ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಆಜಾದ್ ಹಿಂದೂ ಸೇನೆಯಿಂದ ಕಾರ್ಗಿಲ್ ವಿಜಯೋತ್ಸವ

Last Updated 27 ಜುಲೈ 2021, 2:27 IST
ಅಕ್ಷರ ಗಾತ್ರ

ಚಾಮರಾಜನಗರ: ಕಾರ್ಗಿಲ್‌ ಯುದ್ಧದಲ್ಲಿ ಭಾರತೀಯ ಸೇನೆ ಜಯಗಳಿಸಿದ ದಿನದ (ಜುಲೈ 26) ಅಂಗವಾಗಿಆಜಾದ್‌ ಹಿಂದೂ ಸೇನೆ ವತಿಯಿಂದ ‘ಕಾರ್ಗಿಲ್‌ ವಿಜಯ ದಿವಸ’ ಆಚರಿಸಲಾಯಿತು.

ಚಾಮರಾಜೇಶ್ವರ ಉದ್ಯಾನವನದ ಅವರಣದಲ್ಲಿ ಸೋಮವಾರ ರಾತ್ರಿ ಆಯೋಜಿಸಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ಯುದ್ಧದಲ್ಲಿ ಹುತಾತ್ಮರಾದ ಯೋಧರು ಹಾಗು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಆಜಾದ್ ಹಿಂದೂ ಸೇನೆಯ ರಾಜ್ಯಾಧ್ಯಕ್ಷ ಎಂ.ಎಸ್‌.ಫೃಥ್ವಿರಾಜ್ ಅವರು ಮಾತನಾಡಿ, ‘22 ವರ್ಷಗಳ ಹಿಂದೆ ಇದೇ ದಿನ ಭಾರತೀಯ ಸೈನಿಕರು ಪಾಕಿಸ್ತಾನ ಸೈನ್ಯವನ್ನು ಮಣಿಸಿ ಶೌರ್ಯ ಮೆರೆದಿದ್ದರು. ಈ ಯುದ್ಧದಲ್ಲಿ 527 ಭಾರರತೀಯ ಸೈನಿಕರು ವೀರಮರಣ ಅಪ್ಪಿದರು. ಅವರಿಗೆ ಗೌರವ ಸಮರ್ಪಣೆ ಮಾಡುವುದು ಪ್ರತಿ ಭಾರತೀಯನ ಕರ್ತವ್ಯ’ ಎಂದರು.

ಅಜಾದ್ ಹಿಂದೂ ಸೇನೆಯ ಜಿಲ್ಲಾ ಗೌರವ ಅಧ್ಯಕ್ಷ ಚಂದ್ರಶೇಖರ್, ಟೌನ್‌ ಅಧ್ಯಕ್ಷ ಶಿವು, ನಗರಸಭಾ ಸದಸ್ಯ ಮಂಜುನಾಥ್, ಮುಖಂಡರಾದ ಸುರೇಶ್ ನಾಯಕ, ಚಿನ್ನಸ್ವಾಮಿ, ರಾಜೇಶ್, ಕಾಂತರಾಜ್, ಸಿ.ಎಂ ಮಂಜುನಾಥಗೌಡ, ವರದನಾಯಕ, ಸಿ.ಎಂ.ನರಸಿಂಹಮೂರ್ತಿ, ಮಾರ್ಕೆಟ್‌ ಕುಮಾರ್, ಜಿ.ಪ್ರಶಾಂತ್, ಮಹದೇವಸ್ವಾಮಿ ಅಟ್ಟುಗೂಳಿಪುರ, ಪುಣಜನೂರು ಗಿರೀಶ್, ಹರೀಶ್, ಪ್ರವೀಣ್ ಕುಮಾರ್, ಹರದನಹಳ್ಳಿ ರವಿ, ಪ್ರದೀಪ್, ಮನು, ಪ್ರಸನ್ನ, ರಾಘು, ಮಂಗಲ ಚೆಲುವರಾಜ್, ಬಲ್ಪ್, ಮಾಧು, ರಾಚಶೆಟ್ಟಿ, ದೇವರಾಜ್, ರಾಘವೇಂದ್ರ, ಮಹೇಶ್ ಇತರರು ಇದ್ದರು.

ಹೈಹಿಂದ್‌ ಕಟ್ಟೆಯಲ್ಲಿ ಆಚರಣೆ: ನಗರದ ಜೈಹಿಂದ್‌ ಪ್ರತಿಷ್ಠಾನದ ವತಿಯಿಂದ ಶಂಕರಪುರದ ಜೈಹಿಂದ್‌ ಕಟ್ಟೆಯಲ್ಲಿ ಕಾರ್ಗಿಲ್‌ ವಿಜಯ ದಿವಸ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸೈನಿಕ ಉಮೇಶ್‌ ಅವರು, ‘ಕಾರ್ಗಿಲ್ ವಿಜಯವು ಭಾರತೀಯ ಸೈನಿಕರ ಮನೋಬಲ ಮತ್ತು ಆತ್ಮಸ್ಥೈರ್ಯವನ್ನು ಹೆಚ್ಚಿಸಿತು. ಕಾರ್ಗಿಲ್ ವಿಜಯೋತ್ಸವ ಭಾರತೀಯರ ಹೆಮ್ಮೆ ಮತ್ತು ಗೌರವವನ್ನು ಸದಾ ಕಾಲ ಉಳಿಯುವಂತೆ ಮಾಡಿತು’ ಎಂದರು.

ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ, ಓಂ ಶಾಂತಿ ನ್ಯೂಸ್‌ ಏಜೆನ್ಸಿಯ ಬಿ.ಕೆ.ಆರಾಧ್ಯ ಮಾತನಾಡಿದರು.

ನಿವೃತ್ತ ಸೈನಿಕರಾದ ಉಮೇಶ್ ಕೋಟಂಬಳ್ಳಿ ಆವರನ್ನು ಸನ್ಮಾನಿಸಲಾಯಿತು.ಸರೋಜಮ್ಮ, ರಾಜಗೋಪಾಲ್, ಶಂಕರ ಸಮಿತಿಯ ರವಿ, ಶ್ರೀನಿವಾಸ್, ನಾಗ ಸುಂದರ, ಝಾನ್ಸಿ ಯೂತ್ ಕ್ಲಬ್ ಶ್ರಾವ್ಯ ಋಗ್ವೇದಿ, ಸಿಂಚನ, ಸುಮನ್, ಕುಸುಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT