ಚಾಮರಾಜನಗರ: ಕಬ್ಬು ಬೆಳೆಗಾರರ ಪರವಾಗಿ ಹೋರಾಡುತ್ತಿರುವ ‘ರಾಜ್ಯ ಕಬ್ಬು ಬೆಳೆಗಾರರ ಸಂಘ’ ಇಬ್ಭಾಗವಾಗಿದೆ. ಸಂಘದ ಮೈಸೂರು–ಚಾಮರಾಜನಗರ ಘಟಕದ ಕಾರ್ಯಾಧ್ಯಕ್ಷರಾಗಿದ್ದ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹಾಗೂ ಬೆಂಬಲಿಗರು ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರಿಂದ ದೂರವಾಗಿದ್ದು, ‘ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ’ ಎಂಬ ಹೊಸ ಸಂಘಟನೆ ಕಟ್ಟಿಕೊಂಡಿದ್ದಾರೆ.

‘ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ಕೆಲವು ನಡೆಗಳನ್ನು ಪ್ರಶ್ನಿಸಿದ್ದಕ್ಕೆ, ವೈಯಕ್ತಿಕ ವಿಚಾರಗಳನ್ನಿಟ್ಟುಕೊಂಡು ನೋಟಿಸ್ ನೀಡಿದ್ದರು. ನಮ್ಮನ್ನು ಸಂಘದಿಂದ ಹೊರ ಹಾಕಲು ಯತ್ನ ನಡೆದಿತ್ತು. ಹಾಗಾಗಿ, ನಾವೇ ಹೊರ ಬಂದು ಸಂಘಟನೆ ಮಾಡಿದ್ದೇವೆ’ ಎಂದು ಹೊಸ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ವಿಷಯವನ್ನು ದೃಢಪಡಿಸಿರುವ ಶಾಂತಕುಮಾರ್, ‘ಸಂಘದಲ್ಲಿ ಶಿಸ್ತಿಗೆ ಮಹತ್ವ ಕೊಡುತ್ತೇವೆ. ಸಂಘಟನೆಯಲ್ಲಿರುವವರು ಶಿಸ್ತಿನಿಂದ ನಡೆದುಕೊಳ್ಳಬೇಕು. ವರ್ತನೆ ಸರಿಪಡಿಸಿಕೊಳ್ಳುವಂತೆ ಶಿಸ್ತು ಸಮಿತಿ ನೋಟಿಸ್ ನೀಡಿತ್ತು. ಎಚ್ಚರಿಕೆಯನ್ನೂ ನೀಡಿದ್ದೆವು. ಅದು ಬಿಟ್ಟರೆ, ನಾವು ಅವರನ್ನು ಹೊರಗೆ ಹಾಕಿಲ್ಲ’ ಎಂದರು.

ಚಾಮರಾಜನಗರ ಮೈಸೂರು ಮಂಡ್ಯ ದಾವಣಗೆರೆ ಸೇರಿ 7 ಜಿಲ್ಲೆಯವರು ಬೆಂಬಲ ನೀಡಿದ್ದಾರೆ. ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಹೋರಾಟ ನಡೆಸಲಿದ್ದೇವೆ - ಹಳ್ಳಿಕೆರೆಹುಂಡಿ ಭಾಗ್ಯರಾಜ್ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ

ಯಾರು ಇದ್ದರೂ ಇಲ್ಲದಿದ್ದರೂ ಸಂಘ ಹೋರಾಟ ಮುಂದುವರಿಯುತ್ತದೆ. ಹೊಸ ಸಂಘಟನೆ ಮೂಲಕ ಅವರು ಕೂಡ ಜನರಿಗೆ ರೈತರಿಗೆ ಒಳ್ಳೆಯದನ್ನೇ ಮಾಡಲಿ - ಕುರುಬೂರು ಶಾಂತಕುಮಾರ್ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.