ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರಿಗೆ ಕೊಕ್ ಕೊಟ್ಟು, ವಿಜಯೇಂದ್ರಗೆ ಸ್ಥಾನ ನೀಡಿದರೂ ಸಂತೋಷ: ಉಮೇಶ್ ಕತ್ತಿ

Last Updated 7 ಏಪ್ರಿಲ್ 2022, 7:55 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಹಿರಿಯ ಸಚಿವರ ಕೈ ಬಿಟ್ಟರೂ ಸರಿ, ವಿಜಯೇಂದ್ರ ಅವರಿಗೆ ಸ್ಥಾನ ಕೊಟ್ಟರೂ ಸರಿ.. ಸ್ವಾಗತಿಸುತ್ತೇನೆ ಎಂದು ಅರಣ್ಯ, ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ್ ಕತ್ತಿ ಅವರು ಗುರುವಾರ ತಿಳಿಸಿದರು.

ಬಂಡೀಪುರಕ್ಕೆ ಭೇಟಿ ಮಾಡಿ ಸಭೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ಹೈಕಮಾಂಡ್ ಗೆ ಬಿಟ್ಟ ವಿಚಾರ. ಹಿರಿಯರಿಗೆ ಕೊಕ್ ಕೊಟ್ಟು ಅವರನ್ನು ಪಕ್ಷ ಸಂಘಟನೆಗೆ ನಿಯೋಜಿಸಿದರೆ ಸ್ವಾಗತಿಸುತ್ತೇನೆ. ನಾನು ಒಂಬತ್ತು ಬಾರಿ ಶಾಸಕನಾಗಿದ್ದೇನೆ. ಹಿರಿಯರು ಪಕ್ಷ ಸಂಘಟಿಸಬೇಕು' ಎಂದು ಹೇಳಿದರು.

'ವಿಜಯೇಂದ್ರ ಅವರು ಮಾಜಿ ಮುಖ್ಯಮಂತ್ರಿ ಅವರ ಮಗನಾಗಿದ್ದು ಅಧಿಕಾರ ಸಿಕ್ಕರೆ ಪಕ್ಷ ಸಂಘಟನೆಗೆ ಬಲ ಹೆಚ್ಚಾಗುತ್ತದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

'ಬೆಳಗಾವಿ ಜಿಲ್ಲೆಯನ್ನು ಜನರ ಅನೂಕೂಲಕ್ಕಾಗಿ ವಿಭಜಿಸಬೇಕು. ಎಸಿ ಕಚೇರಿ ಇರುವ ಮೂರು ತಾಲ್ಲೂಕುಗಳನ್ನು ಜಿಲ್ಲಾಕೇಂದ್ರವನ್ನಾಗಿಸಬೇಕು. ಶೀಘ್ರವೇ ಮುಖ್ಯಮಂತ್ರಿ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಲಾಗುವುದು. ಇದಕ್ಕೆ ಎಲ್ಲಾ ಶಾಸಕರ ಸಹಮತವೂ ಇದೆ' ಎಂದರು.

'ಶೀಘ್ರ ಹುಲಿ ಸಂರಕ್ಷಿತ ಪ್ರದೇಶ: ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ವಿಚಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಅದು‌ ಮುಂದಕ್ಕೆ ಹೋಗಿದೆ. ಶೀಘ್ರದಲ್ಲಿ ಘೋಷಣೆಯಾಗಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT