ಚಾಮರಾಜನಗರ: ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ 19ರಿಂದ 21ರವರೆಗೆ ನಡೆಯಲಿರುವ ಶ್ರಾವಣ ಮಾಸದ ಎಣ್ಣೆ ಮಜ್ಜನ ಸೇವೆ ಮತ್ತು ಭೀಮನ ಅಮಾವಾಸ್ಯೆ ವಿಶೇಷ ಪೂಜೆಯಲ್ಲಿ ಭಾಗವಹಿಸಲು ಭಕ್ತರಿಗೆ ಈ ಬಾರಿ ಅವಕಾಶ ಇಲ್ಲ.

ಕೋವಿಡ್–19 ತಡೆಗೆ ಮುನ್ನೆಚ್ಚರಿಕೆ ಕ್ರಮವಾಗಿಮೂರು ದಿನಗಳ ಕಾಲ ದೇವಾಲಯಕ್ಕೆ ಸಾರ್ವಜನಿಕರು ಹಾಗೂ ಭಕ್ತರ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶ ಹೊರಡಿಸಿದ್ದಾರೆ.

ಭಾನುವಾರ (ಜುಲೈ 19) ಹಾಗೂ ಸೋಮವಾರ (ಜುಲೈ 20) ಮಲೆಮಹದೇಶ್ವರ ಸ್ವಾಮಿಯವರಿಗೆ ಎಣ್ಣೆ ಮಜ್ಜನ ಮತ್ತು ಭೀಮನ ಅಮಾವಾಸ್ಯೆಯ ವಿಶೇಷ ಪೂಜೆಗಳು ನಡೆಯಲಿವೆ. ಶ್ರಾವಣ ಮಾಸದ ಮೊದಲ ದಿನ ಅಂದರೆ ಜುಲೈ 21ರಂದು (ಮಂಗಳವಾರ) ಶ್ರೀಸ್ವಾಮಿಗೆ 108 ಕುಂಭಾಭಿಷೇಕ, ಸಹಸ್ರ ಅಭಿಷೇಕ ಪೂಜೆಗಳು ನಡೆಯಲಿವೆ.

ಪ್ರತಿ ವರ್ಷಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಬಂದು ಮಾದಪ್ಪನ ದರ್ಶನ ಮಾಡುತ್ತಾರೆ. ಸದ್ಯ, ಕೋವಿಡ್–19 ಪರಿಸ್ಥಿತಿ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ, ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರನ್ನು ನಿರ್ವಹಣೆ ಮಾಡುವುದು ಕಷ್ಟ. ಹಾಗಾಗಿ ಜಿಲ್ಲಾಡಳಿತ ಈ ನಿರ್ಧಾರಕ್ಕೆ ಬಂದಿದೆ.

ಮೂರು ದಿನಗಳಪೂಜೆಗಳನ್ನು ಧಾರ್ಮಿಕ ವಿಧಿವಿಧಾನಗಳಲ್ಲಿ ಶಾಸ್ತ್ರೋಕ್ತವಾಗಿ ದೇವಸ್ಥಾನದ ಒಳ ಆವರಣದಲ್ಲಿ ನಡೆಯಲಿವೆ.

‘ಸರ್ಕಾರಿ ಕೆಲಸದ ನಿಮಿತ್ತ ಬರುವ ಅಧಿಕಾರಿಗಳು ಮತ್ತು ಜನಪ್ರತಿಧಿಗಳನ್ನು ಬಿಟ್ಟು ಸಾರ್ವಜನಿಕರು ಹಾಗೂ ಭಕ್ತಾದಿಗಳಿಗೆ ಮೂರು ದಿನಗಳ ಕಾಲ ದೇವಾಲಯ ಹಾಗೂ ಪ್ರಾಧಿಕಾರದ ಆವರಣದಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.