ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚಾಮರಾಜನಗರ | ಮಳೆಗಾಲ: ಈ ವರ್ಷವೂ ತಪ್ಪದ ಸಂಕಟ

ಹೊಸ ಬಡಾವಣೆಗಳಿಗಿಲ್ಲ ರಸ್ತೆ, ಚರಂಡಿ ಸೌಲಭ್ಯ; ನಾಗರಿಕರು ಸ್ಥಿತಿ ಶೋಚನೀಯ
Published : 26 ಮೇ 2025, 5:39 IST
Last Updated : 26 ಮೇ 2025, 5:39 IST
ಫಾಲೋ ಮಾಡಿ
Comments
ಚಾಮರಾಜನಗರದ ಪ್ರಗತಿನಗರದ ರಸ್ತೆಯ ದುಸ್ಥಿತಿ
ಚಾಮರಾಜನಗರದ ಪ್ರಗತಿನಗರದ ರಸ್ತೆಯ ದುಸ್ಥಿತಿ
ಕೊಳ್ಳೇಗಾಲ ರಸ್ತೆಯ ದುಸ್ಥಿತಿ
ಕೊಳ್ಳೇಗಾಲ ರಸ್ತೆಯ ದುಸ್ಥಿತಿ
ಚಾಮರಾಜನಗರದ ಬಸವ ಕಲ್ಯಾಣ ನಗರ ಬಡಾವಣೆಗೆ ರಸ್ತೆ ನಿರ್ಮಿಸಿಲ್ಲ, ಒಳಚರಂಡಿ ವ್ಯವಸ್ಥೆ ಸರಿ ಇಲ್ಲ. ಮೂಲಸೌಕರ್ಯ ಒದಗಿಸಲು ಜನಪ್ರತಿನಿಧಿಗಳಿಗೆ, ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪ್ರತಿ ಮಳೆಗಾಲದಲ್ಲಿ ಸಮಸ್ಯೆ ಸೃಷ್ಟಿಯಾಗಿ ನಾಗರಿಕರು ತೊಂದರೆ ಅನುಭವಿಸುತ್ತಾರೆ. ಮಕ್ಕಳು ಶಾಲಾ ಕಾಲೇಜುಗಳಿಗೆ ತೆರಳಲು, ಸ್ಥಳೀಯರು ನಿತ್ಯದ ಕೆಲಸ ಕಾರ್ಯಗಳಿಗೆ ಹೋಗಲು ಕಿರಿಕಿರಿ ಅನುಭವಿಸುತ್ತಾರೆ.
ರಾಜೇಂದ್ರ ಪ್ರಸಾದ್‌, ನಾಗರೀಕರು, ಚಾಮರಾಜನಗರ
ಬಸವೇಶ್ವರ ಬಡಾವಣೆಯ ಸ್ಥಿತಿ ತೀರಾ ಶೋಚನೀಯವಾಗಿದೆ. ಮಳೆಗಾಲದಲ್ಲಿ ಬಡಾವಣೆಯ ನಾಗರಿಕರು ರಸ್ತೆಗಳಲ್ಲಿ ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಮಕ್ಕಳನ್ನು ಶಾಲೆಗಳಿಗೆ ಕಳಿಸಲು, ಆಟವಾಡಲು ಬಿಡಲು ಭಯವಾಗುತ್ತದೆ. ಬಡಾವಣೆಗೆ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಪಿ.ವಸಂತ ಕುಮಾರಿ, ಸ್ಥಳೀಯರು
ಮಳೆ ಬಂದರೆ ರಸ್ತೆಯೆಲ್ಲ ಕೆಸರುಗದ್ದೆಯಾಗಿ ಬದಲಾಗುತ್ತದೆ.‌ ನಾಗರಿಕರಿಂದ ತೆರಿಗೆ ಕಟ್ಟಿಸಿಕೊಳ್ಳುವ ನಗರಸಭೆ ಕನಿಷ್ಠ ಮೂಲಸೌಕರ್ಯ ನೀಡದಿರುವುದು ಬೇಸರದ ಸಂಗತಿ. ನಗರಸಭೆ ಸಮಸ್ಯೆಗೆ ಸ್ಪಂದಿಸದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ.
ಪೂರ್ಣಿಮಾ, ಕೊಳ್ಳೇಗಾಲ
ಕಂದಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ನಂತರ ಚರಂಡಿಗಳು ಕೆಳಗೆ ಇಳಿದಿವೆ. ಸಕಾಲದಲ್ಲಿ ಚರಂಡಿ ಸ್ವಚ್ಛ ಮಾಡದೆ ಸೊಳ್ಳೆಗಳ ಆವಾಸಸ್ಥಾನವಾಗಿ ಬದಲಾಗಿದೆ. ಸಂಬಂಧಪಟ್ಟವರು ಚರಂಡಿ ಅಥವಾ ಡಕ್ ನಿರ್ಮಿಸಿ ನೈರ್ಮಲ್ಯ ಕಾಪಾಡಬೇಕು.
ರಮೇಶ್ ಕಂದಹಳ್ಳಿ ಯಳಂದೂರು
ಚಾಮರಾಜನಗರದ ಬುದ್ಧನಗರಕ್ಕೆ ಭಾಗಶಃ ರಸ್ತೆ ನಿರ್ಮಾಣ ಮಾಡಲಾಗಿದೆ. ನಗರೋತ್ಥಾನ ಯೋಜನೆಯಡಿ ಹೊಸ ಬಡಾವಣೆಗಳಿಗೆ ರಸ್ತೆ ನಿರ್ಮಾಣ ಮಾಡಲಾಗುವುದು. ತಾತ್ಕಾಲಿಕವಾಗಿ ರಸ್ತೆಗಳನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು.
ಎಸ್‌.ಸುರೇಶ್‌, ನಗರಸಭೆ ಅಧ್ಯಕ್ಷ
ಮಳೆಗಾಲ ಮುಂಚಿತವಾಗಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಿಲ್ಲ. ಮಳೆಗಾಲದಲ್ಲಿ ಬಡಾವಣೆಗಳಲ್ಲಿ ನೀರು ನಿಂತು ಜನ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜತೆಗೆ ಚರಂಡಿಯಲ್ಲಿ ಹೂಳು ತೆಗೆಸಬೇಕು. ಸ್ಥಳೀಯ ಆಡಳಿತ ಇದರ ಬಗ್ಗೆ ಗಮನ ಹರಿಸಬೇಕು.
ನಾಗೇಂದ್ರ, ಸಂತೇಮರಹಳ್ಳಿ
ಚಾಮರಾಜನಗರದ ಬುದ್ಧನಗರಕ್ಕೆ ಭಾಗಶಃ ರಸ್ತೆ ನಿರ್ಮಾಣ ಮಾಡಲಾಗಿದೆ. ನಗರೋತ್ಥಾನ ಯೋಜನೆಯಡಿ ಹೊಸ ಬಡಾವಣೆಗಳಿಗೆ ರಸ್ತೆ ನಿರ್ಮಾಣ ಮಾಡಲಾಗುವುದು. ತಾತ್ಕಾಲಿಕವಾಗಿ ರಸ್ತೆಗಳನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು.
ಎಸ್‌.ಸುರೇಶ್‌, ನಗರಸಭೆ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT