ಡಾ. ಶ್ರೀಧರ್ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಯಳಂದೂರು
ಡಾ.ರಾಜಶೇಖರ್ ಕೊಳ್ಳೇಗಾಲ ಆಸ್ಪತ್ರೆಯ ವೈದ್ಯಾಧಿಕಾರಿ
ಆಹಾರದ ಬಗ್ಗೆ ಇರಲಿ ಕಾಳಜಿ
ಸಂಸ್ಕರಿತ (ರೆಡಿ ಟು ಈಟ್) ಆಹಾರ, ಅತಿಯಾದ ಉಪ್ಪಿನಂಶ ಇರುವ, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಕಾರ್ಬೊನೆಟೇಡ್ ತಂಪು ಪಾನೀಯಗಳ ಸೇವನೆಯಿಂದ ಹೃದಯಾಘಾತ ಸಂಭವಿಸುವ ಅಪಾಯ ಹೆಚ್ಚು ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ. ಪೋಷಕರು ಮಕ್ಕಳಿಗೆ ಜಂಕ್ ಫುಡ್‌ಗಳ ಬದಲಾಗಿ ಪೌಷ್ಟಿಕಾಂಶಯುಕ್ತ ಆಹಾರ ಕೊಡಬೇಕು, ಹಣ್ಣು, ಸೊಪ್ಪು, ತರಕಾರಿ ಸೇವನೆಯ ಅಭ್ಯಾಸ ಹೆಚ್ಚಿಸಬೇಕು. ಇಲ್ಲವಾದರೆ ಬಾಲ್ಯದಲ್ಲೇ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎನ್ನುತ್ತಾರೆ ವೈದ್ಯ ಡಾ.ಅಭಿಷೇಕ್.