ಕೊಳ್ಳೇಗಾಲ: ತಾಲ್ಲೂಕಿನ ಜಾಗೇರಿ ಗ್ರಾಮದ ಹಳೆಕೋಟೆಯಲ್ಲಿ ಟೊಮೆಟೊ ಬೆಳೆ ಜೊತೆ ಅಕ್ರಮವಾಗಿ ಗಾಂಜಾ ಗಿಡ ಬೆಳೆದ ವ್ಯಕ್ತಿಯನ್ನು ಗ್ರಾಮಾಂತರ ಪೊಲೀಸರು ಮಂಗಳವಾರ ಬಂಧಿಸಿದರು.
ತಾಲ್ಲೂಕಿನ ಜಾಗೇರಿ ಗ್ರಾಮದ ಹಳೇಕೋಟೆ ನಿವಾಸಿ ಪೂಮಾಲೆ ಬಂಧಿತ ಆರೋಪಿ. ಈತನಿಂದ ಸುಮಾರು 430 ಗ್ರಾಂ ಗಾಜಾಗಿಡ ವಶಡಿಸಿಕೊಂಡಿದ್ದಾರೆ.
ಈತನು ತನ್ನ ಜಮೀನುನಲ್ಲಿ ಟೊಮೆಟೊ ಹಾಗೂ ಮೆಣಸಿಕಾಯಿ ಜೊತೆ ಗಾಂಜಾಗಿಡ ಬೆಳೆದಿದ್ದ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ಸುಪ್ರೀತ್ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಗಾಂಜಾ ಗಿಡ ಸಮೇತ ಬಂಧಿಸಿದ್ದಾರೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.