ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರ ಜನ್ಮದಿನ: ಅಭಿಮಾನಿಗಳಿಂದ ಆಚರಣೆ

Last Updated 7 ಆಗಸ್ಟ್ 2022, 7:46 IST
ಅಕ್ಷರ ಗಾತ್ರ

ಚಾಮರಾಜನಗರ: ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರ 76ನೇ ಜನ್ಮದಿನವನ್ನು ಅವರ ಅಭಿಮಾನಿಗಳು ವಿವಿಧ ಸೇವಾ ಕಾರ್ಯಗಳ ಮೂಲಕ ನಗರದಲ್ಲಿ ಆಚರಿಸಿದರು.

ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಗರದ ನ್ಯಾಯಾಲಯದ ರಸ್ತೆಯಲ್ಲಿರುವ ವಿಎಚ್‌ಪಿ ಪೂರ್ವ ಪ್ರಾಥಮಿಕ ಶಾಲೆಯ (ಪಾರ್ವತಿ ಬಾಲಾಶ್ರಮ) ಮಕ್ಕಳಿಂದ ಕೇಕ್‌ ಕತ್ತರಿಸಿ, ಬೆಳಗಿನ ಉಪಹಾರ ನೀಡಿ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಭಿಮಾನಿ ಬಳಗದ ಚಿಗುರು ಬಂಗಾರು ಅವರು, ಶ್ರೀನಿವಾಸ ಪ್ರಸಾದ್‌ ಜನ್ಮದಿನದ ಅಂಗವಾಗಿ ಇದೇ 25ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ವಸತಿ ರಹಿತರಿಗೆ ಉಪಾಹಾರ: ನಗರದ ವರ್ತಕರ ಭವನದ ಪಕ್ಕದಲ್ಲಿರುವ ವಸತಿ ರಹಿತ ನಿರಾಶ್ರಿತರ ಆಶ್ರಮದಲ್ಲಿ ಅಭಿಮಾನಿ ಬಳಗದವರು ವೃದ್ದರಿಂದ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದರು. ಅಲ್ಲಿಯೂ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಿದ್ದರು.

ಚಾಮುಲ್ ನಿರ್ದೇಶಕ, ಬಿಜೆಪಿ ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್ ಮಾತನಾಡಿ, ‘ಸಂಸದ ವಿ. ಶ್ರೀನಿವಾಸ ಪ್ರಸಾದ್ ಜಿಲ್ಲೆಗೆ ವಿಶಿಷ್ಟ ಕೊಡುಗೆಗಳನ್ನು ನೀಡಿದ್ದಾರೆ.ಆರು ಬಾರಿ ಸಂಸದರಾಗಿ, ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಎರಡು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕೇಂದ್ರ ಸಚಿವರಾಗಿ, ರಾಜ್ಯ ಕಂದಾಯ ಇಲಾಖೆ ಸಚಿವರಾಗಿಯೂ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ’ ಎಂದರು.

ಕಾಡಾ ಅಧ್ಯಕ್ಷ ನಿಜಗುಣರಾಜು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಸುಂದರ್‌. ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್‌, ಚಾಮುಲ್‌ ಅಧ್ಯಕ್ಷ ನಾಗೇಂದ್ರ, ಮುಖಂಡರಾದ ಅಮ್ಮನಪುರ ಮಲ್ಲೇಶ್‌, ರಾಮಚಂದ್ರ, ಕೂಡ್ಲೂರು ಹನುಮಂತ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಮನೋಜ್‌ ಪಟೇಲ್‌, ಬಾಲಸುಬ್ರಹ್ಮಣ್ಯ, ರಾಜಶೇಖರ್‌, ಚಿನ್ನಸ್ವಾಮಿ, ಆನಂದ್‌, ಪ್ರಸನ್ನ, ಮೋಹನ್‌ಕುಮಾರ್‌ ಎಚ್‌.ಶಿವಣ್ಣ, ಕೋಡಿಮೋಳೆ ರಾಜಶೇಖರ್‌,ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಬಸವಣ್ಣ, ಬಸವನಪುರ ರಾಜಶೇಖರ್, ಎಸ್‌ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ರಾಮಸಮುದ್ರ ವೇಣುಗೋಪಾಲ್,ರಾಮಸಮುದ್ರ ಶಕ್ತಿ ಕೇಂದ್ರದ ಅಧ್ಯಕ್ಷ ಭೃಂಗೇಶ್, ಆರ್.ವಿ.ಮಹದೇವಸ್ವಾಮಿ, ನಟರಾಜು, ಮೂಡಲಧ್ವನಿ ವೃದ್ದಾಶ್ರಮ ಟ್ರಸ್ಟ್ ಶಂಕರ್, ಅನಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT