ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪಕ್ಷಗಳು, ಸಂಘಟನೆಗಳಿಂದ ರಾಜ್ಯೋತ್ಸವ ಆಚರಣೆ

Last Updated 1 ನವೆಂಬರ್ 2020, 13:35 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು, ಸರ್ಕಾರಿ ಕಚೇರಿಗಳು, ಶಾಲಾ, ಕಾಲೇಜುಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.ನಾಡ ಧ್ವಜರೋಹಣ ನೆರವೇರಿಸಿ ಗೌರವ ಸಲ್ಲಿಸಲಾಯಿತು.

ಕನ್ನಡ ರಕ್ಷಣಾ ವೇದಿಕೆ: ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ಜಿಲ್ಲಾಡಳಿತ ಭವನದ ಪ್ರವೇಶದ್ವಾರದ ಬಳಿ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಯಿತು. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಧ್ವಜಾರೋಹಣ ಮಾಡಿದರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್‌ ಅವರು ದೀಪ ಬೆಳಗಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಶ್ರಮಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಎಸ್‌ಪಿ ದಿವ್ಯ ಸಾರಾ ಥಾಮಸ್‌ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯ ರಾಜ್ಯಾಧ್ಯಕ್ಷ ಚಾ.ಗು.ನಾಗರಾಜು, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್, ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ.ಮುರಳಿ, ವೇದಿಕೆ ಸದಸ್ಯರಾದ ಮಹೇಶ್ ‌ಬಿಲ್ಲಾಡ್, ಸ್ವಾಮಿ, ರವಿ(ರಾಚಪ್ಪ) ರಾಮಸಮುದ್ರ ಶಿವು, ಮುಖಂಡರಾದ ಲತಾ.ಎಂ., ಸಿದ್ದಮ್ಮ, ಸರೋಜಮ್ಮ, ನಾರಾಯಣ, ರಾಜೇಶ್, ಗುರುವಾ, ರಂಗಸ್ವಾಮಿ ಮುರುಗಾ, ಸಿದ್ದಪ್ಪ, ರಘು, ಆಲೂರು ನಾಗೇಂದ್ರ, ಮತ್ತಿತರರು ಇದ್ದರು.

ಕಾಂಗ್ರೆಸ್ ಕಚೇರಿ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ೬೫ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರು ಧ್ವಜಾರೋಹಣ ನೆರವೇರಿಸಿದರು.ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ, ಆರ್.ಮಹದೇವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್‌ ಅಸ್ಗರ್, ಎಪಿಎಂಸಿ ಅಧ್ಯಕ್ಷ ನಾಗೇಂದ್ರ, ನಗರಸಭಾ ಸದಸ್ಯರಾದ ಚಿನ್ನಮ್ಮ, ಭಾಗ್ಯಮ್ಮ, ನೀಲಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯ ಕುಮಾರನಾಯಕ್‌ ಮತ್ತಿತರರು ಇದ್ದರು.

ಬಿಜೆಪಿ ಕಚೇರಿ: ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಪಕ್ಷದ ಕಚೇರಿಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಆರ್‌.ಸುಂದರ್‌ ಅವರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಮುಖಂಡ ಸುರೇಶ್‌ನಾಯಕ ಧ್ವಜಾರೋಹಣ ನೆರವೇರಿಸಿದರು.

ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಚಂದ್ರಶೇಖರ್, ನಗರಮಂಡಲ ಪ್ರಧಾನ ಕಾರ್ಯದರ್ಶಿ ರಾಜೇಶ್, ಎಸ್‌ಟಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಮಹದೇವನಾಯಕ, ಕಿರಣ್, ಯುವಮೋರ್ಚಾದ ಅಧ್ಯಕ್ಷ ಆನಂದ್‌ಭಗೀರಥ್, ಮುಖಂಡ ನಿಜಗುಣರಾಜು, ರಂಗಸ್ವಾಮಿ, ಅಭಿಜಿತ್, ರವಿ ಇದ್ದರು. ‌‌‌

‌ಶ್ರೀರಾಮಚಂದ್ರ ವಿದ್ಯಾಸಂಸ್ಥೆ: ಶ್ರೀರಾಮಚಂದ್ರ ವಿದ್ಯಾಸಂಸ್ಥೆಯಲ್ಲಿ ೬೫ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಅಧ್ಯಕ್ಷ ಎಂ.ಎಸ್‌.ಮಾದಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ರಾಮಚಂದ್ರ ಪ್ರೌಢಶಾಲೆ ಮುಖ್ಯಾಶಿಕ್ಷಕರಂಗಸ್ವಾಮಿ, ಟಿಇಡಿ ಕಾಲೇಜಿನ ಪ್ರಾಂಶುಪಾಲಸೋಮಶೇಖರ್ ಬಿಸಲ್ವಾಡಿ ದೈಹಿಕ ಶಿಕ್ಷಕ ರಂಗಸ್ವಾಮಿ, ಶಿಕ್ಷಕರಾದ ವೀರಣ್ಣ, ರತ್ನಮ್ಮ, ಪುಟ್ಟಸ್ವಾಮಿ, ರಾಜಶೇಖರ್, ಕಲಾವತಿ, ಮಹೇಶ್, ಮಹದೇವಸ್ವಾಮಿ, ಮಂಜುಳ.ಎಂ., ಪುಟ್ಟಮಾದಯ್ಯ ಇದ್ದರು.

ಗಡಿನಾಡು ಕನ್ನಡ ರಕ್ಷಣಾ ವೇದಿಕೆ: ನಗರದ ಗಡಿನಾಡು ಕನ್ನಡ ರಕ್ಷಣಾ ವೇದಿಕೆ ನ್ಯಾಯಾಲಯ ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಡಾ.ಲಕ್ಷ್ಮಮ್ಮ ಅವರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಧ್ವಜಾರೋಹಣೆ ಮಾಡಿದರು.

