ನಂಜನಗೂಡಿನ ಹದಿನಾರು ಗ್ರಾಮದ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವರು ಹಕ್ಕು ಚಲಾಯಿಸಿದರು
ಇಂಡಿಗನತ್ತ ಪ್ರಕರಣ ಬಿಟ್ಟು ಬೇರೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಕ್ಷೇತ್ರದಲ್ಲಿ ಇದು ಈವರೆಗಿನ ದಾಖಲೆಯ ಮತದಾನ
ಸಿ.ಟಿ.ಶಿಲ್ಪಾ ನಾಗ್ ಜಿಲ್ಲಾ ಚುನಾವಣಾಧಿಕಾರಿ
ಗಿರಿಜನರ ಉತ್ಸಾಹ
ಗಿರಿಜನರು ವಾಸವಾಗಿರುವ ಪ್ರದೇಶಗಳಲ್ಲೂ ಬಿರುಸಿನ ಮತದಾನವಾಯಿತು. ಬಿಳಿಗಿರಿರಂಗಬೆಟ್ಟದ ಒಂಬತ್ತು ಪೋಡುಗಳು ಬೇಡಗುಳಿಯ ಆರು ಹಾಡಿಗಳ ನಿವಾಸಿಗಳು ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದರು. ಅಧಿಕಾರಿಗಳು ಮತದಾನ ಮಾಡುವಂತೆ ಮನವೊಲಿಸಿದ್ದರು. ಹಾಗಾಗಿ ಎಲ್ಲ ಕಡೆಗಳಲ್ಲೂ ಗಿರಿಜನರು ಉತ್ಸಾಹದಿಂದಲೇ ಜನತಂತ್ರದ ಹಬ್ಬದಲ್ಲಿ ಪಾಲ್ಗೊಂಡರು.