ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜಿಲ್ಲೆಯಲ್ಲಿ 8.45 ಲಕ್ಷ ಮತದಾರರು

ವಿಧಾನಸಭಾ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿ ಪ್ರಕಟ
Last Updated 19 ಜನವರಿ 2022, 16:45 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದ್ದು, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 8,49,264 ಮತದಾರರಿದ್ದಾರೆ. ಈ ಪೈಕಿ 4,21,820 ಪುರುಷರು ಹಾಗೂ 4,27,380 ಮಹಿಳೆಯರು. ಇತರರು 64 ಮಂದಿ ಇದ್ದಾರೆ.

2022ರ ಜನವರಿ 1ಕ್ಕೆ ಅರ್ಹತಾ ದಿನಾಂಕ ನಿಗದಿಪಡಿಸಿ ಮತದಾರರ ಪಟ್ಟಿ ತಯಾರಿಸಲಾಗಿದೆ.

ಕ್ಷೇತ್ರವಾರು ಮತದಾರರು:ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,08,797 ಪುರುಷರು, 1,05,383 ಮಹಿಳೆಯರು, ಇತರರು 15 ಸೇರಿದಂತೆ ಒಟ್ಟು 2,14,187 ಮತದಾರರಿದ್ದಾರೆ.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,06,410 ಪುರುಷ ಮತದಾರರು, 1,08,709 ಮಹಿಳಾ ಮತದಾರರು, ಇತರರು 19 ಸೇರಿದಂತೆ 2,15,138 ಮತದಾರರಿದ್ದಾರೆ.

ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,03,135 ಪುರುಷ ಮತದಾರರು, 1,06,854 ಮಹಿಳೆಯರು, ಇತರರು 15 ಸೇರಿ 2,10,004 ಮತದಾರರಿದ್ದಾರೆ.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 1,03,486 ಪುರುಷರು, 1,06434 ಮಹಿಳೆಯರು ಹಾಗೂ 15 ಮಂದಿ ಇತರರು ಸೇರಿ 2,09,935 ಮತದಾರರಿದ್ದಾರೆ.

ಪದವೀಧರರ ಕ್ಷೇತ್ರ: 2021ರ ನವೆಂಬರ್‌ 1ಕ್ಕೆಅರ್ಹತಾ ದಿನಾಂಕ ನಿಗದಿಪಡಿಸಿ ಕರ್ನಾಟಕ ದಕ್ಷಿಣ ಪದವೀಧರರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ 11,626 ಮತದಾರರಿದ್ದಾರೆ. ಈ ಪೈಕಿ, 7,561 ಪುರುಷರು, 4,063 ಮಹಿಳೆಯರು, ಇತರರು ಇಬ್ಬರಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 2,341 (1,607 ಪುರುಷರು, 734 ಮಹಿಳೆಯರು), ಚಾಮರಾಜನಗರದಲ್ಲಿ 3,928 (2,474 ಪುರುಷರು, 1,452 ಮಹಿಳೆಯರು, ಇತರೆ ಇಬ್ಬರು), ಯಳಂದೂರಿನಲ್ಲಿ 1,269 (832 ಪುರುಷರು, 437 ಮಹಿಳೆಯರು), ಕೊಳ್ಳೇಗಾಲದಲ್ಲಿ 2,480 (1,513 ಪುರುಷರು, 967 ಮಹಿಳೆಯರು) ಹಾಗೂ ಹನೂರು ತಾಲ್ಲೂಕಿನಲ್ಲಿ 1,608 (1,135 ಪುರುಷರು, 473 ಮಹಿಳೆಯರು) ಮತದಾರರಿದ್ದಾರೆ.

ಪ್ರಕಟಿಸಲಾದ ಎರಡು ಮತದಾರರ ಪಟ್ಟಿಗಳ ಬಗ್ಗೆ ಜಿಲ್ಲಾಡಳಿತವು ಬುಧವಾರ ರಾಜಕೀಯ ಪಕ್ಷಗಳಿಗೆ ವಿವರಗಳನ್ನು ನೀಡಿತು.

ಚುನಾವಣಾ ತಹಶೀಲ್ದಾರ್ ವಿನೋದ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ವಿತರಿಸಲಾಯಿತು.

ಪಕ್ಷಗಳ ಪ್ರತಿನಿಧಿಗಳಾದ ಎಸ್. ಬಾಲಸುಬ್ರಹ್ಮಣ್ಯ, ಬ್ಯಾಡಮೂಡ್ಲು ಬಸವಣ್ಣ, ನಾಗರ್ಜುನ ಪೃಥ್ವಿ, ಎನ್. ಮುರುಗೇಶ್ ಮತ್ತು ಚುನಾವಣಾ ಶಾಖೆಯ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT