ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವು, ತರಕಾರಿ ಧಾರಣೆ ಏರಿಳಿತ

ಈರುಳ್ಳಿ ಬೆಲೆಯಲ್ಲಿ ಮತ್ತೆ ₹ 10 ಕುಸಿತ, ಕಲ್ಲಂಗಡಿ, ಸಪೋಟಾ ಬೆಲೆ ಏರಿಕೆ
Last Updated 3 ಫೆಬ್ರುವರಿ 2020, 15:43 IST
ಅಕ್ಷರ ಗಾತ್ರ

ಚಾಮರಾಜನಗರ: ಎರಡು ವಾರಗಳಿಂದೀಚೆಗೆ ತರಕಾರಿ, ಹೂವುಗಳ ಧಾರಣೆಯಲ್ಲಿ ಕಂಡು ಬಂದಿದ್ದ ಏರಿಳಿತ ಈ ವಾರವೂ ಮುಂದುವರೆದಿದೆ.ಕೆಲವು ಹೂವು, ತರಕಾರಿಗಳ ಬೆಲೆಯಲ್ಲಿ ಕೊಂಚ ಏರಿಕೆಯಾದರೆ, ಇನ್ನೂ ಕೆಲವು ಸ್ವಲ್ಪ ಅಗ್ಗವಾಗಿವೆ.

ಹೂವುಗಳ ಪೈಕಿ ಒಂದು ಕೆ.ಜಿ. ಚೆಂಡು ಹೂವು, ಸೇವಂತಿಗೆ ತಲಾ ₹ 10, ಸುಗಂಧರಾಜ₹ 40, ಕಾಕಡ₹ 100ರಷ್ಟು ಇಳಿಕೆ ಕಂಡಿದೆ. ಕನಕಾಂಬರ₹ 100ಏರಿಕೆಯಾಗಿದೆ.

’ಮೂರು ವಾರಗಳಿಂದ ಹೂವುಗಳ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ.ಸೋಮವಾರ, ಶುಕ್ರವಾರದ ಪೂಜಾ ಕೈಂಕರ್ಯಗಳಿಗೆ ಮಾತ್ರ ಜನರು ಹೂವು ಖರೀದಿಗೆ ಮುಂದಾಗುತ್ತಿದ್ದಾರೆ. ಮುಂದಿನ ವಾರ ಮುಡುಕುತೊರೆ ಜಾತ್ರೆ ಇದೆ. ಈ ಸಂದರ್ಭದಲ್ಲಿ ಬೆಲೆ ಸ್ವಲ್ಪ ಹೆಚ್ಚಾಗಬಹುದು’ ಎಂದು ಬಿಡಿ ಹೂವುಗಳ ವ್ಯಾಪಾರಿ ಮಹೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತರಕಾರಿಗಳ ಪೈಕಿ, ಒಂದು ಕೆ.ಜಿ. ಅವರೆ, ಬೀನ್ಸ್‌, ಮರಗೆಣಸು, ಹಸಿ ಬಟಾಣಿಗಳ ಬೆಲೆ ₹ 10 ಹೆಚ್ಚಳವಾಗಿದೆ. ಟೊಮೆಟೊ ₹ 2, ಕ್ಯಾರೆಟ್‌, ಚಪ್ಪರದ ಬದನೆಕಾಯಿ ₹ 5 ಏರಿಕೆ ಕಂಡಿದೆ.

ಈರುಳ್ಳಿ ಮತ್ತೆ ಇಳಿಕೆ: ಈರುಳ್ಳಿ ಬೆಲೆಯಲ್ಲಿ ಈ ವಾರ ಮತ್ತೆ ₹ 10 ಇಳಿಕೆಯಾಗಿದೆ. ಕಳೆದ ವಾರ ಹಾಪ್‌ಕಾಮ್ಸ್‌ನಲ್ಲಿ ಒಂದು ಕೆ.ಜಿ. ಈರುಳ್ಳಿಗೆ ₹ 50ರ ಧಾರಣೆಯಿತ್ತು. ಸೋಮವಾರ ₹ 40 ಇತ್ತು.ಶುಂಠಿ ಬೆಲೆ ₹ 20 ಕಡಿಮೆಯಾಗಿದೆ. ಉಳಿದ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

‘ತರಕಾರಿಗಳಿಗೆ ಈಗ ಬೇಡಿಕೆ ಇದೆ. ನಾವು ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಮಾಡುವುದರಿಂದ ಅಲ್ಲಿನ ದರದಲ್ಲೇ ವ್ಯಾಪಾರ ಮಾಡುತ್ತೇವೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಹೇಳಿದರು.

ಕಲ್ಲಂಗಡಿ, ಸಪೋಟಾ ಏರಿಕೆ: ಬಿಸಿಲ ಝಳ ಹೆಚ್ಚುತ್ತಿದ್ದಂತೆಯೇ ಕೆಲವು ಹಣ್ಣುಗಳ ಬೆಲೆ ಹೆಚ್ಚಲು ಆರಂಭಿಸಿವೆ.ಕಲ್ಲಂಗಡಿ, ಪರಂಗಿ ಹಣ್ಣುಗಳ (ಪಪ್ಪಾಯ) ಒಂದು ಕೆ.ಜಿ. ಬೆಲೆ ₹ 5ರಷ್ಟು ಹೆಚ್ಚಾಗಿದ್ದರೆ, ಸಪೋಟಾ ₹ 10 ಏರಿಕೆಯಾಗಿದೆ. ಪಚ್ಚಬಾಳೆ ₹ 5 ಕಡಿಮೆಯಾಗಿದೆ.

ಮೊಟ್ಟೆ ಅಗ್ಗ, ಚಿಕನ್‌ ತುಟ್ಟಿ

ಮಾಂಸ ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ ಇಳಿಕೆಯಾಗಿದೆ. ಕಳೆದೆರಡು ವಾರದಿಂದ ಮೊಟ್ಟೆ ದರ ಇಳಿಯುತ್ತಿದೆ. ಹೋದ ವಾರ₹ 400 ಇದ್ದಂತಹ 100 ಮೊಟ್ಟೆಯ ಬೆಲೆ ಈ ವಾರ₹ 394 ಇದೆ.

ಮೈಸೂರು ಮಾರುಕಟ್ಟೆಗೆ ಅನುಗುಣವಾಗಿ ಬೆಲೆ ನಿರ್ಧಾರವಾಗುತ್ತದೆ. ಎರಡು ಅಥವಾ ಮೂರು ದಿನಗಳಿಗೊಮ್ಮೆ ಬೇಡಿಕೆ ನೋಡಿಕೊಂಡು ಬೆಲೆ ನಿಗದಿ ಮಾಡಲಾಗುತ್ತದೆ ಎನ್ನುತ್ತಾರೆ ಮೊಟ್ಟೆ ವ್ಯಾಪಾರಿಗಳು.

ಒಂದು ಕೆ.ಜಿ. ಚಿಕನ್‌ ಈ ವಾರ₹ 10 ಹೆಚ್ಚಳವಾಗಿದೆ. ಉಳಿದ ಎಲ್ಲ ಮಾಂಸಗಳ ದರ ಯಥಾಸ್ಥಿತಿ ಮುಂದುವರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT