ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮದಲ್ಲಿ ಬಿಸಲಿನ ತಾಪದಿಂದ ವಾಣಿಜ್ಯ ಬೆಳೆ ಏಲಕ್ಕಿ ಗಿಡದ ಬೆಳವಣಿಗೆ ತಗ್ಗಿರುವುದು
ಮಿಶ್ರಬೆಳೆಯಾಗಿ ಪ್ರಯೋಗ...
ತಾಲ್ಲೂಕಿನ ಗೌಡಹಳ್ಳಿ ಹಾಗೂ ಬಿಳಿಗಿರಿರಂಗನಬೆಟ್ಟದ ಸುತ್ತಮುತ್ತ ಏಲಕ್ಕಿ ಬೆಳೆಗಾರರು ಇದ್ದಾರೆ. 10ಕ್ಕೂ ಹೆಚ್ಚಿನ ಕೃಷಿಕರು ಅಡಿಕೆ ಮತ್ತು ತೆಂಗು ತಾಕಿನಲ್ಲಿ ನೆಟ್ಟು ಅಭಿವೃದ್ಧಿ ಪಡಿಸಿದ್ದಾರೆ. ಕಾಡಂಚಿನ ಭಾಗದ ರೈತರು 10 ಹೆಕ್ಟೇರ್ ಪ್ರದೇಶದಲ್ಲಿ ಇತರೆ ಬೆಳೆಗಳ ಜೊತೆಗೆ ಏಲಕ್ಕಿ ಬೆಳೆದಿದ್ದು, ಬೇಸಿಗೆ ಸಮಯದಲ್ಲಿ ಗಿಡಗಳ ರಕ್ಷಣೆಗೆ ಮುಂದಾಗಿದ್ದಾರೆ. ಈಚಿನ ದಿನಗಳಲ್ಲಿ ಏಲಕ್ಕಿ ಸಸಿಗಳನ್ನು ಪ್ರಾಯೋಗಿಕವಾಗಿ ನಾಟಿ ಮಾಡುವತ್ತ ಚಿತ್ತ ಹರಿಸಿದ್ದಾರೆ’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಸ್.ರಾಜು ಹೇಳಿದರು.