ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿ ನೌಕರರ ಕಾಲ್ನಡಿಗೆ ಜಾಥಾ

ಸರ್ಕಾರಿ ನೌಕರರಂದು ಪರಿಗಣಿಸಿ: ಮೆರವಣಿಗೆ ಮೂಲಕ ಸಾಗಿ ಸರ್ಕಾರಕ್ಕೆ ಮನವಿ
Last Updated 29 ಫೆಬ್ರುವರಿ 2020, 15:36 IST
ಅಕ್ಷರ ಗಾತ್ರ

ಚಾಮರಾಜನಗರ:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ನೌಕರರನ್ನು ಸರ್ಕಾರಿ ನೌರಕರರೆಂದು ಪರಿಗಣಿಸುವಂತೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಶುಕ್ರವಾರ ನಗರದಲ್ಲಿ ಕಾಲ್ನಡಿಗೆ ಜಾಥಾ ನಡೆಸಿದರು.

ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಕಾರರು, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ಮಾರ್ಗವಾಗಿ ಜಿಲ್ಲಾಡಳಿತ ಭವನದವರೆಗೆ ಸಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಆರ್‌.ರಾಚಪ್ಪ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

‘ಸಾರಿಗೆ ನೌಕರರು ಹಗಲು ರಾತ್ರಿ ಸಾರ್ವಜನಿಕ ಸೇವೆ ಮಾಡುತ್ತಿದ್ದಾರೆ. ಕೆಎಸ್‌ಆರ್‌ಟಿಸಿಯ ಎಲ್ಲ ವಿಚಾರಗಳಲ್ಲಿಯೂ ಸರ್ಕಾರ ನೇರವಾಗಿ ವ್ಯವಹಾರ ನಡೆಸುತ್ತಿದ್ದು, ವರ್ಗಾವಣೆ, ಹೊಸ ಬಸ್ಸುಗಳ ಖರೀದಿ, ನೌಕರರ ವೇತನ ಹೆಚ್ಚಳ, ದರ ನಿರ್ವಹಣೆ, ಪಾಸ್, ಪ್ರಯಾಣಿಕರ ನಿರ್ವಹಣೆ ಈ ಎಲ್ಲಾ ಕಾರ್ಯಗಳಿಗೆ ಸರ್ಕಾರದ ಅನುಮತಿ ಬೇಕು. ಆದರೆ, ನಮ್ಮನ್ನು ಮಾತ್ರ ಸರ್ಕಾರಿ ನೌರರರೆಂದು ಪರಿಗಣಿಸದಿರುವುದು ದುರದೃಷ್ಟಕರ’ ಎಂದು ಮನವಿ ಪ್ರತಿಭಟನಾನಿರತರು ಮನವಿ ಪತ್ರದಲ್ಲಿ ಹೇಳಿದ್ದಾರೆ.

‘ಈಗಾಗಲೇ ನಮ್ಮ ಸಂಸ್ಥೆಯ ಕೆಲವು ಕಾರ್ಮಿಕ ಸಂಘಟನೆಗಳು ವೇತನ ಹೆಚ್ಚಳಕ್ಕೆ ಮನವಿ ಸಲ್ಲಿಸುತ್ತಿದ್ದು, ಪ್ರತಿ ಬಾರಿ ವೇತನ ಹೆಚ್ಚಳ ಸಮಯದಲ್ಲಿ ಮುಷ್ಕರ ನಡೆಸಿಯೇ ವೇತನವನ್ನು ಶೇ 5, ಶೇ 10, ಶೇ 12.5ರಷ್ಟು ಹೆಚ್ಚಳ ಮಾಡಿಕೊಂಡಿದ್ದೇವೆ. ಹಾಗಿದ್ದರೂ ಸರ್ಕಾರಿ ನೌಕರರಿಗಿಂತ ಶೇ 30ರಷ್ಟು ಕಡಿಮೆ ವೇತನ ಪಡೆಯುತ್ತಿದ್ದೇವೆ. ನಾವು ಈಗ ಪಡೆಯುತ್ತಿರುವ ವೇತನದಲ್ಲಿ ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ, ಆರೋಗ್ಯ ರಕ್ಷಣೆ, ಬಹು ಕಷ್ಟಕರವಾಗಿರುತ್ತದೆ’ ಎಂದು ಅವರು ಹೇಳಿದ್ದಾರೆ.

‘ಮೂರು ವರ್ಷಗಳಿಂದ ಈ ಬಗ್ಗೆ ಸರ್ಕಾರದ ಗಮನಕ್ಕೆ ಪದೇ ಪದೇ ತರುತ್ತಿದ್ದೇವೆ. ಈಗಿನ ಸರ್ಕಾರ ತಜ್ಞರ ಸಮಿತಿ ಮಾಡಿ ನಮ್ಮಲ್ಲಿ ಆಶಾ ಭಾವನೆ ಮೂಡಿಸಿದೆ. ಆದರೆ ಈ ಸಮಿತಿಗೆ ಯಾವುದೇ ಕಾಲಮಿತಿ ನಿಗದಿಗೊಳಿಸಿಲ್ಲ. ಈ ಬಜೆಟ್ ಅಧಿವೇಶನದಲ್ಲಿ ನ್ಯಾಯಯುತ ಈಡೇರಿಸಿ ನ್ಯಾಯ ದೊರಕಿಸಿಕೊಡಬೇಕು’ ಎಂದು ಪ್ರತಿಭಟನನಿರತರು ಮನವಿ ಮಾಡಿದ್ದಾರೆ.

ಕೂಟದಆರ್.ರಾಮಣ್ಣ, ಸಿ.ಕೆ.ಭವಾನಿ, ರಂಗಸ್ವಾಮಿ, ಕೆ.ಆರ್.ನಾಗರಾಜು, ಬಿಳಿಗಿರಯ್ಯ, ರಾಜೇಶ್ ಉಮ್ಮತ್ತೂರು, ಹೆಚ್.ಪಿ.ಮಹದೇವಸ್ವಾಮಿ, ಶಿವಣ್ಣ, ದೊರೆಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT