ಕೆಪಿಎಸ್ ಶಾಲೆಗಳಿಗೆ ಸರ್ಕಾರದಿಂದ ವಿಶೇಷ ಅನುದಾನ ಲಭ್ಯವಾಗಲಿದೆ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಕೆಗೆ ಅವಕಾಶ ಸಿಗಲಿದೆ. ಈಗಿರುವ ಶಾಲೆಗಳನ್ನೇ ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುವುದು
–ಚಂದ್ರಪಾಟೀಲ್, ಡಿಡಿಪಿಐ
ಕ್ರಿಯಾಶೀಲ ಕಲಿಕೆಗೆ ಅವಕಾಶ
6 ರಿಂದ 10ನೇ ತರಗತಿವರೆಗೆ ಮಾಧ್ಯಮವಾರು ಏಕ ತರಗತಿ ಪಠ್ಯಪುಸ್ತಕ ಆಧಾರಿತ ತರಗತಿಗಳು ನಡೆಯಲಿವೆ ಕ್ರಿಯಾಶೀಲ ಕಲಿಕಾ ಪದ್ಧತಿ ಅಳವಡಿಸಿಕೊಳ್ಳಲಾಗುತ್ತದೆ. 10 ರಿಂದ 12ನೇ ತರಗತಿಗೆ ನಿರ್ಗಮನ ಆಯ್ಕೆಗಳನ್ನು ಒದಗಿಸಲಾಗತ್ತಿದೆ. ಸೇವಾನಿರತ ಶಿಕ್ಷಕರಿಗೆ ಅರ್ಹತಾ ಪರೀಕ್ಷೆ ನಡೆಸಿ ಆಯ್ಕೆಯಾದವರಿಗೆ ಅಗತ್ಯ ತರಬೇತಿಯನ್ನೂ ನೀಡಿ ಕೆಪಿಎಸ್ ಶಾಲೆಗಳಿಗೆ ಪಾಠ ಮಾಡಲು ನಿಯೋಜಿಸಲಾಗುವುದು. ಕೆಪಿಎಸ್ ಶಾಲೆಗೆ ಆಡಳಿತ ಮಂಡಳಿ ರಚನೆಯಾಗಲಿದ್ದು ಪಿಯು ಪ್ರಾಂಶುಪಾಲರು ಅಧ್ಯಕ್ಷರಾಗಲಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯಸ್ಥರು ಉಪಾಧ್ಯಕ್ಷರಾಗಲಿದ್ದಾರೆ. ಎಸ್‌ಡಿಎಂಸಿಇ ನಿರ್ದೇಶಿತ ಇಬ್ಬರು ಸದಸ್ಯರು ಇರಲಿದ್ದು ಜಂಟಿ ಖಾತೆಯಲ್ಲಿ ನಿರ್ವಹಣೆ ನಡೆಯಲಿದೆ. ಶಾಸಕರ ಅಧ್ಯಕ್ಷತೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ರಚಿಸಲು ಅವಕಾಶ ಕಲ್ಪಿಸಲಾಗಿದೆ.