ವೇದಿಕೆ ರಾಜ್ಯ ಘಟಕದ ಅಧ್ಯಕ್ಷಚಾ.ರಾ.ಕುಮಾರ್, ಜಿಲ್ಲಾ ಉಪಾಧ್ಯಕ್ಷ ಆಟೊಚಾ.ಸಿ.ಮಂಜುನಾಥ್, ರವಿಚಂದ್ರಪ್ರಸಾದ್ ಕಹಳೆ, ಆಟೊ ಪಾಪಣ್ಣ, ಪ್ರಶಾಂತ್, ತೇಜಾಶ್ರೀ, ನಾಗಮ್ಮ, ಗಣೇಶ್‌ಕುಮಾರ್ ಇದ್ದರು.

ಎಸ್‌ಪಿಬಿ ಅಭಿಮಾನಿಗಳ ಬಳಗದಿಂದ ಗೀತಾಂಜಲಿ: ಕನ್ನಡ ರಾಜ್ಯೋತ್ಸವ ಅಂಗವಾಗಿ ನಗರದ ಗೃಹಮಂಡಳಿ ಕಾಲೊನಿಯಲ್ಲಿ
ಎಸ್.ಪಿ.ಬಾಲಸುಬ್ರಹ್ಮಣ್ಯಂ ಅಭಿಮಾನಿ ಬಳಗದ ವತಿಯಿಂದ ಎಸ್‌ಪಿಬಿ ಗೀತಾಗಾಯನ ಗೀತಾಂಜಲಿ ಕಾರ್ಯಕ್ರಮ ನಡೆಯಿತು.

ಅಭಿಮಾನಿ ಬಳಗದ ಗೌರವಾಧ್ಯಕ್ಷ ಉಮ್ಮತ್ತೂರು ಚಂದ್ರು ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮುಖಂಡರಾಮಸಮುದ್ರ ವೇಣುಗೋಪಾಲ್, ಅಭಿಮಾನಿ ಬಳಗದ ಅಧ್ಯಕ್ಷ ಎಚ್.ಎಂ.ಶಿವಣ್ಣ, ಉಪಾಧ್ಯಕ್ಷ ಶಿವಶಂಕರ್, ನಾಗಮಹಾದೇವು, ದೊರೆರಾಜ್, ಪ್ರಕಾಶ್, ಗಿರೀಶ್ ಸೇರಿದಂತೆ ಇತರರು ಹಾಜರಿದ್ದರು.ಕಾರ್ಯಕ್ರಮದಲ್ಲಿ ಕಲಾವಿದರು ಎಸ್‌ಪಿಬಿ ಅವರ ಗೀತೆಗಳನ್ನು ಹಾಡಿದರು.

ಗಡಿ ಭಾಗದ ಗ್ರಾಮಗಳಲ್ಲಿ ಪುಸ್ತಕ ವಿತರಿಸಿ ರಾಜ್ಯೋತ್ಸವ ಆಚರಣೆ
ಜಿಲ್ಲೆಯ ಯುವ ಸಾಹಿತಿ ಕೆ.ಶ್ರೀಧರ್‌ (ಸಿರಿ) ಅವರು ತಾಲ್ಲೂಕಿನ ಗಡಿ ಗ್ರಾಮಗಳ ಮಕ್ಕಳಿಗೆ ಹಾಗೂ ಯುವಕರಿಗೆ ಕನ್ನಡ ಪುಸ್ತಕಗಳನ್ನು ವಿತರಿಸುವ ಮೂಲಕ ರಾಜ್ಯೋತ್ಸವ ಆಚರಿಸಿದರು.

ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಚಿಕ್ಕಹೊಳೆ ಹಾಗೂ ಅಟ್ಟುಗೂಳಿಪುರ ಗ್ರಾಮಗಳ ಮಕ್ಕಳಿಗೆ ಕನ್ನಡ ವರ್ಣಮಾಲಾ ಪುಸ್ತಕ, ಕಾಗುಣಿತ ಪುಸ್ತಕ, ಲೇಖನಿ ಹಾಗೂ ಕನ್ನಡ ಅಂಕಿಗಳ ಪುಸ್ತಕಗಳನ್ನು ವಿತರಿಸಿ ಕನ್ನಡ ಪ್ರಾಸಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ರಂಜಿಸಿದರು‌. ಯುವಕರಿಗೆ ಕನ್ನಡ ಸಾಹಿತಿಗಳ ಪುಸ್ತಕಗಳನ್ನು ವಿತರಿಸಿದರು.

ಚಾಮರಾಜನಗರ ಪಟ್ಟಣ ಠಾಣೆ ಎಎಸ್‌ಐ ಎಂ‌‌‌.ಸಿದ್ದರಾಜನಾಯಕ, ಚಿಕ್ಕಹೊಳೆ ಗ್ರಾಮದ ಮುಖಂಡ ಮೂರ್ತಿ, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಡಾ.ಕುಮಾರ್, ಗೌರವಾಧ್ಯಕ್ಷ ನಾಗೇಂದ್ರ, ಟಿ.ಕುಮಾರ್, ವಾಟರ್ ಮ್ಯಾನ್ ನಾಗರಾಜು, ಪಟ್ಟಣ ಠಾಣೆ ಅಪರಾಧ ವಿಭಾಗದ ಮುಖ್ಯ ಪೇದೆ ಶಂಕರ್, ಚಿಕ್ಕಹೋಳೆ ಬೀಟ್ ಪೊಲೀಸ್ ರಾಜೇಶ್, ಮುಖಂಡ ಅಂಕಶೆಟ್ಟಿಪುರ ಮಹದೇವಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT