‘ಜೀವ ಕೈಲಿಡಿದು ವಾಹನ ಚಲಾವಣೆ’
ಪ್ರತಿನಿತ್ಯ ಮುಳ್ಳೂರು ಬಳಿಯ ರಸ್ತೆಯ ಮಾರ್ಗವಾಗಿ ಮಕ್ಕಳನ್ನು ಶಾಲೆಗೆ ಕರೆದೊಯ್ಯಬೇಕು. ಬೈಕ್‌ನಲ್ಲಿ ಹೋಗುವಾಗ ಗುಂಡಿಗಳನ್ನು ತಪ್ಪಿಸಿ ವಾಹನ ಚಲಾಯಿಸುವುದು ಸವಾಲಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೆ ಅಪಘಾತವಾಗುವುದು ಖಚಿತ.ಮಕ್ಕಳನ್ನು ಶಾಲೆಗೆ ಬಿಡುವವರೆಗೂ ಜೀವವನ್ನು ಕೈಯಲ್ಲೇ ಹಿಡಿದುಕೊಂಡು ವಾಹನ ಚಲಾಯಿಸಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ಮುಳ್ಳೂರು ಗ್ರಾಮಸ್ಥ ಸೋಮಣ್ಣ ಉಪ್ಪಾರ್.