ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಡ್ಲುಪೇಟೆ | ಕೆರೆ ಮಣ್ಣು ಅಕ್ರಮ ಮಾರಾಟ: ಗ್ರಾಮಸ್ಥರ ಆರೋಪ

Published 20 ಜೂನ್ 2024, 14:30 IST
Last Updated 20 ಜೂನ್ 2024, 14:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಶಿವಪುರ ಗ್ರಾಮ ಪಂಚಾಯಿತಿಯ ಕಲ್ಲಿಗೌಡನಹಳ್ಳಿ ವಗರಕಟ್ಟೆ ಕೆರೆಯ ಮಣ್ಣನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

 ಪಂಚಾಯಿತಿ ಸದಸ್ಯರೊಬ್ಬರು ಬೆಂಗಳೂರಿನ ಉದ್ಯಮಿಯೊಬ್ಬರ ಜಮೀನಿಗೆ ಲೋಡ್‌ಗೆ ₹600ರಂತೆ ಮಣ್ಣು ಮಾರಾಟ ಮಾಡುತ್ತಿದ್ದಾರೆ.  ಪಂಚಾಯತಿ ಅಧಿಕಾರಿಗಳಾಗಲಿ, ತಹಶೀಲ್ದಾರ್ ಆಗಲಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಹಿಂದೆಯೂ ಅನೇಕ ಭಾರಿ ಕೆರೆ ಮತ್ತು ಕಂದಾಯ ಭೂಮಿಯಲ್ಲಿ ಮಣ್ಣನ್ನು ತೆಗೆದಿದ್ದರು.  ಅಂದು ಗ್ರಾಮ ಆಡಳಿತಾಧಿಕಾರಿ ಅವರು ಭೇಟಿ ಮಾಡಿ ಮಣ್ಣು ತೆಗೆಯದಂತೆ ಎಚ್ಚರ ನೀಡಿದ್ದರು.

ಹಂಗಳ ಹೋಬಳಿ ಕಲೀಗೌಡನಹಳ್ಳಿ ಗ್ರಾಮದ ಸ.ನಂ. 37/1 ವಗರಕಟ್ಟೆ ಕೆರೆಯಲ್ಲಿ ಅನುಮತಿ ಪಡೆಯದೇ ಮಣ್ಣು ಎತ್ತುವಳಿ ಮಾಡುತ್ತಿರುವ ಬಗ್ಗೆ ದೂರು ಬಂದ ಮೇರೆಗೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕಾರ್ಯವನ್ನು ಸ್ಥಗಿತಗೊಳಿಸಲಾಗಿ ದೆ. ಸಣ್ಣ ನೀರಾವರಿ ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕು ಎಂದು ತಿಳಿವಳಿಕೆ ನೀಡಲಾಗಿದೆ ಎಂದು ಗ್ರಾಮ ಆಡಳಿತಾಧಿಕಾರಿಎಂ.ವೈ.ಆರುಣ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT