ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಯಳಂದೂರು: ಶುದ್ಧ ನೀರಿಗೆ ಮಹಿಳೆಯರ ಪರದಾಟ

ಪುರಾಣಿಪೋಡು: ಕೆಟ್ಟು ನಿಂತ ಸೋಲಾರ್ ಘಟಕ, ಚಾಲೂ ಆಗದ ಪಂಪ್‌
Last Updated 19 ಅಕ್ಟೋಬರ್ 2021, 16:35 IST
ಅಕ್ಷರ ಗಾತ್ರ

ಯಳಂದೂರು:ನೀರು ಕಾಣದ ಸಿಮೆಂಟ್ ತೊಂಬೆಗಳು, ಕೆಟ್ಟು ನಿಂತ ಕೈಪಂಪ್‌ಗಳು, ಸೌರ ಘಟಕದ ಸುತ್ತಲೂ ಬೆಳೆದು ನಿಂತ ಪೊದೆ, ನಿರ್ವಹಣೆ ಕಾಣದೆ ಕೆಲಸ ನಿಲ್ಲಿಸಿದ ಸೌರ ಪಂಪ್‌... ಈ ಎಲ್ಲ ಕಾರಣಗಳಿಂದ ಬಿಆರ್‌ಟಿ ಅರಣ್ಯದಲ್ಲಿರುವ ಪುರಾಣಿಪೋಡಿನ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರುಗಗನ ಕುಸುಮವಾಗಿದೆ. ಹೀಗಾಗಿ, ದೈನಂದಿನ ಬಳಕೆಗೆಮಳೆ ನೀರನ್ನು ಬಳಸಬೇಕಾದ ತುರ್ತುಹಾಡಿ ಜನರಿಗೆ ಎದುರಾಗಿದೆ.

ಪುರಾಣಿಪೋಡಿನ ಮಹಿಳೆಯರು ಹಳ್ಳಗಳಿಗೆ ಇಳಿದು ಮಳೆ ನೀರನ್ನುತುಂಬಿಸಿಕೊಳ್ಳುತ್ತಿರುವ ದೃಶ್ಯ ಈಗ ಸಾಮಾನ್ಯವಾಗಿದೆ. ಕೊಲ್ಲಿಗಳ ಜಲ ಮೂಲಗಳಿಂದಲೇ ಮನೆ ಮತ್ತು ನೀರು ಜಾನುವಾರುಗಳಿಗೆಪೂರೈಸಬೇಕಿದೆ.

ಪೋಡಿನಲ್ಲಿ 220ಕ್ಕೂ ಹೆಚ್ಚು ಕುಟುಂಬಗಳಿವೆ. 400ಕ್ಕೂ ಹೆಚ್ಚುಮತದಾರರು ಇದ್ದಾರೆ. ಬಹುತೇಕ ಚದುರಿದಂತೆ ಮನೆಗಳನ್ನು ನಿರ್ಮಿಸಲಾಗಿದ್ದು, ಜನವಸತಿಗಳು ದೂರದಲ್ಲಿ ಇದ್ದು, ಗುಣಮಟ್ಟದ ರಸ್ತೆಗಳೂ ಇಲ್ಲ. ಮನೆಗಳ ನಡುವೆಕೃಷಿ ಭೂಮಿ ಇದ್ದು, ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ದಾರಿ ಬದಿಗಳಲ್ಲಿ ತಂತಿಗಳನ್ನುಬಿಗಿಯಲಾಗಿದೆ.

ಹಾಡಿಯಲ್ಲಿ ಮೂರ್ನಾಲ್ಕು ಸೌರ ವಲಯ ರೂಪಿಸಿ, ಮನೆ ಬಳಕೆಗೆ ಸೌರಶಕ್ತಿ ಪಂಪ್ ಅಳವಡಿಸಿನೀರು ಪೂರೈಸಲಾಗುತ್ತಿತ್ತು. ಆದರೆ, ನಿರ್ವಹಣೆ ಇಲ್ಲದೆ ಸೋಲಾರ್ ಘಟಕಗಳು ಕೆಲಸನಿಲ್ಲಿಸಿವೆ. ನಲ್ಲಿಗಳಲ್ಲಿ ನೀರು ನಿಂತು ತಿಂಗಳಾಗಿದೆ. 10ಕ್ಕಿಂತ ಹೆಚ್ಚು ಕೊಳವೆ ಬಾವಿಗಳಿದ್ದರೂ ಪ್ರಯೋಜನ ಇಲ್ಲ. ಹಲವು ಕೆಟ್ಟು ನಿಂತಿವೆ. ಸದ್ಯ ಎರಡು ಮಾತ್ರ ಕಾರ್ಯನಿರ್ವಹಿಸುತ್ತಿವೆ.

'ಮಳೆ ನೀರೇ ಮನೆ ಬಳಕೆಗೆ ಆಧಾರವಾಗಿದೆ. ಶುದ್ಧ ನೀರಿಗೆ 1 ಕಿಲೋ ಮೀಟರ್ ದೂರ ಹೋಗಬೇಕು. ಸಂಜೆ ಮತ್ತು ಮುಂಜಾನೆ ವನ್ಯಜೀವಿಗಳ ಕಾಟ, ಬಟ್ಟೆ ತೊಳೆಯಲು,ಸ್ನಾನಕ್ಕೆ ಅಗತ್ಯವಾದ ನೀರನ್ನು ದೂರದ ಸ್ಥಳಗಳಿಗೆ ತೆರಳಿ ಸಂಗ್ರಹ ಮಾಡಬೇಕಿದೆ’ ಎಂದು
ಮಾದಮ್ಮ ಅವರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.

‘ಕೆಲವು ಮನೆಗಳ ನಡುವೆ ಸಿಸಿ ರಸ್ತೆ ನಿರ್ಮಿಸಿಲ್ಲ. ಅನುದಾನ ಸಿಗದ ನೆಪದಲ್ಲಿಮನೆಗಳನ್ನು ಸಂಪೂರ್ಣವಾಗಿ ನಿರ್ಮಿಸಲು ಸಾಧ್ಯವಾಗಿಲ್ಲ. ಇದರಿಂದ ಹೆಂಚು ಮತ್ತು ಗೋಡೆಮಳೆಗೆ ಮುರಿದು ಬೀಳುತ್ತಿದೆ. ಹಾಡಿ ಮಂದಿಗೆ ಗುಡಿಸಲೇ ಗತಿ’ ಎನ್ನುತ್ತಾರೆ ರಂಗಮ್ಮ.

ತಕ್ಷಣ ಕ್ರಮ: ಇಒ ಭರವಸೆ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಆರ್‌.ಉಮೇಶ್‌ ಅವರು, ‘ಸೋಲಾರ್ ಘಟಕಗಳ ದುರಸ್ತಿಗೆ ಕ್ರಮ ನೀಡಲಾಗುವುದು. ಸೋಲಿಗರ ಹಾಡಿಯ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಲಾಗುವುದು. ಈ ಬಗ್ಗೆ ಬಿಳಿಗಿರಿರಂಗನಬೆಟ್ಟ ಗ್ರಾಮಪಂಚಾಯಿತಿಯಿಂದ ಮಾಹಿತಿ ಪಡೆದು, ಶೀಘ್ರ ಶುದ್ಧ ನೀರಿನ ಪೂರೈಕೆಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT