್ಯವಿಲ್ಲ ಎಂದು ಹೇಳುತ್ತಾರೆ ಪ‍ಂಚಾಯಿತಿ ರಾಜಕಾರಣವನ್ನು ಬಲ್ಲವರು.

ಶಾಸಕ ಹಾಗೂ ಸಂಸದರಿಗೂ ಮತದಾನ ಮಾಡಲು ಅವಕಾಶ ಇರುವುದರಿಂದ ಪರಸ್ಪರ ವೈರಿ ಪಕ್ಷಗಳಾಗಿರುವ ಕಾಂಗ್ರೆಸ್‌, ಬಿಜೆಪಿ ಒಂದಾದರೂ ಅಧಿಕಾರಕ್ಕೆ ಬರಬಹುದು. ಆದರೆ, ಅದು ನಡೆಯುತ್ತದೆಯೇ ಎಂಬುದು ಪ್ರಶ್ನೆ. ರಾಜ್ಯದ ಕೆಲವು ಕಡೆಗಳಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಅಧಿಕಾರ ಪಡೆದಿವೆ. ಹಾಗಾಗಿ, ಇಲ್ಲಿಯೂ ಆ ಸಾಧ್ಯತೆಯನ್ನು ತಳ್ಳಿ ಹಾಕುವಂತೆ ಇಲ್ಲ. ಆದರೆ, ಸ್ಥಳೀಯ ಬಿಜೆಪಿ ಮುಖಂಡರು ಇಲ್ಲಿ ಅದು ಅಸಂಭವ ಎಂದು ಹೇಳುತ್ತಿದ್ದಾರೆ.

ಇತ್ತ ಜೆಡಿಎಸ್‌ ಏಕಾಂಕಿಯಾಗಿ ಅಧಿಕಾರ ನಡೆಸಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಅಥವಾ ಕಾಂಗ್ರೆಸ್‌ನಿಂದ ಒಬ್ಬರು ಸದಸ್ಯರನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಕಾಂಗ್ರೆಸ್ ಮತ್ತು ಬಿಜೆಪಿ ಜೊತೆಯಾದರೆ ಬಿಜೆಪಿಯ ಚಂದ್ರಮ್ಮ ಅವರು ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಅಭ್ಯರ್ಥಿ ಹರೀಶ್ ಕುಮಾರ್ ಪಾಲಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಬಿಜೆಪಿ ಸದಸ್ಯೆ ಚಂದ್ರಮ್ಮ, ‘ಪಕ್ಷದ ವರಷ್ಠರು ಹಾಗೂ ಮುಖಂಡರು ಸಭೆ ನಡೆಸಿ ಯಾವ ತಿರ್ಮಾನಕ್ಕೆ ಬರುತ್ತಾರೋ, ಅದನ್ನು ನಾವು ಪಾಲಿಸುತ್ತೇವೆ’ ಎಂದರು.

ಶಾಸಕ ಆರ್‌.ನರೇಂದ್ರ ಅವರು ಪ್ರತಿಕ್ರಿಯಿಸಿ, ‘ಮೈತ್ರಿಯ ಬಗ್ಗೆ ಇದುವರೆಗೆ ಚರ್ಚೆಯಾಗಿಲ್ಲ. ಇನ್ನೆರಡು ದಿನಗಳಲ್ಲಿಸದಸ್ಯರು ಹಾಗೂ ಮುಖಂಡರ ಜೊತೆ ಚರ್ಚಿಸಿದ ನಂತರವಷ್ಟೇ ಈ ಬಗ್ಗೆ ಯೋಚಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT