ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಜೆಎಸ್‌ಎಸ್‌ ರಂಗೋತ್ಸವ

ಮೂರು ದಿನಗಳಲ್ಲಿ ನಾಲ್ಕು ನಾಟಕಗಳ ಪ್ರದರ್ಶನ
Last Updated 6 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜು ಮತ್ತು ಜೆಎಸ್‌ಎಸ್‌ ಪದವಿಪೂರ್ವ ಮಹಿಳಾ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಮೈಸೂರಿನ ಜೆಎಸ್‌ಎಸ್‌ ಮಹಾವಿದ್ಯಾಪೀಠವು ಡಿ.7ರಿಂದ 9ರವರೆಗೆ ರಂಗೋತ್ಸವವನ್ನು ನಗರದ ಜೆಎಸ್‌ಎಸ್‌ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದೆ.

ಡಿ.7ರಂದು ಬೆಳಿಗ್ಗೆ 11ಕ್ಕೆ ರಂಗಕರ್ಮಿ ಪ್ರೊ.ಎಚ್‌.ಎಸ್‌. ಉಮೇಶ್‌ ಅವರು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯದರ್ಶಿ ಪ್ರೊ.ಎಸ್‌.ಪಿ.ಮಂಜುನಾಥ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಮೀನಾ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ನಾಲ್ಕು ನಾಟಕಗಳ ಪ್ರದರ್ಶನ: ರಂಗೋತ್ಸದ ಅಂಗವಾಗಿ ಮೂರು ದಿನಗಳಲ್ಲಿ ನಾಲ್ಕು ನಾಟಕಗಳು ಪ್ರದರ್ಶನಗೊಳ್ಳಲಿವೆ. ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳೇ ಅಭಿನಯಿಸಲಿದ್ದಾರೆ. ಪ್ರತಿಯೊಂದು ನಾಟಕವೂ ಎರಡು ಬಾರಿ ಪ್ರದರ್ಶನಗೊಳ್ಳಲಿದ್ದು, ಪ್ರತೀ ದಿನದ ಮೊದಲ ಪ್ರದರ್ಶನ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ಎರಡನೇ ಪ್ರದರ್ಶನ ಸಾರ್ವಜನಿಕರಿಗೆ ಮೀಸಲಿಡಲಾಗಿದೆ. ಪ್ರವೇಶ ಉಚಿತ.

ನಾಟಕ ಪ್ರದರ್ಶನದ ವಿವರ
ಡಿ.7, ಶುಕ್ರವಾರ, ಸಮಯ: ಮಧ್ಯಾಹ್ನ 12 ಮತ್ತು ಸಂಜೆ 6.30
ನಾಟಕ: ತಲೆಬಾಗದ ಜನ. ರಚನೆ: ಕೆ.ವೆಂಕಟರಾಜು. ನಿರ್ದೇಶನ: ಮಂಜುನಾಥ (ಕಾಚಕ್ಕಿ). ಅಭಿನಯ: ನಂಜನಗೂಡಿನಮಹದೇವನಗರದ ಜೆಎಸ್ಎಸ್ ಪ್ರೌಢಶಾಲೆ ವಿದ್ಯಾರ್ಥಿಗಳು

ಡಿ.8, ಶನಿವಾರ,ಸಮಯ: ಮಧ್ಯಾಹ್ನ 12 ಮತ್ತು ಸಂಜೆ 6.30
ನಾಟಕ: ಇಲಿ ಮಡಕೆ, ರಚನೆ: ಯತೀಶ್‌, ಕೊಳ್ಳೇಗಾಲ, ನಿರ್ದೇಶನ: ಜೀವನ್‌ಕುಮಾರ್‌ ಬಿ. ಹೆಗ್ಗೋಡು, ಅಭಿನಯ: ಮೈಸೂರು ಊಟಿ ರಸ್ತೆಯ ಜೆಎಸ್‌ಎಸ್‌ ಪದವಿ ಕಾಲೇಜು ವಿದ್ಯಾರ್ಥಿಗಳು

ಡಿ.8, ಶನಿವಾರ, ಸಮಯ: ಮಧ್ಯಾಹ್ನ 2.30 ಮತ್ತು ರಾತ್ರಿ 7.30
ನಾಟಕ: ನೇಗಿಲನೆತ್ತರು, ರಚನೆ: ಸೂರಿ ಅಣಚುಕ್ಕಿ, ನಿರ್ದೇಶನ: ಡಿಂಗ್ರಿ ಸುರೇಶ್‌, ಅಭಿನಯ: ಚಾಮರಾಜನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜು ವಿದ್ಯಾರ್ಥಿಗಳು

ಡಿ.9, ಶನಿವಾರ, ಸಮಯ: ಮಧ್ಯಾಹ್ನ 12 ಮತ್ತು ಸಂಜೆ 6.30
ನಾಟಕ: ನಾಯಿತಿಪ್ಪ, ರಚನೆ: ಕೋಟಗಾನಹಳ್ಳಿ ರಾಮಯ್ಯ, ನಿರ್ದೇಶನ: ಚಂದ್ರಶೇಖರಾಚಾರ್‌, ಹೆಗ್ಗೊಠಾರ, ಅಭಿನಯ: ಮೈಸೂರಿನ ನಾಚನಹಳ್ಳಿ ಪಾಳ್ಯ ಜೆಎಸ್‌ಎಸ್‌ ಪ್ರೌಢಶಾಲೆ ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT