ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಬೈಲೂರು ಗ್ರಾಮ ಪಂಚಾಯಿತಿಯ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನೂತನ ಮಾರ್ಗದ ಸಾರಿಗೆ ಬಸ್ಗೆ ಭಾನುವಾರ ಶಾಸಕ ಎಂ.ಆರ್. ಮಂಜುನಾಥ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಈ ಭಾಗದ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಇಲ್ಲದೆ ಸಮಸ್ಯೆ ಎದುರಿಸುತ್ತಿರುವುದನ್ನು ಮನಗಂಡು ಶಾಲೆಗೆ ಹೊರಡುವ ಸಮಯಕ್ಕೆ ಮುಂಜಾನೆ 8.30 ಕ್ಕೆ ಹಾಗೂ ಶಾಲೆ ಬಿಡುವ ಸಮಯ ಸಾಯಂಕಾಲ 4.15ಕ್ಕೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ದಿನ ನೂತನ ಬಸ್ ಮಾರ್ಗಕ್ಕೆ ಚಾಲನೆ ನೀಡಿದ್ದೇನೆ. ವಿದ್ಯಾರ್ಥಿಗಳು ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಅವರಿಗೆ ಬೆನ್ನೆಲುಬಾಗಿ ನಾನು ಕೆಲಸ ಮಾಡುತ್ತೇನೆ ಎಂದರು.

ರಸ್ತೆ ಕಾಮಗಾರಿಗೆ ಭೂಮಿಪೂಜೆ: ಬೈಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಣಸೆ ಪಾಳ್ಯ ಅಡ್ಡ ರಸ್ತೆಯಲ್ಲಿ ₹2.20 ಕೋಟಿ ವೆಚ್ಚ ರಸ್ತೆ ಕಾಮಗಾರಿ ಶಾಸಕ ಎಂ.ಆರ್ ಮಂಜುನಾಥ್ ಭೂಮಿ ಪೂಜೆ ನೇರವೇರಿಸಿದರು..

ನಂತರ ಮಾತನಾಡಿದ ಅವರು, ಈ ಭಾಗದ ಜನರು ರಸ್ತೆ ಮತ್ತು ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಲೋಕೋಪಯೋಗಿ ಯೋಜನೆಯಡಿ ಇಂದು ರಸ್ತೆ ಕಾಮಗಾರಿ ಭೂಮಿ ಪೂಜೆಯನ್ನು ಮಾಡಲಾಗಿದ್ದು, ರಸ್ತೆ ಕಾಮಗಾರಿ ಮಾಡುವಾಗ ಗ್ರಾಮಸ್ಥರು ಗುತ್ತಿಗೆದಾರರಿಗೆ ಸಹಕಾರ ನೀಡಬೇಕು. ಗುಣಮಟ್ಟದ ಡಾಂಬರೀಕರಣ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.

ಹನೂರು ಪಟ್ಟಣದ ಹೊರವಲಯದಲ್ಲಿ ಸಾರಿಗೆ ಬಸ್ ಡಿಪೊ ನಿರ್ಮಾಣ ಮಾಡಲು ₹9 ಕೋಟಿ ಅನುದಾನದ ಅವಶ್ಯಕತೆ ಇದ್ದು, ಸದ್ಯ ₹4.5 ಕೋಟಿ ಹಣವಿದೆ. ಉಳಿದ ಅನುದಾನಕ್ಕೆ ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದ್ದು ಆದಷ್ಟು ಬೇಗ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು. ತದನಂತರ ತಾಲ್ಲೂಕಿನಲ್ಲಿ ಸರ್ಕಾರಿ ಬಸ್ಗಳ ಕೊರತೆ ಕಡಿಮೆಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕೊಳ್ಳೇಗಾಲ ಬಸ್ ಡಿಪೊ ವ್ಯವಸ್ಥಾಪಕರಾದ ಬೊಗಪ್ಪ ನಾಯಕ, ಲೋಕೋಪಯೋಗಿ ಇಲಾಖೆಯ ಎಇ ಸುರೇಂದ್ರ, ಚಿನ್ನರಾಜ್, ಕನಕರಾಜು ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಮಹದೇವಸ್ವಾಮಿ, ಜಿ.ಎಂ ಮಾದೇಶ್, ಕೃಷ್ಣಮೂರ್ತಿ, ಜಡೇರುದ್ರ ಸ್ವಾಮಿ, ಪರಶಿವ, ನಂಜಪ್ಪ, ಕುಸು ಕೃಷ್ಣಮೂರ್ತಿ, ನಾಗೇಂದ್ರ, ಮುತ್ತುಸ್ವಾಮಿ, ಪೆರಿಯಾಸ್ವಾಮಿ, ಪಿ.ಜಿ ಪಾಳ್ಯ ಸಿದ್ದರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.