ನಾಲ್ಕು ದಿನಗಳ ಅದ್ದೂರಿ ಜಾತ್ರೆ
ಹಿಂಡಿ ಮಾರಮ್ಮ ಜಾತ್ರಾ ಮಹೋತ್ಸವ ಅ.21 ರಿಂದ 24ರ ತನಕ ನಡೆಯಲಿದೆ. ಮೊದಲ ದಿನ ಮೆರವಣಿಗೆ ಎರಡನೇ ದಿನ ಕೇಲು ಉತ್ಸವ ಮೂರನೆ ದಿನ ಜಾತ್ರೆ ಮತ್ತು ಕೊಂಡೋತ್ಸವ ಹಾಗೂ ಕೊನೆಯ ದಿನ ದೂಳು ಮೆರವಣಿಗೆ ನಡೆಯಲಿದೆ. ಅಗರ-ಮಾಂಬಳ್ಳಿ ಕಿನಕಳ್ಳಿ ಕಟ್ನವಾಡಿ ಬಸಾಪುರ ಬನ್ನಿಸಾರಿಗೆ ಚಿಕ್ಕ ಉಪ್ಪಾರ ಬೀದಿಯ ಗ್ರಾಮಸ್ಥರು ಹಬ್ಬವನ್ನು ಚಂದಗೊಳಿಸುವಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂದು ನಾಡಗೌಡರಾದ ಬಿ.ಪುಟ್ಟಸುಬ್ಬಣ್ಣ ಎಂ.ಸಿ. ರಮೇಶ್ ಹೇಳಿದರು ಶಕ್ತಿ ದೇವತೆಯರ ಚಿತ್ರಕ್ಕೆ ಬಗೆಬಗೆ ಪುಷ್ಪಗಳಿಂದ ಅಲಂಕರಿಸಲಾಗಿದೆ.